ಶಿರಸಿ: ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆಯೊಂದಿಗೆ ಬಂಧಿಸಿ, ಆರೋಪಿಯಿಂದ 2 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ಶಿರಸಿಯ ನಿಲೇಕಣಿ ಬಳಿ ನಡೆದಿದೆ.
ಶಿಗ್ಗಾಂವ ತಾಲೂಕಿನ ಬಾಷಾಸಾಬ್ ಬಂಧಿತ ಆರೋಪಿ. ಈತ ಬೆಳಗಾವಿಯಿಂದ ಗಾಂಜಾ ತಂದು ಇಲ್ಲಿನ ಯುವಕರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಗಾಂಜಾ ಖರಿದೀಸಲು ಬಂದಿದ್ದ ಸುಮಾರು 10-15 ಯುವಕರು ಪೊಲೀಸರ ದಾಳಿಯ ವೇಳೆ ತಪ್ಪಿಸಿಕೊಂಡಿದ್ದು, ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯ ಗಾಂಜಾ ದಲ್ಲಾಳಿಯನ್ನು ಹಿಡಿಯಲು ಈಗಾಗಲೇ ಒಂದು ತಂಡ ರಚನೆ ಮಾಡಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡಿಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ನೇತೃತ್ವದಲ್ಲಿ ಪಿಎಸ್ಐ ಶಿವಾನಂದ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.