ETV Bharat / bharat

ರಾಷ್ಟ್ರ ರಾಜಧಾನಿಯತ್ತ ರೈತರ ಪ್ರತಿಭಟನಾ ಮೆರವಣಿಗೆ; ದೆಹಲಿ-ನೋಯ್ಡಾ ಗಡಿಯಲ್ಲಿ ಟ್ರಾಫಿಕ್ ಜಾಮ್‌

ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.

massive-congestion-at-delhi-noida-border-as-police-set-up-barricades-ahead-of-farmers-march
ದೆಹಲಿ-ನೋಯ್ಡಾ ಗಡಿಯಲ್ಲಿ ಸಂಚಾರ ದಟ್ಟಣೆ (ANI)
author img

By PTI

Published : Dec 2, 2024, 4:11 PM IST

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತರು ರಾಷ್ಟ್ರ ರಾಜಧಾನಿಯತ್ತ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದು, ದೆಹಲಿ-ನೋಯ್ಡಾ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಇದರ ಪರಿಣಾಮ, ಟ್ರಾಫಿಕ್​ ಸಮಸ್ಯೆ ಉಂಟಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಡ್ರೋನ್​ಗಳ ಮೂಲಕ ಪರಿಸ್ಥಿತಿ ಮೇಲ್ವಿಚಾರಣೆಗೆ ಹಿರಿಯ ಪೊಲೀಸ್​ ಅಧಿಕಾರಿಗಳು ಮುಂದಾಗಿದ್ದು, ನಿಯಂತ್ರಣ ಹರಸಾಹಸದ ಕೆಲಸವಾಗಿದೆ.

ಪೂರ್ವ ದೆಹಲಿ ಗಡಿಯಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಡ್ರೋನ್​ ಮೂಲಕ ಕಣ್ಗಾವಲಿರಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಾಗರ್​ ಸಿಂಗ್​ ಕಲ್ಸಿ ತಿಳಿಸಿದರು.

ಚಿಲ್ಲಾ ಗಡಿಯಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ಈ ಪ್ರದೇಶ ದಾಟಲು ಸಾರ್ವಜನಿಕರು ಒಂದು ಗಂಟೆ ತೆಗೆದುಕೊಂಡಿದ್ದೇವೆ. ದೆಹಲಿ ಮತ್ತು ನೋಯ್ಡಾ ಗಡಿಯ ಎರಡು ಭಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಇದು ಇನ್ನೂ ಹೆಚ್ಚಿನ ಟ್ರಾಫಿಕ್​ ದಟ್ಟಣೆ ಉಂಟಾಗಲು ಕಾರಣವಾಗಿದೆ. ಅದರಲ್ಲೂ ನೋಯ್ಡಾದಿಂದ ದೆಹಲಿಗೆ ತೆರಳುವವರಿಗೆ ತ್ರಾಸದಾಯಕವಾಗಿದೆ ಎಂದು ಗ್ರೇಟರ್​ ನೋಯ್ಡಾ ನಿವಾಸಿ ಅಪರಾಜಿತಾ ಸಿಂಗ್​ ತಿಳಿಸಿದರು.

ದಕ್ಷಿಣ ವಲಯದ ಜಂಟಿ ಪೊಲೀಸ್​ ಆಯುಕ್ತ ಎಸ್.​ಕೆ.ಜೈನ್​​ ಮಾತನಾಡಿ, ನೋಯ್ಡಾ ಪೊಲೀಸರ​ ಜೊತೆಗೆ ಸಮಸ್ಯೆ ನಿವಾರಣೆಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಹುಲಿಯೊಂದಿಗೆ ಸೆಣಸಾಡಿ ಪತಿಯ ಜೀವ ಉಳಿಸಿದ ಪತ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.