ETV Bharat / state

ಧರೆಗುರುಳಿದ ಬೃಹತ್ ಆಲದ ಮರ: ಶಿರಸಿ-ಹುಬ್ಬಳ್ಳಿ ರಸ್ತೆ ಸಂಚಾರ ಬಂದ್

ಬೃಹತ್ ಆಲದ ಮರ ಬಿದ್ದು, ಶಿರಸಿ-ಹುಬ್ಬಳ್ಳಿ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಸಂಪರ್ಕ ಕೂಡ ಬಂದ್ ಆಗಿದೆ.

Shirasi-Hubli Road Traffic Band
ಧರೆಗುರುಳಿದ ಬೃಹತ್ ಆಲದ ಮರ
author img

By

Published : Aug 26, 2020, 10:10 PM IST

ಶಿರಸಿ(ಉತ್ತರ ಕನ್ನಡ): ಶಿರಸಿ ತಾಲೂಕಿನ ಬಿಸಲಕೊಪ್ಪ ಕ್ರಾಸ್ ಬಳಿಯಿರುವ ಅನಾದಿ ಕಾಲದ ಬೃಹತ್ ಆಲದ ಮರ ಬಿದ್ದು, ಶಿರಸಿ-ಹುಬ್ಬಳ್ಳಿ ಹೆದ್ದಾರಿ ಸಂಪರ್ಕ ಕಡಿತವಾಗಿದೆ.

ಇಂದು ಸಂಜೆ ಮರ ಧರೆಗುರುಳಿದ್ದು, ಕಳೆದ ಎರಡು ಗಂಟೆಯಿಂದ ಶಿರಸಿ-ಹುಬ್ಬಳ್ಳಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಬಿಸಲಕೊಪ್ಪದ ಆಯುರ್ವೇದ ವೈದ್ಯ ಸುಬ್ರಮಣ್ಯ ಶಾಸ್ತ್ರಿ ಇವರ ಮನೆ ಎದುರಿನ ಭಾರಿ ಗಾತ್ರದ ಆಲದ ಮರ ಏಕಾಏಕಿ ಧರೆಗುರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಧರೆಗುರುಳಿದ ಬೃಹತ್ ಆಲದ ಮರ

ನಿತ್ಯ ಆ ಸ್ಥಳದಲ್ಲಿ ಸಾಕಷ್ಟು ಜನ ಇರುತ್ತಿದ್ದರು. ಸಾವಿರಾರು ವಾಹನ ಓಡಾಡುವ ಸ್ಥಳವೂ ಇದಾಗಿದ್ದು, ಆದರೆ ಮರ ಬೀಳುವ ವೇಳೆ ಯಾರೂ ಅಲ್ಲಿರಲಿಲ್ಲ. ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ.

ಮರ ಇಡೀ ರಸ್ತೆಯನ್ನು ಆಕ್ರಮಿಸಿದ್ದರಿಂದ ಬೈಕ್ ಸೇರಿದಂತೆ ಎಲ್ಲಾ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.