ETV Bharat / state

ಮೊಬೈಲ್ ಕಳ್ಳತನ : 24 ಗಂಟೆಗಳಲ್ಲಿ ಖಾಕಿ ಬಲೆಗೆ ಬಿದ್ದ ಆರೋಪಿ - Sirsi crime latest news

ಮೊಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಾರುಕಟ್ಟೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Mobile theft
Mobile theft
author img

By

Published : Sep 18, 2020, 7:08 PM IST

ಶಿರಸಿ : ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಮೊಬೈಲ್ ಎಗರಿಸಿದ್ದ ಆರೋಪಿಯನ್ನು ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಉಸುರಿಯ ದರ್ಶನ್ ಕೃಷ್ಣಾ ನಾಯ್ಕ್ ಮಾಡನಕೇರಿ ಬಂಧಿತ ಆರೋಪಿ. ಕೆರೆಗುಂಡಿ ರಸ್ತೆಯ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 7 ಸಾವಿರ ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಲಾದ ಬೈಕ್‌ಅನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಲಾಗಿದೆ.

ಸೆ.17 ರಂದು ದೀಪಾ ರಾಘವೇಂದ್ರ ಶೆಟ್ಟಿ ಎಂಬುವರು ಕೆಲಸ ಮುಗಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆಗೆ ಹೋಗುತ್ತಿದ್ದರು. ಈ ವೇಳೆ ನಗರದ ಪಿ.ಡಬ್ಲ್ಯೂಡಿ ಐ.ಬಿ ಕ್ರಾಸ್ ಬಳಿ ಆರೋಪಿ ಮೊಬೈಲ್ ಎಗಿರಿಸಿ ಪರಾರಿಯಾಗಿದ್ದನು. ಈ ಕುರಿತು ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ಪತ್ತೆಗೆ ಜಾಲ ಬೀಸಿದ್ದ ಮಾರುಕಟ್ಟೆ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿ, ಮೊಬೈಲ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.