ಶಿರಸಿ: ಇಲ್ಲಿನ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿಂಬೆ ತುಂಬಿದ್ದ ವಾಹನ ಪಲ್ಟಿಯಾಗಿ ಬಿದ್ದ ಪರಿಣಾಮ ಸಾರ್ವಜನಿಕರು ದಾಳಿಂಬೆ ತೆಗೆದುಕೊಂಡು ಹೋಗಲು ಮುಗಿಬಿದ್ದ ಘಟನೆ ಬಿಸಗೋಡು ಕ್ರಾಸ್ ಬಳಿ ನಡೆದಿದೆ.
ಮಹರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ಲಾರಿ ತಿರುವಿನಲ್ಲಿ ಪಲ್ಟಿಯಾಗಿದೆ. ವಾಹನದಲ್ಲಿ ತುಂಬಿದ್ದ ದಾಳಿಂಬೆ ರಸ್ತೆ ಮಧ್ಯದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನುವನೋಡಿದ ಸ್ಥಳೀಯರು ಹಣ್ಣುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.
ವಾಹನ ಪಲ್ಟಿಯಾಗಿದ್ದರಿಂದ ಚಾಲಕನಿಗೆ ಗಾಯವಾಗಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.