ETV Bharat / state

ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ಆಹಾರ ಕಿಟ್ ವಿತರಿಸಿದ ಸಚಿವ ಹೆಬ್ಬಾರ್ - ರೇಷನ್ ಕಿಟ್ ವಿತರಣೆ

ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಕಿಟ್ ತಲುಪಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ..

shivaram-hebbar-distributes-food-kit
shivaram-hebbar-distributes-food-kit
author img

By

Published : Jun 28, 2021, 3:35 PM IST

ಕಾರವಾರ : ಕೊರೊನಾ ಲಾಕ್​ಡೌನ್​​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಯಲ್ಲಾಪುರ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಸುಮಾರು 63 ಸಾವಿರ ರೇಷನ್ ಕಿಟ್​ಗಳನ್ನು ವಿತರಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಕಿರವತ್ತಿ, ಹುಣಶೆಟ್ಟಿಕೊಪ್ಪ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ಕೋವಿಡ್​ನಿಂದ ತೊಂದರೆಗೊಳಗಾದ ಬಡ ಕುಟುಂಬದವರಿಗೆ ಸ್ವಂತ ಖರ್ಚಿನಲ್ಲಿ ಅವರು ಕಿಟ್ ವಿತರಣೆಗೆ ಮುಂದಾಗಿದ್ದಾರೆ.

ಸಚಿವ ಶಿವರಾಮ್ ಹೆಬ್ಬಾರ್​​ರಿಂದ ಆಹಾರ ಕಿಟ್ ವಿತರಣೆ

ಈ ಕಿಟ್ ಜೋಳ, ಗೋಧಿ ಹಿಟ್ಟು, ಅಡಿಗೆ ಎಣ್ಣೆ, ಸಕ್ಕರೆ, ಉಪ್ಪು, ಟೀ ಪುಡಿ ಒಳಗೊಂಡಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬದವರಿಗೆ ಇಂದು ಸಾಂಕೇತವಾಗಿ ನೀಡಿದ್ದಾರೆ. ಕಳೆದ ಬಾರಿಯೂ ಸಂಕಷ್ಟದಲ್ಲಿದ್ದ ಜನರಿಗೆ ಅಲ್ಪ ಸಹಾಯ ಮಾಡಿದ್ದೆ. ಈ ಬಾರಿ ಕೂಡ ಮತ್ತೆ ಕೋವಿಡ್ ಲಾಕ್​ಡೌನ್​ನಿಂದಾಗಿ ತೊಂದರೆಗೊಳಗಾದ ಕಾರಣ ಮತ್ತೆ ರೇಷನ್ ಕಿಟ್ ವಿತರಿಸಲಾಗಿದೆ.

ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಕಿಟ್ ತಲುಪಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.