ETV Bharat / state

ಸೀಬರ್ಡ್ ನಿರಾಶ್ರಿತರಿಗೆ ಸಿಗದ ಉದ್ಯೋಗ: ಗುತ್ತಿಗೆ ಕಂಪೆನಿಗಳ ವಿರುದ್ಧ ಪ್ರತಿಭಟನೆ

ಗುತ್ತಿಗೆ ಕಂಪೆನಿಗಳು ಉದ್ಯೋಗ ನೀಡಿದವರಿಗೆ ಸರಿಯಾಗಿ ಪಿಎಫ್, ಇಎಸ್ಐ, ವಾರದ ರಜೆ ಕೊಡದೆ ವಂಚಿಸುತ್ತಿರುವ ಆರೋಪ‌ ಕೇಳಿಬಂದಿದೆ.

Protest by locals
ಸ್ಥಳೀಯರಿಂದ ಪ್ರತಿಭಟನೆ
author img

By

Published : Dec 23, 2022, 5:53 PM IST

ಗುತ್ತಿಗೆ ಕಂಪೆನಿಗಳ ವಿರುದ್ಧ ಸ್ಥಳೀಯರಿಂದ ಪ್ರತಿಭಟನೆ

ಕಾರವಾರ: ಸೀಬರ್ಡ್ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ದೇಶದ ರಕ್ಷಣಾ ವ್ಯವಸ್ಥೆಗೆ ಕೈಗನ್ನಡಿಯಾಗಿರುವ ಈ ಯೋಜನೆಗಾಗಿ ಸ್ಥಳೀಯರು ತಮ್ಮ ಮನೆ ಜಮೀನುಗಳನ್ನೇ ತ್ಯಾಗ ಮಾಡಿ ನಿರಾಶ್ರಿತರಾಗಿದ್ದಾರೆ. ಆದರೆ ಸೀಬರ್ಡ್​ನಲ್ಲಿ ಗುತ್ತಿಗೆ ಪಡೆದಿರುವ ಕಂಪೆನಿಗಳು ಇವರಲ್ಲಿ ಕೆಲವರಿಗಷ್ಟೇ ಉದ್ಯೋಗ ನೀಡಿದೆ. ಅದರಲ್ಲೂ ಸರಿಯಾಗಿ ಪಿಎಫ್, ಇಎಸ್ಐ, ವಾರದ ರಜೆ ಕೊಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸಿಟ್ಟಿಗೆದ್ದ ಸ್ಥಳೀಯರು ಹಾಗೂ ಹೊರಗುತ್ತಿಗೆ ನೌಕರರು ಸೀಬರ್ಡ್ ನೌಕಾನೆಲೆ ಗೇಟ್ ಎದುರು ಪ್ರತಿಭಟನೆ ನಡೆಸಿ ಕಾರವಾರದವರೆಗೆ ಪಾದಯಾತ್ರೆ ನಡೆಸಿದ್ದಾರೆ.

ನೌಕಾನೆಲೆಯ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರನೋರ್ವ ಕಾರವಾರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಆತನ ಪ್ರತಿಕೃತಿ ಇಟ್ಟು ಪ್ರತಿಭಟಿಸಿದ್ದಾರೆ. ಅರಗಾ ನೌಕಾನೆಲೆ ಗೇಟ್​ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸದ್ಯ ಗುತ್ತಿಗೆ ಕಂಪೆನಿ ಅಧಿಕಾರಿಗಳು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ಒಪ್ಪಿದ್ದು ನಾವು 20 ದಿನ ಕಾಲಾವಕಾಶ ನೀಡಿದ್ದೇವೆ. ಒಂದೊಮ್ಮೆ ಬೇಡಿಕೆ ಈಡೇರದೇ ಇದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದ್ದಾರೆ.

ಹಿನ್ನೆಲೆ..: ಏಷ್ಯಾದಲ್ಲಿಯೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಸದ್ಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿರುವ ಈ ನೌಕಾನೆಲೆಗಾಗಿ ಈ ಹಿಂದೆ ಕಾರವಾರ ಅಂಕೋಲಾ ಭಾಗದ ಸಾವಿರಾರು ಕುಟುಂಬಗಳು ತಮ್ಮ ಸರ್ವಸ್ವ ಧಾರೆ ಎರೆದಿದ್ದಾರೆ.

ಸರ್ಕಾರ ಪರಿಹಾರ ರೂಪದಲ್ಲಿ ಒಂದಿಷ್ಟು ಹಣ ನೀಡಿತ್ತಾದರೂ ಉದ್ಯೋಗ ಭರವಸೆ ಈ ಜನರಿಗೆ ಕನಸಾಗಿಯೇ ಉಳಿದಿದೆ. ನೌಕಾನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯರಿಗೆ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ಕೆಲವೇ ಕೆಲವು ಮಂದಿಗೆ ಮಾತ್ರ ಉದ್ಯೋಗ ನೀಡಿ ಉಳಿದ ಶೇ.‌80 ರಷ್ಟು ಕಾರ್ಮಿಕರನ್ನು ಹೊರ ರಾಜ್ಯದಿಂದಲೇ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಉದ್ಯೋಗ ನೀಡಿದವರಿಗೂ ಪಿಎಫ್, ಇಎಸ್ಐ ಸೇರಿದಂತೆ ಮೂಲಭೂತ ಸೌಕರ್ಯ ನೀಡದೆ ವಂಚಿಸುತ್ತಿದ್ದಾರೆ ಎಂಬುದು ಆರೋಪ.

ಇದನ್ನೂ ಓದಿ:ಗಂಗಾ ಕಲ್ಯಾಣ ಯೋಜನೆ ಅಕ್ರಮ: ಸಿಐಡಿ ತನಿಖೆಗೆ ಸರ್ಕಾರ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.