ETV Bharat / state

ಕರಾವಳಿಯಲ್ಲಿ ಸದ್ದಿಲ್ಲದೇ ಸರಣಿ ಕಳ್ಳತನ ಭೇದಿಸಿದ ಪೊಲೀಸರು; 18 ಪ್ರಕರಣಗಳ ಜಾಡು ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಕಳೆದ ಲಾಕ್‌ಡೌನ್ ಅವಧಿಗಿಂತ ಈ ಬಾರಿ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಈ ಕಳ್ಳತನ ಪ್ರರಕಣಗಳಲ್ಲಿ ಭಾಗಿಯಾಗಿದ್ದ ಒಟ್ಟು 7 ಮಂದಿ ಯುವಕರನ್ನು ಪೊಲೀಸರು ಗೋಕರ್ಣದಲ್ಲಿ ಬಂಧಿಸಿದ್ದಾರೆ.

karwar
18 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
author img

By

Published : Jun 30, 2021, 9:19 PM IST

ಕಾರವಾರ: ಕಳೆದೊಂದು ವರ್ಷದಿಂದ ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಅದರಲ್ಲೂ ಲಾಕ್‌ಡೌನ್ ಅವಧಿಯಲ್ಲಿಯೇ ಹೆಚ್ಚಿನ ಕಳ್ಳತನ ನಡೆದಿರುವುದು ಸಾರ್ವಜನಿಕರ ನಿದ್ದೆಗೆಡಿಸಿತ್ತು. ಹೀಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಳ್ಳರ ಪತ್ತೆಗೆ ಮುಂದಾಗಿದ್ದ ಪೊಲೀಸರು ಸದ್ದಿಲ್ಲದೇ ಸರಣಿ ಕಳ್ಳತನ ನಡೆಸಿ ಮೋಜು ಮಸ್ತಿ ಮಾಡಿಕೊಂಡಿದ್ದ ಗ್ಯಾಂಗ್​ ಅನ್ನು ಸದೆ ಬಡಿದಿದ್ದಾರೆ.

18 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಕಳೆದ ಲಾಕ್‌ಡೌನ್ ಅವಧಿಗಿಂತ ಈ ಬಾರಿ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಒಂದು ವರ್ಷದ ಕಳೆದರೂ ಸಹ ಕಳ್ಳರ ಸುಳಿವು ಸಿಗದಿರುವುದು ಪೊಲೀಸರ ನಿದ್ದೆಗೆಡಿಸಿತ್ತು. ಈ ನಿಟ್ಟಿನಲ್ಲಿ ಶತಾಯಗತಾಯ ಕಳ್ಳರನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದು, ಕೊನೆಗೂ ಸರಣಿ ಕಳ್ಳತನ ನಡೆಸುತ್ತಿದ್ದ ತಂಡ ಗೋಕರ್ಣದಲ್ಲಿ ಸಿಕ್ಕಿಬಿದ್ದಿದೆ. ಪ್ಲ್ಯಾನ್ ರೂಪಿಸಿಕೊಂಡು ಮನೆಗಳ್ಳತನ ಮಾಡಿಕೊಂಡಿದ್ದ 7 ಯುವಕರ ತಂಡವನ್ನ ಪೊಲೀಸರು ಸದೆಬಡಿದಿದ್ದಾರೆ.

ಗೋಕರ್ಣ ಪೊಲೀಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್ ಅಂದರ್ ಆಗಿದ್ದು, ಇದುವರೆಗೆ ಅವರು ದೋಚಿದ್ದ ವಸ್ತುಗಳನ್ನ ಸಹ ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ ಪ್ರಶಾಂತ, ಹರ್ಷ, ಶ್ರೀಕಾಂತ, ನಿಹಾಲ್, ಸಂದೀಪ, ಗಣೇಶ ಮತ್ತು ರಾಹುಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯರಾಗಿದ್ದು, ಅಶೋಕ ಹೆಸರಿನ ಎಂಟನೇ ಆರೋಪಿ ಕದ್ದ ವಸ್ತುಗಳನ್ನ ಮಾರಾಟ ಮಾಡಿ ಹಣ ತರುತ್ತಿದ್ದ. ಅಂಕೋಲಾ ಮೂಲದವರಾದ ಈ ಯುವಕರು ಅಂಕೋಲಾದಲ್ಲಿ 11, ಗೋಕರ್ಣದಲ್ಲಿ 5 ಹಾಗೂ ಕಾರವಾರದಲ್ಲಿ 2 ಕಡೆ ಕಳ್ಳತನ ನಡೆಸಿದ್ದರು. ಈ ತಂಡ ಸಿಕ್ಕಿ ಬೀಳುವುದರೊಂದಿಗೆ ಕಳೆದ ಒಂದು ವರ್ಷದಿಂದ ಪತ್ತೆಯಾಗದೇ ಉಳಿದಿದ್ದ ಬರೋಬ್ಬರಿ 18 ಕಳ್ಳತನ‌ ಪ್ರಕರಣಗಳು ಖುಲಾಸೆಯಾದಂತಾಗಿದೆ.

ಇನ್ನು ಈ ಏಳು ಮಂದಿ ಯುವಕರದ್ದು ವಿದ್ಯಾವಂತ ಕಳ್ಳರ ತಂಡವಾಗಿದ್ದು, ಎಲ್ಲರೂ ಐಟಿಐ ಓದಿದವರಾಗಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಸೂಕ್ತ ಕೆಲಸ ಸಿಗದೇ ಇದ್ದಾಗ ದಿನನಿತ್ಯದ ಖರ್ಚು ಹಾಗೂ ಮೋಜು ಮಸ್ತಿ ಮಾಡಲು ಮೊದಲು ಶಾಲೆಗಳಲ್ಲಿ ಸಿಲಿಂಡರ್ ಇತ್ಯಾದಿ ಕಳ್ಳತನ ಮಾಡುವುದನ್ನು ಪ್ರಾರಂಭಿಸಿದ್ದರು‌.‌ ಬಳಿಕ ಖಾಲಿ ಇದ್ದ ಮನೆಗಳನ್ನ ಹುಡುಕಿ ರಾತ್ರಿ ವೇಳೆಯಲ್ಲಿ ಕನ್ನ ಹಾಕಿ ಕೈಗೆ ಸಿಕ್ಕಿದ್ದನ್ನ ಕದ್ದೊಯ್ಯುತ್ತಿದ್ದರು.

ಬಂಧಿತರಿಂದ 350 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ ಆಭರಣಗಳು, 5 ಗ್ಯಾಸ್ ಸಿಲಿಂಡರ್​​, ಒಂದು ಏರ್‌ಗನ್, 3 ಬೈಕ್‌ಗಳು, 8 ಮೊಬೈಲ್ ಸೇರಿ ಒಟ್ಟೂ 19 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.

ಇನ್ನು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದ ಸರಣಿ ಕಳ್ಳರ ತಂಡವನ್ನು ಸೆರೆ ಹಿಡಿದಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ವಿದ್ಯಾವಂತ ಯುವಕರು ಕಳ್ಳತನದ ಹಾದಿ ಹಿಡಿದಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.