ETV Bharat / state

ಬಿಳಲಖಂಡ ಗ್ರಾಮದಲ್ಲಿ ಹದಗೆಟ್ಟ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ - Members of the Bhatkal Al-Bilal - Youth Sports Club

ಭಟ್ಕಳ ತಾಲೂಕಿನ ಬಿಳಲಖಂಡ ಗ್ರಾಮದ ಹೆದ್ದಾರಿ 66ರ ವರೆಗಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ದುರಸ್ತಿ ಮಾಡುತ್ತಿರುವ ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು
author img

By

Published : Nov 3, 2019, 12:01 PM IST

ಉತ್ತರಕನ್ನಡ: ಭಟ್ಕಳ ತಾಲೂಕಿನ ಬಿಳಲಖಂಡ ಗ್ರಾಮದ ಹೆದ್ದಾರಿ 66ರ ವರೆಗಿನ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆ ದುರಸ್ತಿ ಮಾಡುತ್ತಿರುವ ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು

ಈ ಬಗ್ಗೆ ಮುಠ್ಠಳ್ಳಿ ಗ್ರಾಮ ಪಂಚಾಯತಿ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರೂ ಕೂಡ ಗಮನ ಹರಿಸದ ಕಾರಣ, ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು ತಮ್ಮ ಕೆಲಸಕ್ಕೆ ಒಂದು ದಿನ ರಜೆ ಹಾಕಿ ರಸ್ತೆ ಗುಂಡಿಗಳಿಗೆ ಮಣ್ಣು ಮತ್ತು ಕಲ್ಲು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಪ್ರತಿ ಬಾರಿ ಮಳೆ ಬಂದಾಗಲೂ ಈ ಮಣ್ಣು ಕೊಚ್ಚಿ ಹೋಗಿ ಮತ್ತೆ ಹೊಂಡಗಳು ಸೃಷ್ಟಿಯಾಗುತ್ತಿವೆ. ಮುಠ್ಠಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 500 ಮನೆಗಳಿದ್ದು, ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಲಾರಿ, ಶಾಲಾ ಬಸ್​ಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದೆ.

ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ, ಗ್ರಾಮ ಪಂಚಾಯತಿ ಹಾಗೂ ಪುರಸಭೆ ಎದುರು ಧರಣಿ ನಡೆಸೋದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Intro:
ದಿನದ ಕೆಲಸ ಬಿಟ್ಟು ರಸ್ತೆಯ ಹೊಂಡಕ್ಕೆ ಮಣ್ಣು ಮಣ್ಣು ತುಂಬುತ್ತಿರುವ ಯುವಕರು

ಮನವಿ ಕೊಟ್ಟರು ಕಣ್ಮುಚ್ಚಿ ಕುಳಿತ ಮುಟ್ಟಳ್ಳಿ ಪಂಚಾಯತ ಹಾಗೂ ಭಟ್ಕಳ ಪುರಸಭೆ.?

ಕಳೆದ ಎರಡು ವರ್ಷದಿಂದ ರಸ್ತೆ ಮೇಲಿನ ಹೊಂಡಕ್ಕೆ ಮಣ್ಣು ತುಂಬಿ ಕೊಂಡು ಬರುತ್ತಿದ್ದಾರೆ ಅಲ್- ಬಿಲಾಲ್ ಯೂತ್‌ ಸ್ಪೋರ್ಟ್ಸ್ ಕ್ಲಬ್Body:Bhatkal_Pkg

Location_ಭಟ್ಕಳ

Slugs

ದಿನದ ಕೆಲಸ ಬಿಟ್ಟು ರಸ್ತೆಯ ಹೊಂಡಕ್ಕೆ ಮಣ್ಣು ಮಣ್ಣು ತುಂಬುತ್ತಿರುವ ಯುವಕರು

ಮನವಿ ಕೊಟ್ಟರು ಕಣ್ಮುಚ್ಚಿ ಕುಳಿತ ಮುಟ್ಟಳ್ಳಿ ಪಂಚಾಯತ ಹಾಗೂ ಭಟ್ಕಳ ಪುರಸಭೆ.?

ಕಳೆದ ಎರಡು ವರ್ಷದಿಂದ ರಸ್ತೆ ಮೇಲಿನ ಹೊಂಡಕ್ಕೆ ಮಣ್ಣು ತುಂಬಿ ಕೊಂಡು ಬರುತ್ತಿದ್ದಾರೆ ಅಲ್- ಬಿಲಾಲ್ ಯೂತ್‌ ಸ್ಪೋರ್ಟ್ಸ್ ಕ್ಲಬ್

Weblead: ಹೌದು ಎದೆಲ್ಲ ದ್ರಶ್ಯ ಕಂಡು ಬಂದಿದ್ದು ಭಟ್ಕಳ ತಾಲೂಕಿನ ಬಿಳಲಖಂಡ(ಗುಳ್ಮೆ)-ರಸ್ತೆಯಲ್ಲಿ,ಇಲ್ಲಿನ ಬಿಳಲಖಂಡ(ಗುಳ್ಮೆ)- ಹೆದ್ದಾರಿ -66ರ ವರೆಗಿನ ಈ ಗ್ರಾಮ‌ದ ಜನರಿಗೆ ತಿರುಗಾಡಲು ಇರುವ ರಸ್ತೆಯಿಲ್ಲದೇ ಹೊಂಡದಿಂದಲ್ಲಿಯೇ ಎರಡು ವರ್ಷ ಕಳೆದಿದೆ. ಗ್ರಾಮದ ಹೊಂಡಮಯ ರಸ್ತೆ ಸರಿಪಡಿಸಿಕೊಡಲು ಇಲ್ಲಿನ ಮುಠ್ಠಳ್ಳಿ ಗ್ರಾಮ ಪಂಚಾಯತ ಹಾಗೂ ಪುರಸಭೆಯೂ ಗಮನ ಹರಿಸದ ಹಿನ್ನೆಲೆ ಕುದ್ದು ಸ್ಥಳಿಯರು ಹಾಗೂ ಅಲ್- ಬಿಲಾಲ್ ಯೂತ್‌ ಸ್ಪೋರ್ಟ್ಸ್ ಕ್ಲಬ್ ಭಟ್ಕಳದ ಸದಸ್ಯರೆಲ್ಲರು ಸೇರಿ ಹೊಂಡದ ರಸ್ತೆಗೆ ಸ್ವಂತ ಖರ್ಚಿನಲ್ಲಿ ಮಣ್ಣು ತುಂಬಿಸಿ ಶ್ರಮಿಸಿ ಪಂಚಾಯತ ಹಾಗೂ ಪುರಸಭೆಗೆ ವಿರುದ್ದ ಪ್ರತಿಭಟಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಇದೇ ಅಲ್- ಬಿಲಾಲ್ ಯೂತ್ ಸ್ಪೋರ್ಟ್ಸ್ ಕ್ಲಬನ ಸದಸ್ಯರೆಲ್ಲರು ಸೇರಿ ಹೊಂಡದ ರಸ್ತೆಗೆ ಮಣ್ಣು ಕಲ್ಲು ತುಂಬಿಸಿ ಸ್ವಲ್ಪ ಮಟ್ಟಿಗೆ ಜನರು ತಿರುಗಾಡುವಂತೆ ಮಾಡಿದ್ದರು. ಇದೇ ಸ್ಥಿತಿ ಈಗ ಈ ವರ್ಷವೂ ಇದ್ದು ಮುಠ್ಠಳ್ಳಿ ಹಾಗೂ ಪುರಸಭೆಗೆ ಸಮರ್ಪಕ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನ ಇಲ್ಲದೇ ಮತ್ತೆ ತಾವೇ ಕುದ್ದು ತಮ್ಮೆಲ್ಲರ ಒಂದು ದಿನದ ಕೂಲಿ ಬಿಟ್ಟು ರಸ್ತೆಗಿಳಿದು ಮಣ್ಣು ತುಂಬಿಸಿದ್ದಾರೆ.

Look

V/o 1 - ಪಂಚಾಯತ ಹಾಗೂ ಪುರಸಭೆ ನಮ್ಮ ಗ್ರಾಮದ ರಸ್ತೆಯನ್ನು ಕಡೆಗಣಿಸುತ್ತಿದೆ. ಎರಡು ವರ್ಷದಲ್ಲಿ ಈ ಬಾರಿ ಸಾಕಷ್ಟು ಬಾರಿ ಅಧಿಕಾರಿಗಳು ಜನಪ್ರತಿನಿಧಿಗಳು ತಿರುಗಾಡಿದ್ದು ವ್ಯವಸ್ಥೆ ಹದಗೆಟ್ಟಿದ್ದರು ಸರಿಪಡಿಸಲು ಹೋಗಿಲ್ಲ. ಎರಡು ವರ್ಷ ಗ್ರಾಮಸ್ಥರೆಲ್ಲರು ಸೇರಿ ಹೊಂಡದ ರಸ್ತೆಗೆ ಮಣ್ಣು ಕಲ್ಲು ಹಾಕಿ ಮುಚ್ಚಿ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಮುಠ್ಠಳ್ಳಿ ಪಂಚಾಯತ ಹಾಗೂ ಪುರಸಭೆ ಇನ್ನಾದರು ಹೊಂಡದ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮುಂದೆ ಗ್ರಾಮಸ್ಥರು ರಸ್ತೆಗಿಳಿದು ಮಣ್ಣು ಕಲ್ಲು ಹಾಕಿ ಹೊಂಡ ಮುಚ್ಚಿಸುವ ಕೆಲಸ ಮಾಡದಂತೆ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ಆಗ್ರಹಿಸಿದರು.ಮುಂದಿನ ಬಾರಿ ಪಂಚಾಯತ ಹಾಗೂ ಪುರಸಭೆ ಮುಂದೆ ಧರಣಿ ಕುಳಿತುಕೊಳ್ಳಲಿದ್ದೇವೆ ಎಂದು ಹೇಳಿದರು

ಬೈಟ್ :ಜೀಯಾ-- ಅಲ್- ಬಿಲಾಲ್ ಯೂತ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ.

ಇಲ್ಲಿನ ಸಾಗರ ರಸ್ತೆ ಗುಳ್ಮೆ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ತೆರಳುವ ಸಂಪರ್ಕ ರಸ್ತೆಯ ಸ್ಥಿತಿ ವರ್ಷದ ಹರಕೆಯಂತೆ ಯಥಾ ಸ್ಥಿತಿಯಲ್ಲಿಯೇ ಇರಲಿದೆ. ಈ ವ್ಯಾಪ್ತಿಯಲ್ಲಿ ಸರಿ ಸುಮಾರು 500 ಮನೆಗಳಿದ್ದು, ಎರಡು ಶಾಲೆ ಕೂಡ ಇದ್ದು ಲಾರಿ, ಶಾಲಾ ವಾಹನ ಸೇರಿದಂತೆ ರೈಲ್ವೆ ನಿಲ್ದಾಣಕ್ಕೆ ತೆರಳುವ ಸಾವಿರಾರು ಪ್ರಯಾಣಿಕರು ಸಂಚರಿಸಲಿದ್ದಾರೆ. ಎರಡು ವರ್ಷದಿಂದ ಈ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಶ್ರಮಿಸುತ್ತಿದ್ದು ಇಲ್ಲಿನ ಅರ್ಧಭಾಗ ಮುಠ್ಠಳ್ಳಿ ಗ್ರಾಮ ಪಂಚಾಯತಿಗೂ ಹಾಗೂ ಇನ್ನರ್ಧ ಭಟ್ಕಳ ಪುರಸಭೆಯ ವ್ಯಾಪ್ತಿಗೆ ಬರಲಿದೆ. ಆದರೆ ಇಲ್ಲಿನ ತನಕ ಯಾವೊಂದು ಅಭಿವೃದ್ಧಿ ಮಾತ್ರ ಸಾಧ್ಯವಾಗಿಲ್ಲವಾಗಿದ್ದು, ಬೇಸರದ ಸಂಗತಿಯಾಗಿದೆ.

ಈ ಹಿಂದೆ ಮನವಿಗೆ ಯಾವುದೇ ಸ್ಪಂದನೆ ಸಿಗದೇ ಕುದ್ದು ಕೂಲಿಕಾರರು ಬಡವರೇ ವಾಸವಿದ್ದ ಈ ಗ್ರಾಮದಲ್ಲಿ ಅಲ್- ಬಿಲಾಲ್ ಯೂತ್ ಸ್ಪೋರ್ಟ್ಸ್ ಕ್ಲಬನ ಸಹಕಾರದೊಂದಿಗೆ ಇಲ್ಲಿನ ನಿವಾಸಿಗಳು ತಮ್ಮ ಒಂದು ದಿನ ದುಡಿಮೆ ಬಿಟ್ಟು ತಿರುಗಾಡುವ ರಸ್ತೆ ಸರಿಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಬಾರಿಯೂ ಅದನ್ನೇ ಮುಂದುವರೆಸಿದ್ದು, ಶನಿವಾರದಂದು ಬೆಳಿಗ್ಗೆಯಿಂದಲೇ ರಸ್ತೆಗಿಳಿದು ಶ್ರಮಿಸಿದ್ದಾರೆ. ನೂರಾರು ಮಂದಿ ಕ್ಲಬನ ಸದಸ್ಯರು ಹಾಗು ನಿವಾಸಿಗರು ಗುದ್ದಲಿ ಪಿಕಾಸಿ ಜೊತೆಗೆ ಬಾಡಿಗೆ ಜೆಸಿಬಿ ಹಿಡಿದು ಮಣ್ಣು ಮುಚ್ಚುವಲ್ಲಿ ಯಶ್ವಸಿಯಾಗಿದ್ದಾರೆ.

Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.