ETV Bharat / state

ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ, ಹಿಂದೂ ವಿರೋಧಿ: ಪ್ರಮೋದ್ ಮುತಾಲಿಕ್

ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಹಿಂದೂ ಶಬ್ಧ ಜಾತಿ ಸೂಚಕವಲ್ಲ, ಮತ ಸೂಚಕವಲ್ಲ. ಹಿಂದೂ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಸತೀಶ್ ಜಾರಕಿಹೊಳೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು, ಹಿಂದೂಗಳ ಕ್ಷಮೆ ಕೇಳಬೇಕು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

satish-jarakiholi-is-an-antihindu-says-pramod-muthalik
ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ, ಹಿಂದೂ ವಿರೋಧಿ : ಪ್ರಮೋದ್ ಮುತಾಲಿಕ್
author img

By

Published : Nov 7, 2022, 8:10 PM IST

ಶಿರಸಿ : ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕವಾದಿಯಾಗಿದ್ದಾರೆ. ಹಿಂದೂ ವಿರೋಧಿಯಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಮಶಾನದಲ್ಲಿ ಪೂಜೆ ,ಸ್ಮಶಾನದಲ್ಲಿ ಮದುವೆ, ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಆದ ಕಾರಣ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು, ಹಿಂದೂಗಳ ಕ್ಷಮೆ ಕೇಳಬೇಕು ಆಗ್ರಹಿಸಿದರು.

ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ, ಹಿಂದೂ ವಿರೋಧಿ : ಪ್ರಮೋದ್ ಮುತಾಲಿಕ್

ಹಿಂದೂ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ : ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಇನ್ನೂ ಕೂಡ ಬುದ್ಧಿ ಬಂದಿಲ್ಲ. ಹಿಂದುತ್ವ, ಹಿಂದೂಗಳನ್ನು, ಹಿಂದೂಧರ್ಮ, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪು ಅವರು ಹಿಂದೂ, ಜೈನ, ಸಿಖ್, ಕ್ರಿಶ್ವಿಯನ್ ಎಂಬ ಶಬ್ದವನ್ನು ನಾಡಗೀತೆಯಲ್ಲಿ ಬಳಸಿದ್ದಾರೆ.

ಆಜಾದ್ ಹಿಂದ್ ಫೌಜ್ ಎಂದು ಸುಭಾಷ್ ಚಂದ್ರಬೋಸ್ ಅವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್, ಸಾವರ್ಕರ್ ಕೂಡ ಈ ಶಬ್ಧವನ್ನು ಬಳಸಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್​ ಕೂಡ 25 ವರ್ಷದ ಹಿಂದೆ ಹಿಂದೂ ಧರ್ಮ "ವೇ ಆಫ್ ಲೈಫ್ ", ಅತ್ಯಂತ ಒಳ್ಳೆಯ ಜೀವನ ಪದ್ದತಿ ಎಂದು ಹೇಳಿಕೆ ಕೊಟ್ಟಿದೆ. ಹಾಗಾದರೆ ಸುಪ್ರೀಂ ಕೋರ್ಟನವರು ಮೂರ್ಖರಾ? ಎಂದು ಪ್ರಶ್ನಿಸಿದರು.

ಹಿಂದು ಶಬ್ಧ ಜಾತಿ ಸೂಚಕವಲ್ಲ,ಮತ ಸೂಚಕವಲ್ಲ. ಹಿಂದೂ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ, ಇದನ್ನು ಖಂಡಿಸುತ್ತೇನೆ ಎಂದರು.

ಇದನ್ನೂ ಓದಿ :ಕಾಂಗ್ರೆಸ್​ಗೆ ಕರೆಯುವ ಹಕ್ಕು ಅವರಿಗೆ ಇರಬಹುದು. ಆದರೆ ಹೋಗದೇ ಇರುವ ಅಧಿಕಾರ ನಮಗಿದೆ: ಸಚಿವ ಶಿವರಾಮ್ ಹೆಬ್ಬಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.