ETV Bharat / state

ಪಾಳು ಬಿದ್ದ ಪಂಪವನ: ಬೇಕಿದೆ ಕಾಯಕಲ್ಪ

ಬನವಾಸಿಯ ಮಧುಕೇಶ್ವರ ದೇವಾಲಯದ ಬಳಿ ಪಂಪವನವೊಂದನ್ನು ಅರಣ್ಯ ಇಲಾಖೆ ನಿರ್ಮಿಸಿದ್ದು, ತದನಂತರ ಈ ವನ ದೇವಸ್ಥಾನದ ಸುಪರ್ದಿಗೆ ಸೇರಿತ್ತು. ಅಚ್ಚುಕಟ್ಟಾಗಿದ್ದ ಪಂಪವನ ಈಗ ಹಾಳು ಕೊಂಪೆಯಾಗಿದೆ. ಯಾವುದೇ ನಿರ್ವಹಣೆ ಇಲ್ಲದೆ ವನದಲ್ಲಿ ಯಾರೂ ಓಡಾಡದಂತಾಗಿದೆ.

ಪಾಳು ಬಿದ್ದ ಪಂಪವನ
author img

By

Published : Jul 31, 2019, 9:13 PM IST

ಶಿರಸಿ: ಕದಂಬರ ರಾಜಧಾನಿಯಾದ ಬನವಾಸಿ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅಲ್ಲಿನ ಆದಿ ಕವಿ ಪಂಪನ ಹೆಸರಿನಲ್ಲಿರುವ ವನ ನೋಡಲು ಪ್ರತಿ ದಿನ ನೂರಾರು ಜನರು ಆಗಮಿಸುತ್ತಾರೆ. ಆದರೆ ಅದು ಈಗ ಅಕ್ಷರಶಃ ಪಾಳು ಬಿದ್ದ ಕಾಡಿನಂತಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ಅನೈತಿಕ ಚಟುವಟಿಕೆಯ ತಾಣವಾಗಿದೆ.

ಬನವಾಸಿಯ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಒಳಪಟ್ಟಿರುವ ಪಂಪವನ ಈಗ ಪಾಳು ಬಿದ್ದ ಕೊಂಪೆಯಾಗಿದೆ. ಔಷಧಯುಕ್ತ ಗಿಡ, ಮರಗಳು, ಪರಿಸರ ಸಮೃದ್ಧಿಗೆ ಕಾಡು ಮರಗಳು ಸೇರಿದಂತೆ ಸಾವಿರಾರು ಗಿಡಗಳನ್ನು ಬೆಳೆಸಿ, ನೂರಾರು ಪ್ರವಾಸಿಗರಿಗೆ ಪ್ರತಿ ದಿನ ಮನ ತಣಿಸುತ್ತಿದ್ದ ತಾಣವೀಗ ಯಾರೂ ಕೇಳುವವರಿಲ್ಲದೇ ಓಡಾಡಲೂ ಅಸಹ್ಯ ಎನ್ನುವ ಸ್ಥಿತಿಯಲ್ಲಿದೆ.

ಪಾಳು ಬಿದ್ದ ಪಂಪವನ

1984ರಿಂದ 1986ರ ಎರಡು ವರ್ಷದ ಅವಧಿಯಲ್ಲಿ ಅಂದಿನ ಶಿರಸಿ ಉಪ ವಿಭಾಗದ ಡಿಸಿಎಫ್ ಮುತವರ್ಜಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪಂಪವನವನ್ನು ನಿರ್ಮಿಸಲಾಗಿತ್ತು. ಪ್ರವಾಸಿಗರ ಅನುಕೂಲಕ್ಕಾಗಿ ಉತ್ತಮ ಮರಗಳನ್ನು ಬೆಳೆಸಿ ಒಂದು ಶಾಂತಿ ಕೇಂದ್ರವಾಗಿ ಮಾಡಲಾಗಿತ್ತು. ಆದರೆ ಇಲಾಖೆಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಅದು ಹಸ್ತಾಂತರ ಆಗುತ್ತಿದ್ದಂತೆ ನಿರ್ವಹಣೆ ಇಲ್ಲದೆ ಹಾಳು ಬೀಳುತ್ತಿದೆ. ವನದ ಜಾಗವೂ ಸಹ ದೇವಸ್ಥಾನದ ಹೆಸರಿನಲ್ಲೇ ಇದ್ದು, ಪಾಳು ಬೀಳುತ್ತಿರುವ ವನದ ರಕ್ಷಣೆ ದೇವಸ್ಥಾನದ ಆಡಳಿತ ಮಂಡಳಿಯ ಹೆಗಲ ಮೇಲಿದೆ.

ಪಂಪವನದ ಮುಖ್ಯ ದ್ವಾರದಲ್ಲಿರುವ ಬೋರ್ಡ್​ ಸಹ ತುಕ್ಕು ಹಿಡಿದು ಬೀಳುವ ಪರಿಸ್ಥಿತಿಯಲ್ಲಿದ್ದು, ಒಳಗಿರುವ ಬೆಂಚುಗಳು ಮುರಿದು ಹೋಗಿವೆ. ಇನ್ನು ಪ್ರವಾಸಿಗರು ಬಂದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಸಂಜೆಯ ವೇಳೆಗೆ ಕುಡುಕರ ಹಾವಳಿ ಇರುವ ಕಾರಣ ಭದ್ರತೆಯ ಸಮಸ್ಯೆಯೂ ಇದೆ. ಸಾವಿರಾರು ಜನರು ಮನತಣಿಸಿಕೊಳ್ಳಬಹುದಾದ ಜಾಗ ಇಂದು ಅನೈತಿಕ ತಾಣವಾಗಿದೆ. ಜೋಡಿ ಹಕ್ಕಿಗಳು, ಕುಡುಕರ ಅಡ್ಡವಾಗಿ ಪರಿವರ್ತನೆಯಾಗಿದೆ. ಒಳಗೆ ಹೋದಲ್ಲಿ ನಮಗೆ ಅಸಹ್ಯ ಎನಿಸುವ ಸ್ಥಿತಿ ಇದ್ದು, ಶೀಘ್ರದಲ್ಲಿ ಇದನ್ನು ಪುನರ್‌ ನಿರ್ಮಾಣ ಮಾಡುವ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯ ಯುವಕರು.

Intro:ಶಿರಸಿ :
ಕದಂಬರ ರಾಜಧಾನಿಯಾದ ಬನವಾಸಿ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅಲ್ಲಿನ ಆದಿ ಕವಿ ಪಂಪನ ಹೆಸರಿನಲ್ಲಿರುವ ವನ ನೋಡಲು ಪ್ರತಿ ದಿವಸ ನೂರಾರು ಜನರು ಆಗಮಿಸುತ್ತಾರೆ. ಆದರೆ ಅದು ಈಗ ಅಕ್ಷರಶಃ ಪಾಳು ಬಿದ್ದ ಕಾಡಿನಂತಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಾಡಾಗಿದೆ.

ಬನವಾಸಿಯ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಒಳಪಟ್ಟಿರುವ ಪಂಪ ವನ ಈಗ ಪಾಳು ಬಿದ್ದ ಕೊಂಪೆಯಾಗಿದೆ. ಔಷಧಯುಕ್ತ ಗಿಡ, ಮರಗಳು, ಪರಿಸರ ಸಮೃದ್ಧಿಗೆ ಕಾಡು ಮರಗಳು ಸೇರಿದಂತೆ ಸಾವಿರಾರು ಗಿಡಗಳನ್ನು ಬೆಳೆಸಿ ನೂರಾರು ಪ್ರವಾಸಿಗರಿಗೆ ಪ್ರತಿ ದಿವಸ ಮನ ತಣಿಸುತ್ತಿದ್ದ ತಾಣವೀಗ ಯಾರೂ ಹೇಳಿ ಕೇಳುವವರಿಲ್ಲದೇ ಓಡಾಡಲೂ ಅಸಹ್ಯ ಎನ್ನುವ ಸ್ಥಿತಿಯಲ್ಲಿದೆ.

Body:೧೯೮೪ ರಿಂದ ೧೯೮೬ ರ ಎರಡು ವರ್ಷದ ಅವಧಿಯಲ್ಲಿ ಅಂದಿನ ಶಿರಸಿ ಉಪವಿಭಾಗದ ಡಿಸಿಎಫ್ ಮುತವರ್ಜಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪಂಪ ವನವನ್ನು ನಿರ್ಮಿಸಲಾಗಿತ್ತು. ಪ್ರವಾಸಿಗರ ಅನುಕೂಲಕ್ಕಾಗಿ ಉತ್ತಮ ಮರಗಳನ್ನು ಬೆಳೆಸಿ ಒಂದು ಶಾಂತಿ ಕೇಂದ್ರವಾಗಿ ಮಾಡಲಾಗಿತ್ತು. ಆದರೆ ಇಲಾಖೆಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಅದು ಹಸ್ತಾಂತರ ಆಗುತ್ತಿದ್ದಂತೆ ನಿರ್ವಹಣೆ ಇಲ್ಲದೇ ಹಾಳು ಬೀಳುತ್ತಿದೆ. ವನದ ಜಾಗವೂ ಸಹ ದೇವಸ್ಥಾನದ ಹೆಸರಿನಲ್ಲೇ ಇದ್ದು, ಪಾಳು ಬೀಳುತ್ತಿರುವ ವನದ ರಕ್ಷಣೆ ದೇವಸ್ಥಾನದ ಆಡಳಿತ ಮಂಡಳಿಯ ಹೆಗಲ ಮೇಲಿದೆ.

ಪಂಪ ವನದ ಮುಖ್ಯ ದ್ವಾರದಲ್ಲಿರುವ ಬೋರ್ಡ ಸಹ ತುಕ್ಕು ಹಿಡಿದು ಬೀಳುವ ಪರಿಸ್ಥತಿಯಲ್ಲಿದ್ದು, ಒಳಗಿರುವ ಬೆಂಚು ಗಳು ಮುರಿದು ಹೋಗಿದೆ. ಇನ್ನು ಪ್ರವಾಸಿಗರು ಬಂದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಸಂಜೆಯ ವೇಳೆಗೆ ಕುಡುಕರ ಹಾವಳಿಯಿರುವ ಕಾರಣ ಭದ್ರತೆಯ ಸಮಸ್ಯೆಯೂ ಇದೆ. ' ಸಾವಿರಾರು ಜನರು ಮನತಣಿಸಿಕೊಳ್ಳಬಹುದಾದ ಜಾಗ ಇಂದು ಅನೈತಿಕ ತಾಣವಾಗಿದೆ. ಜೋಡಿ ಹಕ್ಕಿಗಳು, ಕುಡುಕರ ಅಡ್ಡೆಯಾಗಿದೆ. ಒಳಗೆ ಹೋದಲ್ಲಿ ನಮಗೆ ಅಸಹ್ಯ ಎನಿಸುವ ಸ್ಥಿತಿಯಿದ್ದು, ಶೀಘ್ರದಲ್ಲಿ ಇದನ್ನು ಪುನರ್‌ ನಿರ್ಮಾಣ ಮಾಡುವ ಅಗತ್ಯವಿದೆ ' ಎನ್ನುತ್ತಾರೆ ಸ್ಥಳೀಯ ಯುವಕರು.

ಬೈಟ್ (೧) : ಕಿರಣ್ ನಾಯ್ಕ , ಸ್ಥಳೀಕ.

ಒಟ್ಟಾರೆಯಾಗಿ ಅತೀ ಶೀಘ್ರದಲ್ಲಿ ವನದ ಪುನರ್ ನಿರ್ಮಾಣವಾಗಿ ವಿವಿಧೆಡೆಯಿಂದ ಪ್ರತಿ ದಿವಸ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.‌

.........
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.