ETV Bharat / state

ಅರಣ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.71 ಲಕ್ಷ ಮೌಲ್ಯದ ಗೋವಾ ಮದ್ಯ ವಶ ...

author img

By

Published : Sep 5, 2020, 10:32 PM IST

ಗೋವಾ ಮದ್ಯವನ್ನು ಅರಣ್ಯ ಪ್ರದೇಶದಲ್ಲಿ ಹೊತ್ತು ತರುವುದನ್ನು ಗಮನಿಸಿದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 1.71 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.

karwar
ಅಕ್ರಮ ಗೋವಾ ಮದ್ಯ ವಶ

ಕಾರವಾರ: ಅಕ್ರಮ ಗೋವಾ ಮದ್ಯವನ್ನು ಅರಣ್ಯ ಪ್ರದೇಶದಲ್ಲಿ ಹೊತ್ತು ತರುವುದನ್ನು ಗಮನಿಸಿದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 1.71 ಲಕ್ಷ ಮೌಲ್ಯದ ಮದ್ಯ ಜಪ್ತಿಪಡಿಸಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಹೋಟೆಗಾಳಿ ಭೀಮಕೋಲ್​ನಲ್ಲಿ ನಡೆದಿದೆ.

ಕಾರವಾರದ ಸಮೀರ ಮಾಳ್ಸೇಕರ್, ವಿಜಯ ಪಡವಳಕರ್ ಹಾಗೂ ರಮಾಕಾಂತ ಮಾಳ್ಸೇಕರ್ ಎಂಬ ಆರೋಪಿಗಳು ಗೋವಾದ 176 ಲೀ. ಮದ್ಯ ಹಾಗೂ 198 ಲೀ. ಗೋವಾದ ಸ್ಪೆಷಲ್ ಪಾಮ್ ಫೆನ್ನಿಯನ್ನು ತಲೆಹೊರೆಯ ಮೇಲೆ ಹೊತ್ತುಕೊಂಡು ಕಾಡು ದಾರಿಯಲ್ಲಿ ಬರುತ್ತಿದ್ದರು.

ಈ ವೇಳೆ ಅಬಕಾರಿ ಅಧಿಕಾರಿಗಳನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದು, ಮದ್ಯವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ, ರಕ್ಷಕರಾದ ಅಶೋಕ, ಎಂ.ಎ.ನಾಯ್ಕ, ಹೇಮಚಂದ್ರ, ವಾಹನ ಚಾಲಕ ಪರೇಶ್ ದೇಸಾಯಿ ಈ ದಾಳಿಯಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.