ETV Bharat / state

ಡಿಸಿ ಕಚೇರಿಗೆ ಮುತ್ತಿಗೆ: ಮೀನುಗಾರ ಮಹಿಳೆಯರ ಪ್ರತಿಭಟನೆ

ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಇದಕ್ಕೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬೆಂಬಲ ನೀಡಿ ತ್ವರಿತಗತಿಯಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

author img

By

Published : Jun 24, 2019, 7:15 PM IST

ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಮೀನುಗಾರ ಮಹಿಳೆಯರ ಪ್ರತಿಭಟನೆ

ಕಾರವಾರ: ಮುಖ್ಯ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಮಾರುಕಟ್ಟೆ ಬಳಿ ಕಳೆದ ಮೂರು ವರ್ಷಗಳಿಂದ ನಿರ್ಮಿಸುತ್ತಿರುವ ನೂತನ ಮೀನು ಮಾರುಕಟ್ಟೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿದ್ದ ಮೀನು ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದ್ದು, ಇದೀಗ ಚತುಷ್ಪಥ ಹೆದ್ದಾರಿಗೆ ಒತ್ತುವರಿಯಾಗಿದೆ. ಇದರಿಂದ ಇಕ್ಕಟ್ಟಾದ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.

ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಮೀನುಗಾರ ಮಹಿಳೆಯರ ಪ್ರತಿಭಟನೆ

ಈ ಹಿಂದೆ ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್ ಬಿ, ಗಾಂಧಿ ಮಾರುಕಟ್ಟೆ ಬಳಿ ಅಂಗಡಿ ತೆರವಿಗೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ಜೂ.10 ರಂದು ನಡೆಯಲಿದ್ದು, ಬಳಿಕ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ನೀಡಿದ ಅವಧಿ ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಇದಕ್ಕೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬೆಂಬಲ ನೀಡಿ ತ್ವರಿತಗತಿಯಲ್ಲಿ ಮೀನುಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹಳೆ ಮೀನುಮಾರುಕಟ್ಟೆ ತೆರವುಗೊಳಿಸಿದ ಬಳಿಕ ಹೊಸ ಮೀನುಮಾರುಕಟ್ಟೆಗೆ ನೀಲನಕ್ಷೆ ತಯಾರಿಸಿದ್ದು, ಅದರಂತೆ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ, ಜಾಗದಲ್ಲಿನ ಕೆಲ ದಿನಸಿ ಅಂಗಡಿಕಾರರು ನ್ಯಾಯಾಲಯದ ಮೊರೆ ಹೊಗಿದ್ದು, ಇದು ನಿರ್ಮಾಣಕ್ಕೆ ತಡೆಯಾಗಿದೆ. ಪ್ರಕರಣದ ವಿಚಾರಣೆ ಇದೆ 27 ರಂದು ನಡೆಯಲಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮೀನುಮಾರುಕಟ್ಟೆ ನಿರ್ಮಾಣ ಮಾಡುತ್ತೇವೆ. ಇಲ್ಲವೆ, ತಾತ್ಕಾಲಿಕ ಮೀನುಮಾರುಕಟ್ಟೆ ಬಗ್ಗೆ ಚರ್ಚಿಸಿ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್​ ಕುಮಾರ್ ತಿಳಿಸಿದ್ದಾರೆ.

Intro:
ಈಡೇರದ ಭರವಸೆ.. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮೀನುಗಾರ ಮಹಿಳೆಯರ ಪ್ರತಿಭಟನೆ
ಕಾರವಾರ: ಮುಖ್ಯ ಮೀನುಮಾರುಕಟ್ಟೆ ನಿರ್ಮಾಣಕ್ಕೆ  ಮೀನಮೇಷ ಏಣಿಸುತ್ತಿರುವುದನ್ನು ಖಂಡಿಸಿ ಮೀನುಗಾರ ಮಹಿಳೆಯರು ಇಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ಮಾರುಕಟ್ಟೆ ಬಳಿ ಕಳೆದ ಮೂರು ವರ್ಷಗಳಿಂದ ನಿರ್ಮಿಸುತ್ತಿರುವ ನೂತನ ಮೀನುಮಾರುಕಟ್ಟೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಆದರೆ ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಿರ್ಮಿಸಿದ್ದ ಮೀನುಮಾರುಕಟ್ಟೆಯು ಶಿಥಿಲಾವಸ್ಥೆ ತಲುಪಿದ್ದು, ಇದೀಗ ಚತುಷ್ಪಥ ಹೆದ್ದಾರಿಗೆ ಒತ್ತುವರಿಯಾಗಿದೆ. ಇದರಿಂದ ಇಕ್ಕಟ್ಟಾದ  ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ಮೀನುಗಾರ ಮಹಿಳೆಯರು ಮಾರುಕಟ್ಟೆಯನ್ನೆ ಅರೆಬರೆಯಾಗಿದ್ದ ಮೀನುಮಾರುಕಟ್ಟೆ ಬಳಿ‌ಸ್ಥಳಾಂತರಿಸಿ ಪ್ರತಿಭಟಿಸಿದ್ದರು.
ಈ ವೇಳೆ ಸ್ಥಳಕ್ಕಾಗಮಿಸಿದ್ದ ಕಾರವಾರ ಉಪವಿಭಾಗಾಧಿಕಾರಿ ಅಭಿಜಿನ್ ಬಿ ಗಾಂಧಿ ಮಾರುಕಟ್ಟೆ ಬಳಿ ಅಂಗಡಿ ತೆರವಿಗೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ಜೂ.೧೦ ರಂದು ನಡೆಯಲಿದ್ದು, ಬಳಿಕ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ನೀಡಿದ ಅವಧಿ ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಮೀನುಗಾರರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದಕ್ಕೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬೆಂಬಲ ನೀಡಿ ತ್ವರಿತಗತಿಯಲ್ಲಿ ಮೀನುಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ತಾತ್ಕಾಲಿಕ ಮೀನುಮಾರುಕಟ್ಟೆ ಜಾಗದಲ್ಲಿ ಹೆದ್ದಾರಿ ನಿರ್ಮಾಣವಾಗಿದ್ದರಿಂದ ಜಾಗ ಚಿಕ್ಕದಾಗಿದ್ದು, ದುಸ್ಥಿತಿಗೆ ತಲುಪಿದೆ. ಇದರಿಂದ ಮಳೆಗಾಲ ಕಳೆಯುವುದು ಕೂಡ ಕಷ್ಟವಾಗಿದೆ. ಆದರೆ ವರ್ಷದಲ್ಲಿ ನಿರ್ಮಿಸಿಕೊಡುವುದಾಗಿ ತೆರವುಗೊಳಿಸಿದ್ದ ಮೀನು ಮಾರುಕಟ್ಟೆಯನ್ನು ಮೂರು ವರ್ಷವಾದರು ನಿರ್ಮಿಸಿಲ್ಲ. ಕೇಳಿದರೇ ನ್ಯಾಯಾಲಯದಲ್ಲಿರುವುದಾಗಿ ತಿಳಿಸುತ್ತಿದ್ದಾರೆ. ಆದರೆ ಇದರಿಂದ ಮೀನು ಮಾರಾಟಕ್ಕೆ ತೊಂದರೆಯಾಗಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮೀನು ಮಾರಾಟಗಾರ ಮಹಿಳೆ ಸುಶೀಲಾ ಹರಿಕಂತ್ರ ಎಚ್ಚರಿಸಿದ್ದಾರೆ.
ಹಳೆ ಮೀನುಮಾರುಕಟ್ಟೆ ತೆರವುಗೊಳಿಸಿದ ಬಳಿಕ ಹೊಸ ಮೀನುಮಾರುಕಟ್ಟೆಗೆ ನೀಲನಕ್ಷೆ ತಯಾರಿಸಿದ್ದು, ಅದರಂತೆ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ಜಾಗದಲ್ಲಿನ ಕೆಲ ದಿನಸಿ ಅಂಗಡಿಕಾರರು ನ್ಯಾಯಾಲಯದ ಮೊರೆ ಹೊಗಿದ್ದು, ಇದು ನಿರ್ಮಾಣಕ್ಕೆ ತಡೆಯಾಗಿದೆ. ಆದರೆ ಪ್ರಕರಣದ ವಿಚಾರಣೆ ಇದೆ ೨೭ ರಂದು ನಡೆಯಲಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮೀನುಮಾರುಕಟ್ಟೆ ನಿರ್ಮಾಣ ಇಲ್ಲವೆ, ತಾತ್ಕಾಲಿಕ ಮೀನುಮಾರುಕಟ್ಟೆ ಬಗ್ಗೆ ಚರ್ಚಿಸಿ ಕ್ರಮ‌ಕೈಗೊಳ್ಳಲಾಗುವುದು. ಸದ್ಯ ಇರುವ ತಾತ್ಕಾಲಿಕ ಮೀನುಮಾರುಕಟ್ಟೆಯಲ್ಲಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ ತಿಳಿಸಿದ್ದಾರೆ. Body:ಕConclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.