ETV Bharat / state

ಸತತ ಸೋಲಿನ ಬಳಿಕ ಗೆಲುವಿನ ನಗೆ ಬೀರಿದ ಭೀಮಣ್ಣ: ಕಾಗೇರಿಗೆ ಹೀನಾಯ ಸೋಲು

ಬಿಜೆಪಿ ಭದ್ರಕೋಟೆಯಾಗಿರುವ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ

sirsi-assembly-election-results
ಸತತ ಸೋಲಿನ ಬಳಿಕ ಗೆಲುವಿನ ನಗೆ ಬೀರಿದ ಭೀಮಣ್ಣ ನಾಯ್ಕ: ಕಾಗೇರಿಗೆ ಹೀನಾಯ ಸೋಲು
author img

By

Published : May 13, 2023, 2:29 PM IST

ಕಾರವಾರ: ಸೋಲಿಲ್ಲದ ಸರದಾರ ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ‌ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ 9017 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವಿಧಾನ ಸಭಾ ಅಧ್ಯಕ್ಷರಾಗಿದ್ದ, 6 ಬಾರಿ ಶಾಕರಾಗಿ ಅಧಿಕಾರ ಅನುಭವಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ 66,639 ಮತಗಳನ್ನು ಪಡೆದಿದ್ದರೇ ಭೀಮಣ್ಣ ನಾಯ್ಕ 75,656 ಮತಗಳನ್ನು ಪಡೆದು ಐತಿಹಾಸಿಕ ಗೆಲುವು ಕಂಡಿದ್ದಾರೆ.

13 ವರ್ಷ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶಿರಸಿಯ ಭೀಮಣ್ಣ ನಾಯ್ಕ, 2018ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ - ಸಿದ್ದಾಪುರ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ, 2019ರ ಉಪ ಚುನಾವಣೆಯಲ್ಲಿ ಯಲ್ಲಾಪುರ - ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ಧ, 2020ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ವಿರುದ್ಧ ಸೋಲು ಅನುಭವಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯರಾಗಿ ಒಮ್ಮೆ ಸ್ಪರ್ಧಿಸಿ ಗೆಲುವು ಕಂಡಿದ್ದ ಭೀಮಣ್ಣ, ತದನಂತರ ಚುನಾವಣೆಗಳಲ್ಲಿ ಕಂಡಿದ್ದೆಲ್ಲವೂ ಸೋಲೆ. ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಭೀಮಣ್ಣ, ಸೋತರೂ ಸುಮ್ಮನೆ ಕೂರದೆ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದರು.

ಜನರೊಡನೆ ಒಡನಾಟ ಹೊಂದಿದ್ದ ಭೀಮಣ್ಣ ಪ್ರಮುಖ ನಾಯಕರುಗಳು ಸೇರಿದಂತೆ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರಿಗೂ ಕೂಡ ಚಿರಪರಿಚಿತರು. ಮೂಲ ಕೃಷಿಕರಾಗಿರುವ ಭೀಮಣ್ಣ, ಸದ್ಯ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಟ್ಟಾ ಅನುಯಾಯಿ ಆಗಿದ್ದ ಅವರ ಅಕ್ಕನನ್ನು ಬಂಗಾರಪ್ಪನವರಿಗೆ ವಿವಾಹ ಮಾಡಿಕೊಟ್ಟಿದ್ದರು.

ಉತ್ತರ ಕನ್ನಡದಲ್ಲಿ ಬಂಗಾರಪ್ಪನವರ ಹಿನ್ನೆಲೆಯಲ್ಲಿ ರಾಜಕೀಯ ಮಾಡಿದವರೆಂದರೆ ಅದು ಭೀಮಣ್ಣ ನಾಯ್ಕ. ಬಂಗಾರಪ್ಪನವರೊಂದಿಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಇವರು, ಬಳಿಕ ಸಮಾಜವಾದಿ ಪಾರ್ಟಿಗೆ ಸೇರಿ, ಪುನಃ ಕಾಂಗ್ರೆಸ್ ಸೇರಿದ್ದರು. ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದ ಭೀಮಣ್ಣ, ಬಂಗಾರಪ್ಪ ಪಕ್ಷ ಬದಲಿಸಿದ್ದರೂ, ಬಂಗಾರಪ್ಪನವರ ಪುತ್ರರು ಬಿಜೆಪಿ- ಕಾಂಗ್ರೆಸ್ ಸೇರಿದರೂ ತಾವು ಕಾಂಗ್ರೆಸ್ ಬಿಡದೇ ಉತ್ತರ ಕನ್ನಡದಲ್ಲಿ ನೇತೃತ್ವ ವಹಿಸಿಕೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಪ್ರಚಂಡ ಗೆಲುವು: ಡಿಕೆಶಿ ಭಾವುಕ ನುಡಿ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.