ETV Bharat / state

ಬುದ್ಧಿಮಾಂದ್ಯರಿಗೆ ಕ್ಷೌರ, ಅಸಹಾಯಕರಿಗೆ ಬಟ್ಟೆ: ಮಹಾತ್ಮನ ಜಯಂತಿ ದಿನ ಮಾನವೀಯ ಕಾರ್ಯ - ಕಾರವಾರದ ಜನಶಕ್ತಿವೇದಿಕೆಯಿಂದ ಮಾನವೀಯ ಕಾರ್ಯ

ಆಸ್ಪತ್ರೆಗಳಲ್ಲಿರುವ ಅಸಹಾಯಕರು ಹಾಗೂ ಬುದ್ಧಿಮಾಂದ್ಯ ರೋಗಿಗಳಿಗೆ ಉಚಿತವಾಗಿ ಕ್ಷೌರ ಮಾಡಿಸುವ ಜತೆಗೆ ಹೊಸ ಬಟ್ಟೆ ನೀಡಿ ಸಂಘಟನೆಯೊಂದು ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಿಸಿದೆ.

ಗಾಂಧಿ ಜಯಂತಿಯಲ್ಲೊಂದು ಮಾನವೀಯ ಕಾರ್ಯ..!
author img

By

Published : Oct 2, 2019, 6:51 PM IST

ಕಾರವಾರ: ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸಹಾಯಕರು ಹಾಗೂ ಬುದ್ಧಿಮಾಂದ್ಯ ರೋಗಿಗಳಿಗೆ ಉಚಿತವಾಗಿ ಕ್ಷೌರ ಮಾಡಿಸುವ ಜತೆಗೆ ಹೊಸ ಬಟ್ಟೆ ನೀಡಿ ಸಂಘಟನೆಯೊಂದು ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಿಸಿದೆ.

ಗಾಂಧಿ ಜಯಂತಿ ದಿನ ಮಾನವೀಯ ಕಾರ್ಯ

ಕಾರವಾರದ ಜನಶಕ್ತಿ ವೇದಿಕೆ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆಯಲ್ಲಿ ಹೇರ್ ಕಟಿಂಗ್, ಶೇವಿಂಗ್ ಮಾಡದೆ ಇದ್ದ ಜನರನ್ನು ಹುಡುಕಿ ಅಂತವರಿಗೆ ಆಸ್ಪತ್ರೆಯಲ್ಲಿಯೇ ಕ್ಷೌರ ಮಾಡಿಸಿದ್ರು. ಸುಮಾರು 10ಕ್ಕೂ ಹೆಚ್ಚು ರೋಗಿಗಗಳನ್ನು ಕರೆತಂದು ಕ್ಷೌರ, ಸ್ನಾನ ಮಾಡಿಸಿ, ಹೊಸ ಬಟ್ಟೆ ನೀಡಿ ಮಹಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.

ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಮ್ಮ ವೇದಿಕೆಯು ನಿರಂತರವಾಗಿ ಮಾನವೀಯ ಕಾರ್ಯ ಮಾಡುತ್ತಾ ಬರುತ್ತಿದೆ. ಇದರಿಂದ ಅಸಹಾಯಕರಿಗೂ ಉತ್ತಮ ಬದುಕು ಕಟ್ಟಿಕೊಡಲು ಸಮಾಜ ಜತೆಗಿದೆ ಎಂಬ ಭಾವನೆ ಬರಲು ಸಾಧ್ಯವಿದೆ. ಸರ್ಕಾರ ಕ್ಷೌರ ಭಾಗ್ಯ ಜಾರಿಗೆ ತಂದಿದೆಯಾದ್ರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತು ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿದರು.

Intro:ಕಾರವಾರ: ಹಲವು ದಿನಗಳಿಂದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸಾಹಯಕರು, ಮಂದಬುದ್ದಿಯ ರೋಗಿಗಳು ಸೇರಿದಂತೆ ಇನ್ನಿತರರಿಗೆ ಆಸ್ಪತ್ರೆಯಲ್ಲಿಯೇ ಉಚಿತವಾಗಿ ಕ್ಷೌರ ಮಾಡಿಸುವ ಜತೆಗೆ ಹೊಸ ಬಟ್ಟೆ ನೀಡಿ ಸಂಘಟನೆಯೊಂದು ವಿಶಿಷ್ಟವಾಗಿ ಗಾಂಧಿಜಯಂತಿ ಆಚರಣೆ ಮಾಡಿದೆ.
ಹೌದು, ಕಾರವಾರದ ಜನಶಕ್ತಿವೇದಿಕೆಯು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿಯಾಗಿದೆ. ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅಸಾಯಕರು, ಬುದ್ದಿಮಾಂದ್ಯರು, ಯಾರು ಇಲ್ಲದ ನಿರ್ಗತಿಕ ರೋಗಿಗಗಳು ಹೇರ್ ಕಟಿಂಗ್ ಮಾಡಿಸುವುದು ಕಡಿಮೆ. ಇಂತವರನ್ನು ಗುರಿಯಾಗಿಸಿಕೊಂಡು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಜನಶಕ್ತಿ ವೇದಿಕೆಯೂ ಈ ಭಾರಿ ಕೂಡ ಅಸಾಹಯಕರ ನೆರವಿಗೆ ಮುಂದಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಹೆರ್ ಕಟಿಂಗ್, ಶೆವಿಂಗ್ ಮಾಡದೆ ಇದ್ದವರನ್ನು ಹುಡುಕಿ ಅಂತವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಕ್ಷೌರ ಮಾಡಿಸಲಾಯಿತು. ಸುಮಾರು ೧೦ ಕ್ಕೂ ಹೆಚ್ಚು ರೋಗಿಗಗಳಿಗೆ ಈ ವೇಳೆ ಜನಶಕ್ತಿ ವೇದಿಕೆ ಕಾರ್ಯಕರ್ತರು ಕರೆತಂದು ಕ್ಷೌರ ಹಾಗೂ ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿ ಮಹಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.
ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಜನಶಕ್ತಿ ವೇದಿಕೆಯು ನಿರಂತರವಾಗಿ ಇಂತಹದೊಂದು ಕಾರ್ಯ ಮಾಡುತ್ತಿದೆ. ಇದರಿಂದ ಅಸಹಾಯಕರಿಗೂ ಉತ್ತಮ ಬದುಕು ಕಟ್ಟಿಕೊಡಲು ಸಮಾಜ ಇದೆ ಎಂಬ ಭಾವನೆ ಅವರಲ್ಲಿ ಬರಲು ಸಾಧ್ಯವಿದೆ. ಸರ್ಕಾರ ಕ್ಷೌರ ಭಾಗ್ಯ ಹೊರತಂದಿತ್ತಾದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತು ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿದರು.

Body:ಕ

Conclusion:ಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.