ETV Bharat / state

ಕುಮಟಾದಲ್ಲಿ ಪುನಿತ್ ಅಭಿಮಾನಿಗಳ ಮಹತ್ವದ ಕಾರ್ಯ: ಗ್ರಂಥಾಲಯವಾದ ಬಸ್ ನಿಲ್ದಾಣ

ನಟ ಪುನೀತ್​ ಅವರನ್ನೇ ಮಾದರಿಯಾಗಿಸಿಕೊಂಡು, ಅವರಂತೆಯೇ ಈ ಯುವ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ

Library in Bus Stand
ಗ್ರಂಥಾಲಯವಾದ ಬಸ್​ ನಿಲ್ದಾಣ
author img

By

Published : Jun 3, 2023, 4:00 PM IST

ಕುಮಟಾದಲ್ಲಿ ಪುನಿತ್ ಅಭಿಮಾನಿಗಳ ಮಹತ್ವದ ಕಾರ್ಯ: ಗ್ರಂಥಾಲಯವಾದ ಬಸ್ ನಿಲ್ದಾಣ!

ಕಾರವಾರ: ಮೊಬೈಲ್ ಬಳಕೆ ಹೆಚ್ಚಾದಂತೆ ಬಹುತೇಕರಲ್ಲಿ ಪುಸ್ತಕ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗತೊಡಗಿದೆ. ಇದರ ಜೊತೆಗೆ ಅದೆಷ್ಟೋ ಗ್ರಂಥಾಲಯಗಳು ಬಾಗಿಲು ಮುಚ್ಚಿಕೊಂಡಿವೆ. ಆದರೆ ಇಲ್ಲೊಂದು ಕಡೆ ಜನರನ್ನು ಪುಸ್ತಕದ ಕಡೆ ಸೆಳೆಯುವ ಉದ್ದೇಶದಿಂದ ನಟ‌ ಪುನೀತ್ ರಾಜಕುಮಾರ್‌ ಅಭಿಮಾನಿ ಬಳಗದಿಂದ ಗ್ರಾಮೀಣ ಪ್ರದೇಶದಲ್ಲಿರೋ ಪ್ರಯಾಣಿಕರ ತಂಗುದಾಣವನ್ನೇ ಗ್ರಂಥಾಲಯವನ್ನಾಗಿ ಮಾಡಲಾಗಿದೆ.

ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸ್ಕೇರಿ ಎಂಬ ತೀರಾ ಹಿಂದುಳಿದ ಗ್ರಾಮವೊಂದರ ಪ್ರಯಾಣಿಕ ತಂಗುದಾಣ ಇದೀಗ ಗ್ರಂಥಾಲಯವಾಗಿಯೂ ಮಾರ್ಪಟ್ಟಿದೆ. ಸುಣ್ಣ ಬಣ್ಣ ಬಳಿದು ಸ್ವಚ್ಛವಾಗಿರೋ ಈ ಬಸ್ ನಿಲ್ದಾಣದಲ್ಲಿ ಜನರಿಗೆ ಉಪಯುಕ್ತವಾಗೋ ರೀತಿಯಲ್ಲಿ ಗ್ರಂಥಾಲಯ ಮಾಡಲಾಗಿದೆ. ನಟ ಪುನೀತ್ ರಾಜಕುಮಾರ್​ ಅವರು ತಮ್ಮ ಜೀವಿತ ಅವಧಿಯಲ್ಲಿ ನೂರಾರು ಒಳ್ಳೆಯ ಕೆಲಸವನ್ನು ಮಾಡಿದ್ದರು. ಅದು ಇಂದು ಅದೆಷ್ಟೋ ಜನರಿಗೆ ಮಾದರಿ ಕೂಡ ಆಗಿದೆ.

ಅದನ್ನೇ ಮಾದರಿಯಾಗಿ ಪಡೆದ ಈ ಹೊಸ್ಕೇರಿ ಗ್ರಾಮದ ಹತ್ತಾರು ಯುವಕರು ಸೇರಿಕೊಂಡು ನಾವು ಕೂಡ ಪುನೀತ್ ರಾಜಕುಮಾರ್​ ಅವರ ಅಭಿಮಾನ ಬಳಗ ಕಟ್ಟಿಕೊಂಡಿದ್ದರು. ಅವರ ಪುಣ್ಯ ಸ್ಮರಣೆಗೆ ಏನಾದ್ರೂ ಒಂದು ಒಳ್ಳೆ ಕಾರ್ಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ಆಲೋಚಿಸುತ್ತಿರುವಾಗ ಮೊದಲು ನೆನಪಿಗೆ ಬಂದಿದ್ದು ಊರಲ್ಲಿ ಒಂದು ಗ್ರಂಥಾಲಯ ಮಾಡಬೇಕು ಎನ್ನುವ ಕಲ್ಪನೆ. ಆದರೆ ಗ್ರಂಥಾಲಯಕ್ಕೆ ಸರಿಯಾದ ಸ್ಥಳ ಹುಡುಕಾಟ ನಡೆಸಿದಾದ ಪುನೀತ್ ರಾಜಕುಮಾರ್​ ಅಭಿಮಾನಿ ಬಳಗದ ಯುವಕರ ಕಣ್ಣಿಗೆ ಕಂಡಿದ್ದು, ಗ್ರಾಮದಲ್ಲಿ ಇರೋ ಪ್ರಯಾಣಿಕ ತಂಗುದಾಣ. ಇದನ್ನೆ ಆಯ್ಕೆ ಮಾಡಿಕೊಂಡ ಯುವಕರ ತಂಡ ಗ್ರಾಮದ ಹಿರಿಯರ ಜೊತೆ ಚರ್ಚೆ ನಡೆಸಿ ಎಲ್ಲರ‌ ಒಪ್ಪಿಗೆ ಪಡೆದುಕೊಂಡು ಇದೀಗ ಪ್ರಯಾಣಿಕರ ತಂಗುದಾಣದಲ್ಲಿ ಜ್ಞಾನ ದೇಗುಲವೇ ತಲೆ ಎತ್ತಿ ನಿಲ್ಲುವಂತ ಮಾಡಿದ್ದಾರೆ.

ಇನ್ನು ಪ್ರತಿನಿತ್ಯ ಈ ಗ್ರಾಮದಿಂದ ಕುಮಟಾ ಪಟ್ಟಣ ಸೇರಿದಂತೆ ಶಾಲಾ, ಕಾಲೇಜಿಗೆ ಹೋಗುವ ಪ್ರತಿಯೊಬ್ಬರೂ ಇಲ್ಲಿಗೆ ಬಂದೇ ಬಸ್ ಹತ್ತಿಕೊಂಡು ಪ್ರಯಾಣಿಸಬೇಕು. ಗ್ರಾಮೀಣ ಭಾಗವಾಗಿರುವ ಕಾರಣ ಬಸ್ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಖಾಲಿ ಕೂರುವಂತಾಗಿತ್ತು. ಆದರೆ ಇದೀಗ ಗ್ರಂಥಾಲಯ ಪ್ರಾರಂಭಿಸಲಾಗಿದ್ದು, ಬೇರೆಡೆಯಿಂದ ಬಂದ ಪ್ರಯಾಣಿಕರು ಸೇರಿದಂತೆ ಬಹುತೇಕರು ಮೊಬೈಲ್ ಬಿಟ್ಟು ಗ್ರಂಥಾಲಯದಲ್ಲಿ ಇರೋ ಪುಸ್ತಕಗಳನ್ನು ಓದತೊಡಗಿದ್ದಾರೆ. ಇಲ್ಲಿ ಕೇವಲ ಕಥೆ, ಕಾದಂಬರಿ, ಚುಟುಕು ಪುಸ್ತಕಗಳಷ್ಟೇ ಅಲ್ಲದೆ ಜ್ಞಾನಪೀಠ ಪುರಸ್ಕೃತರ ಹಾಗೂ ಸಾಧಕರ ಪುಸ್ತಕದ ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಕೂಡ ಇಡಲಾಗಿದೆ.

ಇನ್ನು, ಹಿರಿಯರಿಗೆ ಬೇಕಾದ ಕಥೆ, ಚುಟುಕು ಸೇರಿದಂತೆ ಹತ್ತಾರು ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಪ್ರತಿನಿತ್ಯವೂ ಸಂಜೆ ಸಮಯಲ್ಲಿ ವಾಯುವಿಹಾರಕ್ಕೆ ಅಂತಾ ಹೋಗುವ ಹಿರಿಯರು ಸ್ವಲ್ಪ ಸಮಯ ಅಲ್ಲಿರುವ ತಮಗೆ ಬೇಕಾದ ಪುಸ್ತಕಗಳನ್ನ ಓದಿ ಹೋಗುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಹಿರಿಯರ ಜೊತೆ ಕಿರಿಯರು ಕೂಡ ಓದಿನತ್ತ ಮನ ಹರಿಸುತ್ತಿದ್ದಾರೆ. ಒಟ್ಟಾರೆ ಇಂದಿನ ಮೊಬೈಲ್ ಬಳಕೆಯಿಂದಾಗಿ ಪುಸ್ತಕ ಓದುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಸಮಯದಲ್ಲಿ, ಪುನೀತ್ ರಾಜಕುಮಾರ್​ ಅಭಿಮಾನಿ ಬಳಗ ಗ್ರಾಮೀಣ ಪ್ರದೇಶದಲ್ಲಿ ಜ್ಞಾನಾರ್ಜನೆ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಈ ಗ್ರಂಥಾಲಯದಿಂದಾಗಿ ಹೊಸ್ಕೇರಿ ಗ್ರಾಮದ ಜನರ ಈ ಮಾದರಿ ಕಾರ್ಯ ಇತರ ಗ್ರಾಮಗಳಿಗೂ ಮಾದರಿ ಆಗಿ ಇದೇ ರೀತಿ ಓದುವ ಜಿಜ್ಞಾಸೆ ಮೂಡಲಿ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ: ಹಾವೇರಿಯಲ್ಲಿದೆ ಸುಸಜ್ಜಿತ ಅತ್ಯಾಧುನಿಕ ಗ್ರಂಥಾಲಯ: ಜ್ಞಾನದ ಹಸಿವು ನೀಗಿಸುತ್ತಿವೆ ಈ ಗ್ರಂಥ ಭಂಡಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.