ETV Bharat / state

ಕಾರವಾರ: ₹11 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ವಶಪಡಿಸಿಕೊಂಡ ₹11 ಲಕ್ಷ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಪೊಲೀಸರು ನಾಶಪಡಿಸಿದರು.

drugs destroyed
ಮಾದಕ ವಸ್ತು ನಾಶ
author img

By

Published : Mar 26, 2023, 8:46 AM IST

ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿರುವುದು..

ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 47 ಕೆ.ಜಿ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಮೇರೆಗೆ ಅಂಕೋಲಾದಲ್ಲಿ ನಾಶಪಡಿಸಲಾಯಿತು. ತಾಲೂಕಿನ ಬೊಗ್ರಿಬೈಲ್‌ನ ಕೆನರಾ ಐಎಂಎ(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿ ಅವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸಮ್ಮುಖದಲ್ಲಿ ಶನಿವಾರ ಮಾದಕ ವಸ್ತುಗಳನ್ನು ಸುಟ್ಟು ಹಾಕಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ಶೇಖರಣೆ ಸಂಬಂಧ 10-12 ಪ್ರಕರಣಗಳಿದ್ದವು. ಪೊಲೀಸರ ತಂಡ ರಚಿಸಿ ಗಾಂಜಾ ಸಾಗಾಟ ಹಾಗೂ ಸೇವನೆ ಮಾಡುವವರ ಮಾಹಿತಿ ಕಲೆಹಾಕಿ ಅಂಥವರನ್ನು ಮಟ್ಟಹಾಕುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಸ್​ಪಿ ಎಚ್ಚರಿಕೆ ನೀಡಿದ್ದಾರೆ.

ಮೂವರ ವಿರುದ್ಧ ದೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ವಿಚಾರಣೆಗೆ ಒಳಪಟ್ಟಿದ್ದ ತಾಲೂಕಿನ ನೆಲೆಮಾವ್​​ ಗಣಪತಿ ಭಟ್ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಇರಬಸಪ್ಪ ವಾಲಿಕಾರ ಹುಬ್ಬಳ್ಳಿ, ಚಂದ್ರಶೇಖರ ಪೂಜಾರ ಧಾರವಾಡ, ಶಿವಶಂಕರಪ್ಪ ಕುರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರೊಂದಿಗೆ ಜಿ.ಬಿ.ಭಟ್ ಅವರ ಹಣದ ವ್ಯವಹಾರ ಇತ್ತು. ಇವರಿಂದ ಹಣ ಪಡೆದಿದ್ದ ಜಿ.ಬಿ.ಭಟ್ ಎಂಬವರು ಶ್ಯಾಮ್ ಭಟ್ ಎನ್ನುವವರಿಗೆ ನೀಡಿದ್ದರು. ಅವರು ಹಣ ಕೊಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಆರೋಪಿಗಳು ಹಣಕ್ಕಾಗಿ ಪೀಡಿಸುತ್ತಿದ್ದು, ಮಾ.10ರಂದು ಮೂವರು ಮನೆಯ ಬಳಿ ಬಂದು ಅವಾಚ್ಯ ಶಬ್ದದಿಂದ ನಿಂದಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದರು. ಅದೇ ಒತ್ತಡದಲ್ಲಿದ್ದ ಜಿ.ಬಿ.ಭಟ್ ಶುಕ್ರವಾರ ತಾಲೂಕಿನ ನಡಿಮನೆ ಬಸ್ ನಿಲ್ದಾಣ ಬಳಿಯಿರುವ ಸಂಬಂಧಿಕರಿಗೆ ಸೇರಿದ ತೋಟದ ಮನೆಯಲ್ಲಿ ಇರಬಸಪ್ಪ ವಾಲಿಕಾರ ಹುಬ್ಬಳ್ಳಿ, ಚಂದ್ರಶೇಖರ ಪೂಜಾರ ಧಾರವಾಡ, ಶಿವಶಂಕರಪ್ಪ ಕುರಿ ಅವರಿಗೆ ಕೊಡಬೇಕಾದ ಹಣ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಆದರೆ ಅವರು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದು ಡೆತ್​ ನೋಟ್​​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಕ್ರಮ ಮದ್ಯ ಸಾಗಾಟ-ಆರೋಪಿ ಬಂಧನ: ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಅನಧಿಕೃತವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಓರ್ವನನ್ನು ಚಿತ್ತಾಕುಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮುಡಗೇರಿ ಮೂಲದ ನಿಜಾಮುದ್ದೀನ ಬದ್ರುದ್ದೀನ ಖಾತಿಬಾ ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧಿತನಿಂದ 36,300 ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಯುವಕ ಆತ್ಮಹತ್ಯೆ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ತಾಲೂಕಿನ ಹನುಮಾನ್ ನಗರದಲ್ಲಿ ನಡೆದಿದೆ. ಈಶ್ವರ ಮಂಜುನಾಥ ನಾಯ್ಕ(24) ಮೃತ ಯುವಕ. ಈತ ಹನುಮಂತ ನಗರದ ಬೇಕರಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಬೆಳಗ್ಗೆ 10 ಗಂಟೆಗೂ ಮುನ್ನವೇ ಬೇಕರಿಯ ಮತ್ತೊಬ್ಬ ನೌಕರನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸ್ವಲ್ಪ ಸಮಯದ ನಂತರ ಬೇಕರಿಗೆ ಬರುವುದಾಗಿ ತಿಳಿಸಿದ್ದನಂತೆ. ಬಳಿಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ನಗರ ಠಾಣೆಯಲ್ಲಿ ಮೃತನ ಮಾವ ಮಾದೇವ ನಾಯ್ಕ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಎಎಸ್​​ಐ ಗೋಪಾಲ್ ನಾಯಕ ತನಿಖೆ ನಡೆಸುತ್ತಿದ್ದಾರೆ.

ಬಾಲಕ ನಾಪತ್ತೆ- ಮಾಹಿತಿ ನೀಡಲು ಸೂಚನೆ: ಕಾರವಾರ ನಗರದ ಹಳೆ ಸಿವಿಲ್ ಆಸ್ಪತ್ರೆ ಸಮೀಪದ ನಿವಾಸಿ ಸುಲೋಕ ಚಂಡೇಕರ್(15) ಎಂಬ ಯುವಕ ಕಾಣೆಯಾಗಿದ್ದು, ಈತನ ಮಾಹಿತಿ ದೊರೆತಲ್ಲಿ ನಗರ ಠಾಣೆಗೆ ನೀಡಲು ಕೋರಿದೆ. ಕಾಣೆಯಾಗಿರುವ ಬಾಲಕನ ತಂದೆ, ನಿವೃತ್ತ ಸೈನಿಕ ಸುಭಾಷ ಚಂಡೇಕರ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾ.18ರಂದು ಸಂಜೆ 5.45ರ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದಾನೆ. ಆತ ಅಪ್ರಾಪ್ತ ವಯಸ್ಸಿನವನಾಗಿರುವುದರಿಂದ ಯಾರಾದರೂ ಪುಸಲಾಯಿಸಿ ಎಲ್ಲಿಗಾದರೂ ಕರೆದುಕೊಂಡು ಹೋಗಿರಬಹುದಾದ ಸಾಧ್ಯತೆ ಇದೆ. ಸ್ಥಳೀಯವಾಗಿ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ವಿಚಾಸಿದರೂ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಕಾಣೆಯಾದ ಮಗನನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಾಲಕನ ವಿವರ: ಎತ್ತರ 175 ಸೆಂ.ಮೀ. ಇದ್ದು, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಉದ್ದನೆಯ ಮುಖದ ಬಿಳಿ ಬಣ್ಣದ ಈತ ಮನೆಯಿಂದ ಹೋಗುವಾಗ ಸಿಮೆಂಟ್ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದ. ಕನ್ನಡ, ಕೊಂಕಣಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಮಾತನಾಡುತ್ತಾನೆ. ಈ ಬಾಲಕನ ಕುರಿತು ಮಾಹಿತಿ ದೊರೆತಲ್ಲಿ ಕಾರವಾರ ನಗರ ಪೊಲೀಸ್ ಠಾಣೆ ನಿರೀಕ್ಷಕರು (94808 05230, 08382- 226 333), ಉಪ ನಿರೀಕ್ಷಕರು (94808 05245) ಅಥವಾ ಕಂಟ್ರೋಲ್ ರೂಂ: 08382- 226 550ಗೆ ಸಂಪರ್ಕಿಸಲು ಕೋರಿದೆ.

ಇದನ್ನೂ ಓದಿ: ಕಾರವಾರದಲ್ಲಿ 24.8 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.