ETV Bharat / state

ಮನೆ ಕಟ್ಟಲು ಬಿಡಿ ಎಂದು ಬೇಡಿಕೊಂಡ ರೈತ: ಅಡಿಪಾಯವನ್ನೇ ಕಿತ್ತು ಹಾಕಿದ್ರಾ ಅಧಿಕಾರಿಗಳು!?

ಕಟ್ಟಿದ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ಕಟ್ಟಿದ್ದ ಮನೆಯ ತಳಪಾಯವನ್ನು ಅರಣ್ಯಾಧಿಕಾರಿಗಳು ಕಿತ್ತು ಹಾಕಿರುವ ಆರೋಪ ಕೇಳಿ ಬಂದಿದೆ.

ಮನೆಯ ಅಡಿಪಾಯವನ್ನೇ ಕಿತ್ತು ಹಾಕಿದ ಅಧಿಕಾರಿಗಳು
author img

By

Published : Oct 12, 2019, 9:38 PM IST

ಶಿರಸಿ: ಅರಣ್ಯ ಭೂಮಿಯನ್ನೇ ಆಶ್ರಯಿಸಿದ್ದ ಒಬ್ಬ ಬಡ ರೈತನ ಬದುಕು ಬೀದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮನೆಯ ಅಡಿಪಾಯವನ್ನೇ ಕಿತ್ತು ಹಾಕಿದ್ರಾ ಅಧಿಕಾರಿಗಳು?

ಕಟ್ಟಿದ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ಮನೆಯ ತಳಪಾಯವನ್ನು ಅರಣ್ಯಾಧಿಕಾರಿಗಳು ಕಿತ್ತು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಿದ್ದಾಪುರದ ಮುಂಡಿಗೆಮನೆಯಲ್ಲಿ ಈ ಘಟನೆ ನಡೆದಿದೆ. ಮನೆಗಾಗಿ ಜಿಪಿಎಸ್ ಆದ ಭೂಮಿ ಹೊಳೆಯ ಸಮೀಪದಲ್ಲಿ ಬರೋದ್ರಿಂದ ಅತಿವೃಷ್ಟಿಯ ಸಂದರ್ಭದಲ್ಲಿ ಮನೆ ಮುಳುಗಡೆಯಾಗಬಹುದು ಅನ್ನೋ ಭಯದಿಂದ ಕಳೂರಿನ ಪುಟ್ಟಾ ಗಿರಿಯಾ ನಾಯ್ಕ ಎನ್ನುವವರು ಜಿಪಿಎಸ್ ಜಾಗಕ್ಕಿಂತ ಸ್ವಲ್ಪ ಮೇಲುಗಡೆ ಮನೆ ಕಟ್ಟುತ್ತಿದ್ದರು. ಇದನ್ನು ತಿಳಿದ ಅರಣ್ಯಾಧಿಕಾರಿಗಳು ಮನೆ ಅಡಿಪಾಯ ಕಿತ್ತು ಹಾಕಿದ್ದಾರೆ ಎನ್ನಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಮನೆಗೆ ಬಂದು ಮನೆಯನ್ನು ಕೆಡವುತ್ತೇವೆ ಅಂತ ಹೇಳುತ್ತಾ ಬಂದಿದ್ದರು. ಅತಿವೃಷ್ಟಿ ಆದ್ರೆ ಮನೆಗೆ ತೊಂದರೆಯಾಗುತ್ತೆ. ಆದ್ದರಿಂದ ಮನೆಯನ್ನ ಸ್ವಲ್ಪ ಮೇಲುಗಡೆ ಕಟ್ಟಿಕೊಳ್ಳುತ್ತೇವೆ. ಜಿಪಿಎಸ್ ಆದ ಜಾಗವನ್ನ ಅರಣ್ಯ ಇಲಾಖೆಗೆ ಬಿಟ್ಟು ಕೊಡುತ್ತೇವೆ. ದಯವಿಟ್ಟು ಮನೆ ಮುಂದುವರೆಸಲು ಅವಕಾಶ ನೀಡಿ ಅಂತ ಪುಟ್ಟಾ ನಾಯ್ಕ ಕೇಳಿಕೊಂಡರೂ ಕೂಡ ಅರಣ್ಯಾಧಿಕಾರಿಗಳು ಬಿಟ್ಟಿಲ್ಲವಂತೆ. ಅರಣ್ಯಾಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಶಿರಸಿ :
ಅರಣ್ಯ ಭೂಮಿಯನ್ನ ಆಶ್ರಯಿಸಿದ ಒಬ್ಬ ಬಡ ರೈತನ ಬದುಕು ಬೀದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಟ್ಟಿದ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ಮಾನವೀಯತೆ ಮರೆತು ಕಟ್ಟಿದ್ದ ಮನೆಯ ತಳಪಾಯವನ್ನು ಅರಣ್ಯಾಧಿಕಾರಿಗಳು ಕೆಡವಿದ ಘಟನೆ ಸಿದ್ದಾಪುರದ ಮುಂಡಿಗೆಮನೆಯಲ್ಲಿ ನಡೆದಿದೆ.

ಮನೆಗಾಗಿ ಜಿಪಿಎಸ್ ಆದ ಭೂಮಿ ಹೊಳೆಯ ಸಮೀಪದಲ್ಲಿ ಬರೋದ್ರಿಂದ ಅತಿವೃಷ್ಟಿಯ ಸಂದರ್ಭದಲ್ಲಿ ಮನೆ ಮುಳುಗಡೆಯಾಗಬಹುದು ಅನ್ನೋ ಭಯದಿಂದ ಕಳೂರಿನ ಪುಟ್ಟಾ ಗಿರಿಯಾ ನಾಯ್ಕ ಎನ್ನುವವರು ಜಿಪಿಎಸ್ ಜಾಗಕ್ಕಿಂತ ಸ್ವಲ್ಪ ಮೇಲ್ಗಡೆ ಮನೆಯನ್ನ ಕಟ್ಟುತ್ತಿದ್ದರು. ಇದನ್ನು ತಿಳಿದ ಅರಣ್ಯಾಧಿಕಾರಿಗಳು ಮನೆಯನ್ನು ನೆಲಸಮ ಮಾಡಿದ್ದಾರೆ.

Body:ಕಳೆದ ನಾಲ್ಕು ದಿನಗಳಿಂದ ದಿನಾಲೂ ಮನೆಗೆ ಬಂದು ಮನೆಯನ್ನು ಕೆಡವುತ್ತೇವೆ ಅಂತಾ ಹೇಳುತ್ತಾ ಬಂದಿದ್ದರು. ಅತಿವೃಷ್ಟಿ ಆದ್ರೆ ಮನೆಗೆ ತೊಂದರೆಯಾಗುತ್ತೆ, ಆದ್ದರಿಂದ ಮನೆಯನ್ನ ಸ್ವಲ್ಪ ಮೇಲ್ಗಡೆ ಕಟ್ಟಿಕೊಳ್ಳುತ್ತೇವೆ. ಜಿಪಿಎಸ್ ಆದ ಜಾಗವನ್ನ ಅರಣ್ಯ ಇಲಾಖೆಗೆ ಬಿಟ್ಟು ಕೊಡುತ್ತೇವೆ, ದಯವಿಟ್ಟು ಮನೆ ಮುಂದುವರೆಸಲು ಅವಕಾಶ ನೀಡಿ ಅಂತ ಪುಟ್ಟಾ ನಾಯ್ಕ ಕೇಳಿಕೊಂಡರೂ ಕೂಡ ಮಾನವೀಯತೆಯನ್ನು ಮರೆತ ಅರಣ್ಯಾಧಿಕಾರಿಗಳು ಸ್ಪೀಕರ್ ಕಚೇರಿಯ ಮಾತಿಗೂ ಬೆಲೆ ಕೊಡದೆ ಏಕಾಏಕಿ ಇಂದು ಮನೆಯ ಅಡಿಪಾಯವನ್ನ ಕಿತ್ತು ಹಾಕಿದ್ದಾರೆ. ಅರಣ್ಯಾಧಿಕಾರಿಗಳ ಇಂತಹ ದರ್ಪದ ನಡುವಳಿಕೆ ಈಗಾಗಲೇ ಸಾಮಾನ್ಯ ಜನರ ಬದುಕನ್ನ ದುಸ್ತರವಾಗಿಸಿದ್ದು, ಮಾನವೀಯತೆ ಮರೆಯೋದು ಎಷ್ಟು ಸರಿ ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.