ಭಟ್ಕಳ: ಹೊರ ನಾಡ ಕನ್ನಡಿಗರಂತೆ ಹೊರ ದೇಶಗಳ ಕನ್ನಡಿಗರೊಡನೆ ವ್ಯವಸ್ಥಿತವಾದದ್ದೊಂದು ಭಾಷಾ-ಸಾಂಸ್ಕೃತಿಕ ಸಂಬಂಧವನ್ನು ಸಮಂಜಸವಾಗಿ ಬೆಸೆದು ಗಟ್ಟಿಗೊಳಿಸುವ ಉದ್ದೇಶ ಕನ್ನಡಿಗರಲ್ಲಿದೆ.
ಯುಗಾಂಡದಲ್ಲಿ ಭಾರತದ 22 ರಾಜ್ಯದ ಸ್ಪೀಕರ್ ಹಾಗೂ ಪಾರ್ಲಿಮೆಂಟ್ ಸದಸ್ಯರ ತಂಡ ಬಂದಿದ್ದು, ಅದರಲ್ಲಿ ಕರ್ನಾಟಕದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಎಲ್ ಹನಮಂತಯ್ಯ ಭಾಗವಹಿಸಿದ್ದರು. ಇವರುಗಳಿಗೆ ಕರ್ನಾಟಕ ಸಂಘ ಯುಗಾಂಡವೂ ಅವರಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇನ್ನು, ಕಾರ್ಯಕ್ರಮದ ಜೊತೆ ಉತ್ತರ ಕರ್ನಾಟಕದಲ್ಲಿ ಆದ ನೆರೆ ಪೀಡಿತ ಸರ್ಕಾರಿ ಶಾಲೆಗಳಿಗೆ ಕರ್ನಾಟಕ ಸಂಘದಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಯುವ ಬ್ರಿಗೇಡ್ ಜನಶಕ್ತಿ ಕೇಂದ್ರಕ್ಕೆ ನೀಡಲು ಕರ್ನಾಟಕ ಸಂಘ ಯುಗಾಂಡ ತೀರ್ಮಾನಿಸಿತು. ನಂತರ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡದವರನ್ನು ನೋಡಿ ನನಗೆ ಸಂತೋಷವಾಯಿತು ಎಂದು ಹೇಳಿದರು. ಕನ್ನಡದವರು ನಮಗಾಗಿ ಇಟ್ಟುಕೊಂಡ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಸಂಘ ಯುಗಾಂಡದ ಪರವಾಗಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಯುಗಾಂಡದ ಅಧ್ಯಕ್ಷರಾದ ಲೀಲಾ ಲಚ್ಮಯ್ಯ ಸಿದ್ದನಮನೆ, ಶಾಲಿನಿ ತ್ರಿಶೂರ್, ಸ್ವಪ್ನಾ ವಿಜಯ, ರೇಖಾ ಶ್ರೀಕಾಂತ್, ಕ್ರಿತಿನ್ ಬೋಪಣ್ಣಾ, ವಿಜಯ ಮಹೇಂದ್ರಕರ್, ಅರುಣ್ ಎಂ ಎಸ್, ಉಮೇಶ್ ಕುಮಾರ, ಅನಿಲಗೌಡ, ಕೇಶವಗೌಡ ಉಪಸ್ಥಿತರಿದ್ದರು.