ಕಾರವಾರ: ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಕಾರವಾರವನ್ನು ವಿಶೇಷ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿದ್ದು, ಬುಧವಾರ ನಗರದ ಎಲ್ಲೆಡೆಯೂ ಬ್ಯಾರಿಕೇಡ್ ಹಾಕಿ ಅನಗತ್ಯ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಹೌದು, ಕಾರವಾರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿತ್ತಾದರೂ ಕೆಲವರು ಮೆಡಿಸಿನ್, ಆಸ್ಪತ್ರೆ ಹೇಳಿ ಅನಗತ್ಯ ಓಡಾಟ ನಡೆಸಿದ್ದರು.
ಆದರೆ ಇದರಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ ಇದೀಗ ಕಾರವಾರದಲ್ಲಿ ಕೆಲ ಪ್ರದೇಶಗಳನ್ನು ವಿಶೇಷ ಕಂಟೋನ್ಮೆಂಟ್ ವಲಯಗಳೆಂದು ಗುರುತಿಸಿದ್ದು ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.
ಇದನ್ನೂ ಓದಿ: ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್ಓ ಹೊಸ ನೀತಿಯ ಪೂರ್ಣ ಮಾಹಿತಿ
ಇದೀಗ ನಗರದಲ್ಲಿ ಅನಗತ್ಯ ಓಡಾಟ ತಡೆಯಲು ತಹಶೀಲ್ದಾರ್ ವಿ.ಆರ್.ಕಟ್ಟಿ ಆದೇಶದಂತೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್ ಐ ಸಂತೋಷ್ ಕುಮಾರ್ ನಗರದ ಎಲ್ಲೆಡೆಯೂ ಒಳ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಅನಗತ್ಯ ಓಡಾಟ ತಡೆಯಲು ಮುಂದಾಗಿದ್ದಾರೆ.
ಕಂಡ ಕಂಡ ರಸ್ತೆಯಲ್ಲಿ ಪೊಲೀಸರ ಕಣ್ಣತಪ್ಪಿಸಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಮುಖ್ಯ ರಸ್ತೆಯಲ್ಲಿ ಮಾತ್ರ ಅನುಮತಿ ಇದ್ದವರಿಗೆ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.