ETV Bharat / state

ಶಿವರಾತ್ರಿಯಂದು ಮುರುಡೇಶ್ವರ ಸಮುದ್ರ ತೀರದಲ್ಲಿ ಮೂಡಿದ ಶಿವನ ಮರಳು ಶಿಲ್ಪ - ಶಿವನ ಮರಳು ಶಿಲ್ಪ

ಮರಳು ಕಲಾವಿದ ರಾಘವೇಂದ್ರ ಅಚಾರಿಯವರ ಕೈಚಳಕದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಶಿವನ ಮರಳು ಶಿಲ್ಪ ಮೂಡಿ ಬಂದಿದೆ.

sand art
ಶಿವನ ಮರಳು ಶಿಲ್ಪ
author img

By

Published : Mar 11, 2021, 4:27 PM IST

ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇವರ ಆಶ್ರಯದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಸುಂದರವಾದ ಮುರುಡೇಶ್ವರನ ಮರಳು ಶಿಲ್ಪ ಮೂಡಿದೆ.

ಮಹಾಶಿವರಾತ್ರಿಯ ಅಂಗವಾಗಿ ಜೈನ ಜಟ್ಗೇಶ್ವರ ಯುವಕ ಸಂಘದ ಸದಸ್ಯರಾದ ರಾಘವೇಂದ್ರ ಅಚಾರಿಯವರ ಕೈಚಳಕದಿಂದ ಈ ಕಲೆ ಮೂಡಿ ಬಂದಿದೆ.

ಇವರು ಮೂಲತಃ ಮುರುಡೇಶ್ವರದ ಕಾಯ್ಕಿಣಿ ಪಂಚಾಯತ್​ ವ್ಯಾಪ್ತಿಯ ಸಭಾತಿಯವರಾಗಿದ್ದು, ಸದ್ಯ ಉಡುಪಿ ಜಿಲ್ಲೆಯ ಚಿತ್ರಕಲಾ ಮಂದಿರದ ಕಲಾ ಕಾಲೇಜಿನಲ್ಲಿ ಚಿತ್ರಕಲೆಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಮುರುಡೇಶ್ವರದ ಕಡಲ ತೀರದಲ್ಲಿ "ಸ್ಯಾಂಡ್​ ಆರ್ಟ್" ಮಾಡಬೇಕೆಂದುಕೊಂಡ ಈತನ ಕನಸು ಈ ವರ್ಷದ ಮಹಾಶಿವರಾತ್ರಿ ಹಬ್ಬಕ್ಕೆ ನನಸಾದಂತಾಗಿದೆ. ಈತನಿಗೆ ಜೈನ ಜಟ್ಗೇಶ್ವರ ಯುವಕ ಸಂಘದ ಯುವಕರು ಸಾಥ್ ನೀಡಿದ್ದಾರೆ.

ಈತ ಮರಳಿನಿಂದ ಶಿವಲಿಂಗದ ಅರ್ಧಮುಖ ಶಿವನನ್ನು ಹೋಲುವ ಹಾಗೆ ಇನ್ನರ್ಧ ಮುಖ ಶಿವಲಿಂಗದ ಹಾಗೆ ನಿರ್ಮಿಸಿದ್ದು, ಹಿಂಭಾದಲ್ಲಿ ಮುರುಡೇಶ್ವರದ ಶಿವಮೂರ್ತಿ ಹಾಗೂ ಗೋಪುರವನ್ನು ನಿರ್ಮಿಸಿದ್ದಾನೆ. ಈತನ ಈ ಕಲೆಗೆ ಸ್ಥಳೀಯರು, ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.