ETV Bharat / state

ತಾಯಿಯ ಚಿತೆಗೆ ಬೆಂಕಿ ಇಟ್ಟು ಪ್ರಾಣ ಬಿಟ್ಟ ಮಗ... ಕಾರವಾರದಲ್ಲಿ ಹೃದಯ ವಿದ್ರಾವಕ ಘಟನೆ

ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಏಕಾಏಕಿ ಎದೆನೋವು ಕಾಣಿಸಿಕೊಂಡು‌ ಮಗನೂ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ಧರದಲ್ಲಿ ನಡೆದಿದೆ.

ಮೃತಪಟ್ಟ ತಾಯಿ-ಮಗ
author img

By

Published : Feb 20, 2019, 12:56 PM IST

ಕಾರವಾರ: ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಮಗನೂ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ಧರದಲ್ಲಿ ನಡೆದಿದೆ.

ಮೃತಪಟ್ಟ ತಾಯಿ-ಮಗ
ಸಿದ್ದರದ ಮಂಜುನಾಥ ಆತ್ಮಾರಾಮ ಕೊಳಂಬಕರ್ (49) ಮೃತಪಟ್ಟ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಈತನ ತಾಯಿ ಸಾವಿತ್ರಿ ಕೊಳಂಬಕರ್ ಮಂಗಳವಾರ ಮುಂಜಾನೆ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ತಾಯಿಯ ಒಬ್ಬನೇ ಮಗನಾಗಿದ್ದ ಮಂಜುನಾಥ್, ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬಳಿಕ ಚಿತೆಗೆ ಬೆಂಕಿ ಇಟ್ಟಿದ್ದ. ಅಷ್ಟರಲ್ಲಿ ಆತನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು‌ ಕೆಳಗೆ ಬಿದ್ದಿದ್ದ. ತಕ್ಷಣ ಆತನನ್ನು ಸಿದ್ಧರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಯಿತು. ಅಲ್ಲದೆ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಿಯೇ ಆತ ಕೊನೆಯುಸಿರೆಳೆದಿದ್ದ.

ಈ ಕುರಿತು ಮಂಜುನಾಥ ಸ್ನೇಹಿತ ರಾಜೇಶ ನಾಯ್ಕ ಮಾತನಾಡಿ, ಸ್ನೇಹ ಜೀವಿಯಾಗಿದ್ದ ಮಂಜುನಾಥನ ಸಾವು ತೀವ್ರ ದುಃಖ ತಂದಿದೆ. ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಎದೆನೋವು ಎಂದು ಕೆಳಗೆ ಬಿದ್ದ. ದುಃಖ ತಾಳಲಾಗದೆ ಹೀಗಾಗಿರಬಹುದು. ಆದರೆ ತಕ್ಷಣ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದೆವಾದರು ಪ್ರಯೋಜನವಾಗಿಲ್ಲ. ಇದಕ್ಕೆ ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬರದಿರುವುದೂ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೃತ ಮಂಜುನಾಥಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾರವಾರ: ಸಂಬಂಧಿಸಿದ ವಿಸ್ಯುವಲ್ ಮತ್ತು ಸ್ಕ್ರೀಪ್ಟ್ ಎಫ್ ಟಿ ಪಿಯಲ್ಲಿ ಕಳುಹಿಸಲಾಗಿದೆ. ಇದರಲ್ಲಿ ಬೈಟ್ ಇದೆ ಸರ್

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.