ETV Bharat / state

ದಾಂಡೇಲಿಯಲ್ಲಿ ವೇಶ್ಯಾವಾಟಿಕೆ ಶಂಕೆ: 8 ಯುವತಿಯರ ರಕ್ಷಣೆ

ಡಾನ್ಸ್ ಮತ್ತು ವೇಶ್ಯಾವಾಟಿಕೆ ನಡೆಸಲು ಅಡ್ಡೆ ಮಾಡಿಕೊಂಡಿದ್ದ ರೆಸಾರ್ಟ್​ ಮೇಲೆ ಪೋಲಿಸರು ದಾಳಿ ನಡೆಸಿದ್ದು, ಆಂಧ್ರಪ್ರದೇಶದ 8 ಯುವತಿಯರನ್ನು ರಕ್ಷಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.

Prostitution suspected in Dandeli
ದಾಂಡೇಲಿಯಲ್ಲಿ ವೇಶ್ಯಾವಾಟಿಕೆ ಶಂಕೆ: 8 ಯುವತಿಯರ ರಕ್ಷಣೆ
author img

By

Published : Nov 17, 2022, 6:52 PM IST

ಕಾರವಾರ: ಡಾನ್ಸ್ ಮತ್ತು ವೇಶ್ಯಾವಾಟಿಕೆ ನಡೆಸಲು ಅಡ್ಡೆ ಮಾಡಿಕೊಂಡಿದ್ದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ಆಂಧ್ರಪ್ರದೇಶ ಮೂಲದ 8 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ನವೆಂಬರ್ 14 ರಂದು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದಾಂಡೇಲಿಯ ಹರೇಗಾಳಿ ಗ್ರಾಮದ ಗಣೇಶಗುಡಿ ರಸ್ತೆ ಬರ್ಚಿ ಕ್ರಾಸ್ ಬಳಿಯ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ಆಂಧ್ರಪ್ರದೇಶದಿಂದ ಹುಡುಗಿಯರನ್ನು ಕರೆತಂದ ಚಾಲಕ ಕಮ್ ಏಜೆಂಟ್ ಮತ್ತು ರೆಸಾರ್ಟ್‌ನ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

ದಾಳಿಗೊಳಗಾದ ರೆಸಾರ್ಟ್‌ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಪಾರ್ಟಿ ಆಯೋಜಿಸಿದ್ದರಿಂದ ಎಂಟು ಹುಡುಗಿಯರನ್ನು ನೃತ್ಯ ಮಾಡಲು ಕಳುಹಿಸಿಕೊಡುವಂತೆ ಕೇಳಿದ್ದರು. ಅದರಂತೆ ಹುಡುಗಿಯರನ್ನು ಕರೆತರಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರೆಸಾರ್ಟ್ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಮಧುಸೂಧನ್ ಎಂಬವರು ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ಪಾರ್ಟಿ ಮತ್ತು ಇತರ ಸೇವೆಗಳಿಗಾಗಿ ಹುಡುಗಿಯರನ್ನು ನಿಯಮಿತವಾಗಿ ಸರಬರಾಜು ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಕಾರವಾರ: ಸ್ನೇಹಿತರನ್ನೇ ಅಪಹರಿಸಿ 5 ಕೋಟಿಗೆ ಬೇಡಿಕೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.