ETV Bharat / state

ಹೆದ್ದಾರಿಯಲ್ಲಿ ನಿಂತ ಮಳೆ ನೀರು: ಐಬಿಆರ್ ಕಾಮಗಾರಿ ದುರಸ್ತಿಗೆ  ಆಗ್ರಹ - ರಾಷ್ಟ್ರೀಯ ಹೆದ್ದಾರಿ 66

ಉತ್ತರ ಕನ್ನಡ ಜಿಲ್ಲೆ ಕಾರವಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣಾ ಕಾಮಗಾರಿಯಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸ್ಥಳೀಯರ ಪ್ರತಿಭಟನೆ
author img

By

Published : Sep 3, 2019, 2:32 AM IST

ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣಾ ಕಾಮಗಾರಿ ನಡೆಸುತ್ತಿರುವ ಐಆರ್​ಬಿಯ ಬೇಜವಾಬ್ದಾರಿಯಿಂದ ಹೆದ್ದಾರಿ ತುಂಬ ನೀರು ನಿಂತಿದ್ದು, ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸ್ಥಳೀಯರ ಪ್ರತಿಭಟನೆ

ನಗರದ ಬಿಣಗಾ ಬಳಿ ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಸಾರ್ವಜನಿಕರು, ಬೈಕ್​ ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಕೂಡಲೇ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.

ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಸಮಸ್ಯೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ತಹಶೀಲ್ದಾರರು ಹಾಗೂ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಐಆರ್​ಬಿ ಕಂಪನಿ ಜೆಸಿಬಿಗಳ ಮೂಲಕ ನೀರು ಹರಿದು ಹೋಗಲು ಅನುಕೂಲ ಮಾಡಲಾಯಿತು.

ಕಾರವಾರದ ಅರಗಾದ ಐಎನ್ಎಸ್ ಪಥಂಜಲಿ ಆಸ್ಪತ್ರೆ ಎದುರು ಎದೆಯೆತ್ತರಕ್ಕೆ ನೀರು ತುಂಬಿಕೊಂಡಿದ್ದು, ಬೈತಖೊಲ್ ಬಳಿ ಕೂಡ ಹೆದ್ದಾರಿಯಲ್ಲಿ ಜಲಾವೃತವಾಗಿದ್ದು, ಇಲ್ಲಿಯೂ ಜೆಸಿಬಿ ಮೂಲಕ ನೀರು ಹೋಗಲು ಅನುಕೂಲ ಮಾಡಲಾಯಿತು.

Intro:Body:ಭಾರಿ ಮಳೆಗೆ ಹೆದ್ದಾರಿಯಲ್ಲಿ ತುಂಬಿದ ನೀರು...ಸ್ಥಳೀಯರಿಂದ ದಿಢೀರ್ ಪ್ರತಿಭಟನೆ

ಕಾರವಾರ: ಪ್ರತಿ ಬಾರಿ ಮಳೆಯಾದಾಗ ರಾಷ್ಟ್ರೀಯ ಹೆದ್ದಾರಿ ದಾಟಲು ಸಾಧ್ಯವಾಗದಷ್ಟು ನೀರು ತುಂಬುತ್ತಿದ್ದರು ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ಕ್ರಮ‌ ಕೈಗೊಳ್ಳದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ನಗರದ ಬಿಣಗಾ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ೬೬ ವಿಸ್ತರಣಾ ಕಾಮಗಾರಿ ನಡೆಸುತ್ತಿರುವ ಐಆರ್ ಬಿ ಕಂಪನಿ ಅರೆಬರೆ ಕಾಮಗಾರಿ ನಡೆಸಿದರ ಪರಿಣಾಮವಾಗಿ ಮಳೆ ನೀರು ಹರಿದುಹೊಗಲು ಸರಿಯಾದ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿಯೇ ನಿಂತುಕೊಳ್ಳುತ್ತಿದೆ. ಇಂದು ಕೂಡ ಕಾರವಾರದಲ್ಲಿ ಬಿಟ್ಟು ಬಿಟ್ಟು ಭಾರಿ ಮಳೆಯಾಗಿದ್ದು, ಹೆದ್ದಾರಿಯಲ್ಲಿ ಭಾರಿ ನೀರು ಸಂಗ್ರಹವಾಗಿದೆ. ಇದರಿಂದ ಬೈಕ್ ಮತ್ತು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ರಸ್ತೆಯಂಚಿನ ಮನೆಗಳಿಗೆ ನೀರು ನುಗ್ಗಲು ಪ್ರಾರಂಭವಾಗಿತ್ತು.
ಆದರೆ ಈ ವೇಳೆ ಸಿಟ್ಟಿಗೆದ್ದ ಸ್ಥಳೀಯರು ಹೆದ್ದಾರಿ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು‌. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ಸಮಸ್ಯೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ತಹಶೀಲ್ದಾರರು ಹಾಗೂ ಪೊಲೀಸರು ಮನವೊಲಿಸಿ ಐಆರ್ ಬಿ ಕಂಪನಿ ಜೆಸಿಬಿಗಳ ಮೂಲಕ ನೀರು ಹರಿದುಹೊಗಲು ಸ್ಥಳಾವಕಾಶ ಮಾಡಿಕೊಡುವುದಾಗಿ ತಕ್ಷಣಜೆಸಿಬಿ ಮೂಲಕ ನೀರು ಹೊಗಲು ಅನುಕೂಲ ಮಾಡಿಕೊಡಲಾಯಿತು.
ಇದಲ್ಲದೆ ಕಾರವಾರದಲ್ಲಿ ಬೆಳಿಗ್ಗೆಯಿಂದಲೂ ಮಳೆಯಾಗುತ್ತಿದ್ದ ಕಾರಣ ಅರಗಾದ ಐಎನ್ಎಸ್ ಪಥಜಂಲಿ ಆಸ್ಪತ್ರೆ ಎದುರು ಎದೆಯೆತ್ತರಕ್ಕೆ ನೀರು ತುಂಬಿಕೊಂಡಿದ್ದು, ಬೈತಖೊಲ್ ಬಳಿ ಕೂಡ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ಜೆಸಿಬಿ ಮೂಲಕ ನೀರು ಹೊಗಲು ಅನುಕೂಲ ಮಾಡಿಕೊಡಲಾಗುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.