ETV Bharat / state

ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್ : ಹೆಸರಿಗೆ ಮಾತ್ರ ಬಯಲು ಶೌಚ ಮುಕ್ತ ಗ್ರಾಮ!

ಇಂತಹ ಸ್ಥಿತಿಯಲ್ಲಿದ್ದ ಜನರಿಗೆ ಕಳೆದ ಎಂಟು ವರ್ಷಗಳ ಹಿಂದೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಧರ್ಮಸ್ಥಳ ಸಂಘದ ಅಡಿಯಲ್ಲಿ ಗ್ರಾಮದ ಸುಮಾರು 35ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿತ್ತು.‌.

ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್
ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್
author img

By

Published : Mar 22, 2022, 5:11 PM IST

ಕಾರವಾರ : ಸ್ವಚ್ಛ ಭಾರತ ಯೋಜನೆಯಡಿ ಸರ್ಕಾರ ಎಲ್ಲೆಡೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. ಮಾತ್ರವಲ್ಲದೆ ಗ್ರಾಮಗಳ ಪ್ರತಿ ಮನೆ ಮನೆಗಳ ಸರ್ವೆ ನಡೆಸಿ ಎಲ್ಲೆಡೆ ಶೌಚಾಲಯವಿದ್ದಲ್ಲಿ ಅಂತಹ ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಲಾಗುತ್ತಿದೆ. ಆದರೆ, ಇಲ್ಲೊಂದು ಕುಗ್ರಾಮದಲ್ಲಿ ಅರ್ಧಕರ್ಧ ಮನೆಗಳಲ್ಲಿ ಶೌಚಾಲಯವೇ ಇಲ್ಲದಿದ್ದರೂ ಶೌಚ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ.

ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್..

ಕುಮಟಾ ತಾಲೂಕಿನ ಮೇದಿನಿ ಆ ಮೂಲಸೌಕರ್ಯ ವಂಚಿತ ಕುಗ್ರಾಮ. ಕಳೆದ ಹಲವು ದಶಕಗಳಿಂದ ರಸ್ತೆ, ವಿದ್ಯುತ್ ಹೀಗೆ ಅಗತ್ಯ ಸೌಕರ್ಯಗಳಿಲ್ಲದೆ ಈ ಭಾಗದ ಜನರು ಪರದಾಡುತ್ತಿದ್ದಾರೆ. ಮಾತ್ರವಲ್ಲದೆ ಮಾಧ್ಯಮಗಳ ಸಂಪರ್ಕವೇ ಇಲ್ಲದೇ ಹೊರ ಜಗತ್ತಿನ ಆಗುಹೋಗುಗಳು, ಸರ್ಕಾರದ ಯೋಜನೆಗಳ‌ ಬಗ್ಗೆ ತಿಳಿಯದೇ ಇದರ ಲಾಭ ಕೈ ತಪ್ಪುವಂತಾಗಿದೆ.

ಇಂತಹ ಸ್ಥಿತಿಯಲ್ಲಿದ್ದ ಜನರಿಗೆ ಕಳೆದ ಎಂಟು ವರ್ಷಗಳ ಹಿಂದೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಧರ್ಮಸ್ಥಳ ಸಂಘದ ಅಡಿಯಲ್ಲಿ ಗ್ರಾಮದ ಸುಮಾರು 35ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿತ್ತು.‌

ಇದರಿಂದ ಜನ ಕೂಡ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳುತ್ತಿರುವುದಕ್ಕೆ ಖುಷಿ ಪಟ್ಟಿದ್ದರು. ಅದರಂತೆ ಶೌಚಾಲಯ ನಿರ್ಮಾಣಕ್ಕೆ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ನಾಲ್ಕು ಸಿಮೆಂಟ್ ಶಿಟ್ ಮೂಲಕ ಗೋಡೆ ರೂಪದಲ್ಲಿ ಕಟ್ಟಿ ಅರೆಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಫೋಟೋ‌ ಹೊಡೆದು‌ ಹಣ ಮಂಜೂರು ಮಾಡಿಸಿಕೊಂಡು ನಾಪತ್ತೆಯಾಗಿದ್ದಾನೆ. ಶೌಚಾಲಯ ಕಳಪೆಯಾದ ಕಾರಣ ಕೆಲವೆಡೆ ನೆಲಸಮವಾಗಿದ್ದು, ಇನ್ನು ಕೆಲ‌ ಮನೆಗಳಲ್ಲಿ‌‌ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿವೆ ಎನ್ನುತ್ತಾರೆ ಸ್ಥಳೀಯರು.

ಇನ್ನು ಶೌಚಾಲಯ ಅರೆಬರೆಯಾದರೂ ಕೂಡ ಸರ್ಕಾರಿ ದಾಖಲೆಗಳಲ್ಲಿ ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ.‌ ಗ್ರಾಮದಲ್ಲಿ‌ ಅರ್ಧಕರ್ಧ ಮನೆಗಳಲ್ಲಿ ಶೌಚಾಲಯವಿಲ್ಲದೆ ಬಯಲಿನೆಡೆಗೆ ತೆರಳುತ್ತಿದ್ದಾರೆ. ಕೆಲವರು ಸ್ವಂತ‌ ಹಣದಲ್ಲಿಯೇ ನಿರ್ಮಿಸಿಕೊಂಡರೇ, ಇನ್ನು ಕೆಲವರು ಸರ್ಕಾರಿ ಅನುದಾನದಡಿ ಹೊಸ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ದಾಖಲೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ದಾಖಲೆ ಇರುವ ಕಾರಣ ಅರ್ಜಿ ತಿರಸ್ಕರಿಸಲಾಗುತ್ತಿದೆ. ಇದರಿಂದ ಗ್ರಾಮ‌ ಹೆಸರಿಗೆ ಮಾತ್ರ ಬಯಲು‌ ಶೌಚ ಮುಕ್ತಗ್ರಾಮವಾಗಿ ಮಾರ್ಪಟ್ಟಿದೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಕಳೆದ ಎಂಟು ವರ್ಷದ ಹಿಂದೆಯೇ ಶೌಚಾಲಯ ನಿರ್ಮಿಸಿ ಅರೆಬರೆಯಾಗಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಶೌಚಾಲಯ ಸಂಪೂರ್ಣ ಹಾಳಾಗಿದ್ದರೆ ಸ್ವಚ್ಛ ಭಾರತ ಯೋಜನೆಯಡಿ ಹೊಸ ಶೌಚಾಲಯ ಮಂಜೂರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸೌಲಭ್ಯ ವಂಚಿತ ಕುಗ್ರಾಮದ ಮನೆಗಳಿಗೆ ಅರೆಬರೆ ಶೌಚಾಲಯ ನಿರ್ಮಿಸಿ ಬಯಲು ಶೌಚ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ್ದು, ಇದೀಗ ಹೊಸ ಶೌಚಾಲಯ ನಿರ್ಮಾಣಕ್ಕೂ ಅನುದಾನ ಬಾರದಂತಾಗಿದೆ. ಇನ್ನಾದರೂ ಜಿಲ್ಲಾಧಿಕಾರಿ ಕೊಟ್ಟಿರುವ ಭರವಸೆಯಂತೆ ಶೌಚಾಲಯ ನಿರ್ಮಿಸಿಕೊಟ್ಟು ಬಯಲು ಶೌಚ‌ಮುಕ್ತಗೊಳಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.