ETV Bharat / state

ಬಾಕ್ಸ್​ನಲ್ಲಿ ಹಸುಗೂಸು ಇಟ್ಟು ರಸ್ತೆ ಬದಿ ಬಿಸಾಕಿದ ಪೋಷಕರು: ಸಿದ್ದಾಪುರದಲ್ಲಿ ಅಮಾನವೀಯ ಘಟನೆ

author img

By

Published : Dec 20, 2022, 10:08 AM IST

ರಸ್ತೆ ಬದಿ ಮಗು ಬಿಸಾಕಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಅಂಗವೈಕಲ್ಯ ಹೊಂದಿದ್ದರಿಂದ ಮಗುವನ್ನು ಬಿಟ್ಟುಹೋಗಿದ್ದಾರೋ ಅಥವಾ ಇನ್ನಾವುದೇ ಕಾರಣಕ್ಕೆ ಬಿಟ್ಟು ಹೋಗಿದ್ದಾರೋ ಎನ್ನುವ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಮಗುವಿಗೆ ಸೀಳು ತುಟಿ ಎಂದು ರಸ್ತೆಯಲ್ಲಿ ಬಿಸಾಕಿ ಹೋದ ಪೋಷಕರು; ಸಿದ್ದಾಪುರದಲ್ಲೊಂದು ಅಮಾನವೀಯ ಘಟನೆ
Parents who left the child on the road because of cleft lip; An inhuman incident in Siddapur

ಕಾರವಾರ: ಸೀಳು ತುಟಿಯ ಹಸುಗೂಸೊಂದನ್ನು ಖಾಲಿ ಬಾಕ್ಸ್‌ನಲ್ಲಿ ಇಟ್ಟು ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ತಾಲೂಕಿನ ತ್ಯಾರ್ಸಿ-ಕಡಕೇರಿ ತಿರುವಿನ ಹತ್ತಿರದ ಗುಡ್ಡೆಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಮಗು ಬಿಸಾಕಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ಆರ್. ದೊಡ್ಡನಿ ಅವರನ್ನು ಸಂಪರ್ಕಿಸಿದ್ದಾರೆ. ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತಂದು ಹಾಲುಣಿಸಿ ಉಪಚರಿಸಲಾಗಿದೆ.

ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಮಗುವನ್ನು ಶಿರಸಿಯ ದತ್ತು ಮಕ್ಕಳ ಕೇಂದ್ರಕ್ಕೆ ತಲುಪಿಸುವುದಾಗಿ ತಿಳಿಸಿದ್ದಾರೆ. ಅಂಗವೈಕಲ್ಯ ಹೊಂದಿದ್ದರಿಂದ ಮಗುವನ್ನು ಬಿಟ್ಟುಹೋಗಿದ್ದಾರೋ ಅಥವಾ ಇನ್ನಾವುದೇ ಕಾರಣಕ್ಕೆ ಬಿಟ್ಟು ಹೋಗಿದ್ದಾರೋ ಎನ್ನುವ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಮಹಾಂತೇಶ ಕುಂಬಾರ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ ಬೋನಿಗೆ ಬಿದ್ದ ಹುಲಿ: ನಿಟ್ಟುಸಿರು ಬಿಟ್ಟ ಜೋಯಿಡಾ ಜನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.