ETV Bharat / state

ಕಾಂಗ್ರೆಸ್ ನಡಿಗೆ ಶೂನ್ಯದೆಡೆಗೆ​, ಜೆಡಿಎಸ್​ ಗೆ ಗೇಟ್​ ಪಾಸ್: ಫಲಿತಾಂಶಕ್ಕೂ ಮುನ್ನ ಅಶೋಕ್​ ಭವಿಷ್ಯ - ಉಪ ಚುನಾವಣೆ ಫಲಿತಾಂಶ ಆರ್​ ಅಶೋಕ್​ ಹೇಳಿಕೆ ಸುದ್ದಿ

ಉಪಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನ ಸ್ಥಾನ ತ್ಯಾಗ ಮಾಡಬೇಕಾಗಬಹುದು. ಜೆಡಿಎಸ್​ ಕರ್ನಾಟಕದಿಂದ ಗೇಟ್​ ಪಾಸ್​ ಪಡೆಯುತ್ತೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ಮುಂದುವರೆಯುತ್ತೆ. ನಮಗೆ ಬಹು ಮತಕ್ಕಿಂತ ಹೆಚ್ಚಿನ ಸ್ಥಾನ ಬರೋದು ನೂರಕ್ಕೆ ನೂರು ಖಚಿತ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲ್ಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರೆಸಲು ಮತದಾರರು ತೀರ್ಮಾನಿಸಿದ್ದಾರೆ ಎಂದು ಸಚಿವ ಆರ್​. ಆಶೋಕ್ ಭವಿಷ್ಯ ನುಡಿದಿದ್ದಾರೆ.

r-ashok-statement-on-by-election-result
ಕಂದಾಯ ಸಚಿವ ಆರ್. ಅಶೋಕ್
author img

By

Published : Dec 8, 2019, 7:35 PM IST

ಉಡುಪಿ: ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತೆ. ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಹೋಗುತ್ತೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ಈ ಉಪಚುನಾವಣೆ ನೀಡುತ್ತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನ ಸ್ಥಾನ ತ್ಯಾಗ ಮಾಡಬೇಕಾಗಬಹುದು. ಜೆಡಿಎಸ್​ ಕರ್ನಾಟಕದಿಂದ ಗೇಟ್​ ಪಾಸ್​ ಪಡೆಯುತ್ತೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ಮುಂದುವರೆಯುತ್ತೆ. ನಮಗೆ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಬರೋದು ನೂರಕ್ಕೆ ನೂರು ಖಚಿತ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲ್ಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರೆಸಲು ಮತದಾರರು ತೀರ್ಮಾನಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮೈತ್ರಿ ರಚನೆ ಕೇವಲ ಭ್ರಮೆ

ಮತ್ತೊಮ್ಮೆ ಕಾಂಗ್ರೆಸ್ ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಅಂದಿದ್ದಾರೆ. ಖರ್ಗೆ ಸೋತಿದ್ದಾರೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿವೆ. ಈಗ ನಾಲ್ಕು ಪಾರ್ಟಿ ಒಂದಾಗೋದು ಯಾವಾಗ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ? ಕಾಂಗ್ರೆಸ್ ಭ್ರಮಾಲೋಕದಲ್ಲಿದ್ದು, ಅವರು ಅಲ್ಲೇ ಇರಲಿ ಎಂದು ವ್ಯಂಗ್ಯವಾಡಿದರು.

ಉಪ ಸಮರದ ಫಲಿತಾಂಶ ಕುರಿತು ಅಶೋಕ್ ಭವಿಷ್ಯ

ಶಿವಸೇನೆಯಿಂದ ಬೆಳಗಾವಿ ಗಡಿ ಕ್ಯಾತೆ

ನಮ್ಮ ಗಡಿಯ ತಂಟೆಗೆ ಬಂದ್ರೆ ನಾವಂತೂ ಸುಮ್ಮನಿರಲ್ಲ ಎಂದು ಶಿವಸೇನೆಗೆ ಕಂದಾಯ ಸಚಿವರು ಎಚ್ಚರಿಕೆ ನೀಡಿದ ಅಶೋಕ್, ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಬಗ್ಗೆ ದೊಂಬರಾಟ ಮಾಡ್ಬೇಡಿ ಹುಷಾರ್. ಹೇಗೆ ತಿರುಗೇಟು ಕೊಡ್ಬೇಕು ಅಂತ ನಮಗೂ ಗೊತ್ತು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ಧತೆ ಇದೆ. ಸರೋಜಿನಿ‌ ಮಹಿಷಿ ವರದಿಯನ್ನೂ ಪರಿಗಣಿಸಿ, ಕನ್ನಡಕ್ಕೆ ಅಗ್ರಸ್ಥಾನ ನೀಡ್ತೇವೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು ಅಂತ ಅಶೋಕ್ ಸ್ಪಷ್ಟಪಡಿಸಿದರು.

ಹೈದರಾಬಾದ್​ ಎನ್​ಕೌಂಟರ್​​ ಪ್ರಕರಣವನ್ನು ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತೆ:

ಹೈದರಾಬಾದ್ ಘಟನೆಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಯ ವಿಳಂಬ ಆಗ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ತಾ ಇಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನ್ಯಾಯ ಪರಿಪಾಲನೆ ಹೇಗೆ ಮಾಡೋದು ಅಂತ ನ್ಯಾಯಾಲಯ ತೀರ್ಮಾನ ಮಾಡುತ್ತೆ. ಎನ್​ಕೌಂಟರ್​ ಬಗ್ಗೆ ಅಲ್ಲಿನ ಸರ್ಕಾರ ಇದೆ ನೋಡಿಕೊಳ್ಳುತ್ತೆ. ಈಗಾಗಲೇ ಸ್ವಯಂ ರಕ್ಷಣೆಗೆ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆಯ ನಂತರ ಎಲ್ಲಾ ಸತ್ಯಸಂಗತಿಗಳು ಬೆಳಕಿಗೆ ಬರುತ್ತವೆ ಎಂದು ಸಚಿವ ಅಶೋಕ್​ ಹೇಳಿದ್ರು.

Intro:ಉಡುಪಿ

ಬಿಜೆಪಿ 14-15 ಸ್ಥಾನ ಗಳಿಸುತ್ತೆ: ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ

ಉಡುಪಿ: ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತೆ . ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಹೋಗುತ್ತೆ.ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ಬರುತ್ತೆ. ಅಂತಾ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗಬಹುದು.
ಮೈತ್ರಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತ ದಿಂದ ಜನರು ರೋಸಿ ಹೋಗಿದ್ದಾರೆ.ದೇಶದ ಜನರು ಉಪಚುನಾವಣೆ ಫಲಿತಾಂಶ ಕ್ಕೆ ಕಾಯುತ್ತಿದ್ದಾರೆ.ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ಬರುತ್ತೆ.ಬಹುಮತ ಕ್ಕಿಂತ ಹೆಚ್ಚಿನ ಸ್ಥಾನ ಬರೋದು ನೂರಕ್ಕೆ ನೂರು ಖಚಿತ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸರ್ಕಾರ ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ.
ಫಲಿತಾಂಶ ದ ನಂತರ ಜೆಡಿಎಸ್ ಕರ್ನಾಟಕದಿಂದ ಗೇಟ್ ಪಾಸ್ ಪಡೆಯುತ್ತೆ ಅಂತಾ ಆಶೋಕ್ ಹೇಳಿದ್ದಾರೆ.

*ವಿಪಕ್ಷಗಳು ಭ್ರಮೆಯಲ್ಲಿವೆ*

ಮತ್ತೊಮ್ಮೆ ಕಾಂಗ್ರೇಸ್ ಜೆಡಿಎಸ್ ಒಂದಾಗೋದು ಕೇವಲ ಭ್ರಮೆ.
ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಅಂದಿದಾರೆ.
ಖರ್ಗೆ ಸೋತಿದ್ದಾರೆ, ಕಾಂಗ್ರೇಸ್ ಎರಡು ಭಾಗವಾಗಿದೆ.
ಜೆಡಿಎಸ್ ಕೂಡಾ ಎರಡು ಭಾಗ ಆಗಿದೆ.ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿದೆ.
ಈ ನಾಲ್ಕುಪಾರ್ಟಿ ಒಂದಾಗೋದು ಯಾವಾಗ ?ನಾಯಕನನ್ನು ಆಯ್ಕೆ ಮಾಡೋದು ಯಾವಾಗ?ಕಾಂಗ್ರೆಸ್ ಭ್ರಮಾಲೋಕದಲ್ಲಿದೆ, ಅವರು ಭ್ರಮಾಲೋಕದಲ್ಲೇ ಇರಲಿ ಅಂತಾ ಅವರು ವ್ಯಂಗ್ಯವಾಡಿದ್ದಾರೆ.

------------

ಶಿವಸೇನೆಯಿಂದ ಬೆಳಗಾವಿ ಗಡಿ ಕ್ಯಾತೆ.

ನಮ್ಮ ಗಡಿಯ ತಂಟೆಗೆ ಬಂದ್ರೆ ನಾವಂತೂ ಸುಮ್ಮನಿರಲ್ಲ. ಅಂತಾ
ಶಿವಸೇನೆಗೆ ಕಂದಾಯ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಗಡಿ ವಿಚಾರಕ್ಕೆ ಬಂದ್ರೆ ಯಾವುದೇ ರಾಜಿ ಇಲ್ಲ.ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ.
ಬೆಳಗಾವಿ ಬಗ್ಗೆ ಕ್ಯಾತೆ ತೆಗೆದು ರಾಜಕೀಯ ದೊಂಬರಾಟ ಮಾಡ್ಬೇಡಿ ಹುಷಾರ್.ಹೇಗೆ ತಿರುಗೇಟು ಕೊಡ್ಬೇಕು ಅಂತ ನಮಗೂ ಗೊತ್ತು.ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ದತೆ ಇದೆ.ಸರೋಜಿನಿ‌ ಮಹಿಷಿ ವರದಿಯನ್ನೂ ಪರಿಗಣಿಸಿ, ಕನ್ನಡಕ್ಕೆ ಅಗ್ರಸ್ಥಾನ ನೀಡ್ತೇವೆ.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನನ್ನ ವೈಯ್ಯಕ್ತಿಕ ಅಭಿಪ್ರಾಯವೂ ಹೌದು ಅಂತಾ ಅಶೋಕ್ ಸ್ಪಷ್ಟಪಡಿಸಿದ್ದಾರೆ.

-----------

ಹೈದರಾಬಾದ್ ಘಟನೆಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯಾಯ ವಿಳಂಬ ಆಗ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ತಾ ಇಲ್ಲ ಎಂಬ ಅಭಿಪ್ರಾಯ ಸರಿಯಲ್ಲ.
ನ್ಯಾಯ ಪರಿಪಾಲನೆ ಹೇಗೆ ಮಾಡೋದು ಅಂತ ನ್ಯಾಯಾಲಯ ತೀರ್ಮಾನ ಮಾಡುತ್ತೆ.ಈ ಶೂಟೌಟ್ ಬಗ್ಗೆ ಅಲ್ಲಿನ ಸರ್ಕಾರ ಇದೆ ನೋಡಿಕೊಳ್ಳುತ್ತೆ.ಈಗಾಗಲೇ ಸಮರ್ಥನೆ ನೀಡಿದ್ದಾರೆ .ಸ್ವಯಂ ರಕ್ಷಣೆಗೆ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆತನಿಖೆಯ ನಂತರ ಎಲ್ಲಾ ಸತ್ಯಸಂಗತಿಗಳು ಬೆಳಕಿಗೆ ಬರುತ್ತೆ.ನಮ್ಮಲ್ಲರ ದೃಷ್ಟಿಯಿಂದ ಈ‌ ಕ್ರಮಕೈಗೊಂಡಿದ್ದಾರೆ ಅಂತಾ ಅಶೋಕ್ ಹೇಳಿದ್ದಾರೆ.Body:AshokConclusion:Ashok
ETV Bharat Logo

Copyright © 2024 Ushodaya Enterprises Pvt. Ltd., All Rights Reserved.