ETV Bharat / state

ಎಸ್​ಎಸ್​ಎಲ್​ಸಿ: ಕಾರವಾರ, ಶಿರಸಿ ಜಿಲ್ಲೆಯ 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್​

author img

By

Published : May 19, 2022, 3:04 PM IST

ಉತ್ತರ ಕನ್ನಡದ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿದ್ದಾರೆ.

shirasi-karawara
ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್​

ಕಾರವಾರ: ಉತ್ತರ ಕನ್ನಡದ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿ ಹೊರ ಹೊಮ್ಮಿದ್ದಾರೆ. ಕುಮಟಾ ಕಲಭಾಗದ ಸಿವಿಎಸ್​ಕೆ ಹೈಸ್ಕೂಲ್​ನ ಮೇಘನಾ ವಿಷ್ಣುಭಟ್, ಕಾರ್ತಿಕ್ ಭಟ್, ದೀಕ್ಷಾ ನಾಯ್ಕ ಹಾಗೂ ಶಿರಸಿ ಸೇಂಟ್ ಅಂಥೋನಿ ಹೈಸ್ಕೂಲ್​ನ ಸರ್ಮಿನಾ ಶೇಖ್, ಸರ್ಕಾರಿ ಮಾರಿಕಾಂಬಾ ಪಿ.ಯು ಕಾಲೇಜಿನ ಚಿರಾಜ್ ಮಹೇಶ್ ನಾಯ್ಕ ಹಾಗೂ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಕನ್ನಿಕಾ ಪರಮೇಶ್ವರಿ ಹೆಗಡೆ ಈ ಸಾಧನೆ ಮಾಡಿದ್ದಾರೆ.

ಮಗನಿಗೆ ತಂದೆ - ತಾಯಿಯೇ ಶಿಕ್ಷಕರು: 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್​ ಗಳಿಸಿರುವ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಚಿರಾಗ್ ಅವರ ತಂದೆ- ತಾಯಿ ಇದೇ ಮಾರಿಕಾಂಬಾ ಪ್ರೌಢಶಾಲೆಯ ಶಿಕ್ಷಕರಾಗಿದ್ದಾರೆ. ಶಿಕ್ಷಕರಾಗಿರುವ ಮಹೇಶ್​ ನಾಯ್ಕ ಹಾಗೂ ಹೇಮಾವತಿ ನಾಯ್ಕ ಅವರ ಪುತ್ರ ಚಿರಾಗ್​ ಸರ್ಕಾರಿ ಶಾಲೆಯಲ್ಲಿ ಕಲಿತು ರ‍್ಯಾಂಕ್​ ಪಡೆದುಕೊಂಡಿದ್ದಾರೆ.

ಇನ್ನು ಇದೇ ಶಾಲೆಯ ದೀಕ್ಷಾ ರಾಜು ನಾಯ್ಕ ಎಂಬ ವಿದ್ಯಾರ್ಥಿನಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್​ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.

ಕೃಷಿಕನ ಮಗಳು ರಾಜ್ಯಕ್ಕೆ ಪ್ರಥಮ: ಶಿರಸಿ ತಾಲೂಕಿನ ಬಿಸ್ಲಕೊಪ್ಪ ಸೂರ್ಯನಾರಾಯಣ ಶಾಲೆಯ ವಿದ್ಯಾರ್ಥಿನಿ ಕನ್ನಿಕಾಪರಮೇಶ್ವರಿ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಇವರ ತಂದೆ ಕೃಷಿಕರಾಗಿದ್ದು, ಗ್ರಾಮೀಣ ಪ್ರತಿಭೆಯಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಓದಿ: SSLC Result-2022: ಶೇ. 90.29 ವಿದ್ಯಾರ್ಥಿನಿಯರು ಪಾಸ್​, 145 ಮಕ್ಕಳಿಗೆ 625ಕ್ಕೆ 625 ಅಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.