ಭಟ್ಕಳ : ತಾಲೂಕಿನಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 12 ಜನರ ಮೇಲೆ ತಾಲೂಕು ಆಡಳಿತ ನೋಟಿಸ್ ಜಾರಿ ಮಾಡಿದ್ದು, ಇಬ್ಬರ ಮೇಲೆ ಎಫ್‍ಐಆರ್ ದಾಖಲಿಸಿದೆ.
ತಾಲೂಕಿನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ಪಟ್ಟಣದ ಕೆಲ ಭಾಗಗಳಿಗೆ ವಾಸ್ತವ್ಯದ ಉದ್ದೇಶಕ್ಕಾಗಿ ಬರುವುದನ್ನು ತಾಲೂಕಾಡಳಿತ ನಿರ್ಬಂಧಿಸಿದೆ. ತಾಲೂಕಿಗೆ ಹೊರ ರಾಜ್ಯದಿಂದ ಬಂದವರ ಗಂಟಲು ದ್ರವ ತೆಗೆದು ನೇರ ಹೋಮ್ ಕ್ವಾರಂಟೈನನಲ್ಲಿಟ್ಟು, ನಿಗಾ ಇಡಲು ಜಿಲ್ಲಾಡಳಿತ ವಾಚ್ ಆ್ಯಪ್ ಮೂಲಕ ವ್ಯವಸ್ಥೆ ಮಾಡಿದೆ.
ಕ್ವಾರಂಟೈನ್ನಲ್ಲಿದ್ದವರಿಗೆ 500 ಮಿ. ಪರಿಧಿಯನ್ನು ನಿಗದಿಪಡಿಸಲಾಗಿದೆ. ಒಂದೊಮ್ಮೆ ಅವರು ತಮ್ಮ ಪರಿಧಿಯನ್ನು ಬಿಟ್ಟು ಬಂದಲ್ಲಿ ತಾಲೂಕಾಡಳಿತ ಅವರಿಗೆ ನೋಟಿಸ್ ನೀಡುತ್ತಿದೆ. ಶನಿವಾರದ ಹೊತ್ತಿಗೆ 122 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದು, ಅದರಲ್ಲಿ 12 ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ನಿಬ್ಬರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.
ನೋಟಿಸ್ ಪಡೆದವರು ಇನ್ನೊಂದು ಬಾರಿ ನಿಯಮ ಉಲ್ಲಂಘಿಸಿದ್ರೆ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ತಹಶೀಲ್ದಾರ್ ಎಸ್ ರವಿಚಂದ್ರ ತಿಳಿಸಿದ್ದಾರೆ.