ಭಟ್ಕಳ (ಉತ್ತರ ಕನ್ನಡ): ಮೇಯಲು ಬಿಟ್ಟ ಜಾನುವಾರುವನ್ನು ಮರಕ್ಕೆ ಕಟ್ಟಿ ಹಾಕಿ, ರಾತ್ರಿ ವೇಳೆ ವಾಹನದಲ್ಲಿ ಕದ್ದೊಯ್ಯಲು ಯತ್ನಿಸಿದ್ದ ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದಾರೆ.
ತಾಲೂಕಿನ ಮುರುಡೇಶ್ವರ ಕಾಯ್ಕಿಣಿಯ ಮುಡಕೇರಿ ರೈಲ್ವೆ ಸೇತುವೆ ಆರೋಪಿಯನ್ನು ಬಂಧಿಸಲಾಗಿದೆ. ಮುರುಡೇಶ್ವರ ನ್ಯಾಷನಲ್ ಕಾಲೋನಿ 5ನೇ ಕ್ರಾಸ್ ನಿವಾಸಿ ಯಾಸೀನ್ ದೊನ್ನಾ ಬಂಧಿತ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ನಾಯ್ಕ, ಸಾಹಿಲ್ ದೊನ್ನಾ, ಅನುರಾಜ್ ನಾಯ್ಕ, ಮಾದೇವ ನಾಯ್ಕ ಎಂಬ ನಾಲ್ವರು ಪರಾರಿಯಾಗಿದ್ದಾರೆ. ಈ ಬಗ್ಗೆ ಜಾನುವಾರು ಮಾಲೀಕ ಕಾಯ್ಕಿಣಿ ಮುಡಕೇರಿಯ ಚಂದ್ರಶೇಖರ ನಾಯ್ಕ ಪೊಲೀಸರಿಗೆ ದೂರು ನೀಡಿದ್ದು, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.