ETV Bharat / state

ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ

ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಯೋಜನೆ ಲಾಭ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ, ಈ ಕುರಿತು ಜಾಗೃತಿಗೆ ಮುಂದಾಗಿರುವ ಮಹಿಳಾ ಸದಸ್ಯರನ್ನೊಳಗೊಂಡ ಸ್ಕೇಟಿಂಗ್ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದೆ.

Skating Yatra from Kashmir to Kanyakumari
ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ
author img

By

Published : Dec 7, 2022, 6:35 PM IST

Updated : Dec 8, 2022, 8:19 AM IST

ಕಾರವಾರ: ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಯೋಜನೆ ಲಾಭ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ. ಈ ಕುರಿತು ಜಾಗೃತಿಗೆ ಮುಂದಾಗಿರುವ ಮಹಿಳಾ ಸದಸ್ಯರನ್ನೊಳಗೊಂಡ ಸ್ಕೇಟಿಂಗ್ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದೆ.

ದೇಶದಲ್ಲಿನ ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ 20 ರೋಲರ್ ಸ್ಕೇಟರ್​ಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅತುಲ್ಯ ಭಾರತ ರೋಲರ್ ಸ್ಕೇಟಿಂಗ್​​ ಸಂಕಲ್ಪಿತ ಯಾತ್ರೆಯೊಂದನ್ನು ಹಮ್ಮಿಕೊಳ್ಳಲಾಗಿದೆ.

10 ಜನ ಮಹಿಳೆಯರು ಹಾಗೂ 10 ಜನ ಪುರಷರನ್ನೊಳಗೊಂಡ ತಂಡ ಈಗಾಗಲೇ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ 5 ಸಾವಿರಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಕರ್ನಾಟಕದ ಕಾರವಾರ ಪ್ರವೇಶಿಸಿದೆ. ಸೋನಿ ಚೌರಾಸಿಯಾ ಅವರ ನೇತೃತ್ವದಲ್ಲಿ ಹೊರಟಿರುವ ರೋಲರ್ ಸ್ಕೇಟರ್​​​ಗಳು ರಸ್ತೆ ಮಧ್ಯೆ ಸಿಗುವ ಹಳ್ಳಿಗಳಿಗೆ ತೆರಳಿ ಜನರಲ್ಲಿ ರಕ್ತಹೀನತೆ ಮುಕ್ತ, ಅಪೌಷ್ಠಿಕತೆ ಮುಕ್ತ ಭಾರತದ ಬಗ್ಗೆ, ಮಹಿಳಾ ಶಿಕ್ಷಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ

ಇನ್ನು ಯಾತ್ರೆ 30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗಲು ಸಂಕಲ್ಪ ಕೈಗೊಳ್ಳಲಾಗಿದೆ. ದಾರಿ ಉದ್ದಕ್ಕೂ ಜಾಗೃತಿಗಾಗಿ ಕರ ಪತ್ರಗಳನ್ನು ಹಂಚಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸ್ಕೇಟಿಂಗ್ ಮೂಲಕವೇ ತೆರಳುವ ತಂಡವೂ ಸಂಜೆ ವಸತಿ ಇದ್ದು, ಬೆಳಗ್ಗೆ ಪುನಃ ಹೊರಡುತ್ತದೆ.

ಧಾರ್ಮಿಕ, ಐತಿಹಾಸಿಕ ಪರಂಪರೆಯ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಿ ಇಂತಹ ಪ್ರದೇಶಗಳಲ್ಲಿ ಪರಿಸರ ಜಾಗೃತಿಗಾಗಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಇವರ ಕಾರ್ಯಕ್ಕೆ ಅಖಿಲ ಭಾರತೀಯ ಗ್ರಾಹಕರ ಪಂಚಾಯತ್ ಕರ್ನಾಟಕ ಪ್ರಾಂತ್ಯ ಸಂಘಟನೆಯಿಂದ ನೆರವು ನೀಡಲಾಗುತ್ತಿದೆ.

ಇದನ್ನೂ ಓದಿ:ಹುತಾತ್ಮ ಯೋಧನ ಸ್ಮಾರಕಕ್ಕೂ ಸಂಚಕಾರ ಆರೋಪ.. ನೆಮ್ಮದಿ ಕಳೆದುಕೊಂಡ ಕುಟುಂಬ

Last Updated : Dec 8, 2022, 8:19 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.