ETV Bharat / bharat

ಗೋಣಿಚೀಲದಲ್ಲಿ ಬಾಲಕನ ಶವ ಪತ್ತೆ; ಮಾಟ ಮಂತ್ರಕ್ಕೆ ಬಲಿ ಕೊಟ್ಟಿರುವ ಶಂಕೆ

ಗೋಣಿಚೀಲದಿಂದ ಶವ ಹೊರತೆಗೆದಾಗ ಆತನ ಹಣೆಯಲ್ಲಿ ತಿಲಕವಿತ್ತು. ನಮ್ಮ ಮಗುವನ್ನು ಯಾರೋ ಮಾಟ-ಮಂತ್ರಕ್ಕೆ ಬಲಿ ಕೊಟ್ಟಿರುವ ಭಯವಾಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.

Eight Year Child Murdered After Kidnapping in Agra Body Found in Sack behind House
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : 3 hours ago

ಆಗ್ರಾ: ಇಲ್ಲಿಯ ಪಿನಾಹತ್ ಪೊಲೀಸ್ ಠಾಣಾ ವ್ಯಾಪ್ತಿಯ ನಯಾಪುರದ ನಿವಾಸಿ ರೌನಕ್ (8) ಎಂಬ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಬಾಲಕನನ್ನು ಕೊಂದು ಶವವನ್ನು ಗೋಣಿಚೀಲದಲ್ಲಿ ತುಂಬಿ ಇಲ್ಲಿ ತಂದು ಬಿಸಾಡಿರುವ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಗುವಿನ ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಳೇಯ ವೈಷಮ್ಯವೇ ಕೊಲೆಗೆ ಕಾರಣವೆಂದು ಆರೋಪಿಸಿರುವ ತಂದೆ ಕರಣ್ ಪ್ರಜಾಪತಿ, ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ನವೆಂಬರ್ 29ರಂದು ಸಂಜೆ ಮನೆಯ ಹೊರಗೆ ಆಟವಾಡುತ್ತಿದ್ದ ರೌನಕ್, ಅಂದಿನಿಂದ ನಾಪತ್ತೆಯಾಗಿದ್ದ. ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಅನುಮಾನದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶೋಧ ನಡೆಸಿದ್ದರು. ಕುಟುಂಬಸ್ಥರು ಕೂಡಾ ಹುಡುಕಾಟ ನಡೆಸಿದ್ದರು. ಈ ನಡುವೆ ಬಾಲಕ ಗೋಣಿಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಗೋಣಿಚೀಲದಿಂದ ಶವ ಹೊರ ತೆಗೆದಾಗ ಆತನ ಹಣೆಗೆ ತಿಲಕ ಹಚ್ಚಲಾಗಿತ್ತು. ಹೀಗಾಗಿ, ನಮ್ಮ ಮಗುವನ್ನು ಯಾರೋ ತಂತ್ರ-ಮಂತ್ರಕ್ಕೆ ಬಲಿ ಕೊಟ್ಟಿರುವ ಭಯವಾಗುತ್ತಿದೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆದಿವಾಸಿ ಮಹಿಳೆಯರ ಬಲಿ ಪಡೆದ ಮಾವಿನ ಗೊರಟೆ ಗಂಜಿ!: ಏನಿದು ಗಂಜಿ ದುರಂತ?, ಇಲ್ಲಿದೆ ಈಟಿವಿ ಭಾರತದ ಪ್ರತ್ಯಕ್ಷ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.