ಕಾರವಾರ: ಕೊರೊನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ವಿತರಿಸುತ್ತಿರುವ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಲು ಜನ ಸಾಮಾಜಿಕ ಅಂತರ ಮರೆತು ಕಾರ್ಮಿಕ ಇಲಾಖೆ ಕಚೇರಿ ಎದುರು ಮುಗಿಬಿದ್ದಿದ್ದರು.
ನಗರದ ಹಬ್ಬುವಾಡ ರಸ್ತೆಯಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಟೈಲರಿಂಗ್ ಹಾಗೂ ಅಗಸ ವೃತ್ತಿ ಮಾಡುತ್ತಿರುವವರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ನೂರಾರು ಜನರು ಕಚೇರಿ ಬಳಿ ಆಗಮಿಸಿದ್ದರು. ಈ ವೇಳೆ ಸಾಮಾಜಿಕ ಅಂತರದ ನಿಯಮ ಮರೆತು ಗುಂಪು ಗುಂಪಾಗಿ ನಿಂತಿದ್ದ ದೃಶ್ಯ ಕಂಡು ಬಂತು.
ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ. ಕಳೆದ ಒಂದು ವಾರದಿಂದಲೂ ಜನ ಇದೇ ರಿತಿ ನಿರ್ಲಕ್ಷ್ಯ ವಹಿಸಿ ಗುಂಪು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನೂ ನೇಮಿಸಿಲ್ಲ ಎನ್ನಲಾಗಿದೆ.