ETV Bharat / state

300ಕ್ಕೂ ಹೆಚ್ಚು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆ.. ಪಕ್ಕದ ಶಾಲೆಗಳೊಂದಿಗೆ ವಿಲೀನಕ್ಕೆ ಸರ್ಕಾರದ ಚಿಂತನೆ - ಶಿಕ್ಷಣ ಸಚಿವರು

300ಕ್ಕೂ ಹೆಚ್ಚು ಶಾಲೆಗಳಲ್ಲಿ ಮಕ್ಕಳ ಹಾಗೂ ಶಿಕ್ಷಕರ ಕೊರತೆ ಹಿನ್ನೆಲೆ, ಪಕ್ಕದ ಶಾಲೆಗಳೊಂದಿಗೆ ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ.

children decreased in more than 300 schools
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ
author img

By

Published : Aug 12, 2023, 6:22 PM IST

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಹಿರಿಯ ಸಾಹಿತಿ ನಾಗರಾಜ ಹರಪನಳ್ಳಿ ಮಾತನಾಡಿದರು.

ಕಾರವಾರ (ಉತ್ತರ ಕರ್ನಾಟಕ): ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತ ಸಾಗಿದೆ. ಜೊತೆಗೆ ಶಿಕ್ಷಕರ ಕೊರತೆಯೂ ಕೂಡಾ ಕಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕಿದ್ದ ಸರ್ಕಾರ ಇದೀಗ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳನ್ನೇ ಬಂದ್ ಮಾಡಲು ಮುಂದಾಗಿದೆ.

ಪಶ್ಚಿಮ ಘಟ್ಟಗಳ ಸರಣಿಗೆ ಹೊಂದಿಕೊಂಡೇ ಇರುವ ಗುಡ್ಡಗಾಡು ಜಿಲ್ಲೆ ಉತ್ತರಕನ್ನಡ. ಶೇಕಡಾ 80 ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಿಗೆ ಇದ್ದು, ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರತಿಯೊಂದು ಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಕೆಲವೆಡೆ ಗ್ರಾಮಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ತೀರಾ ಕುಸಿದಿದೆ. ಶೈಕ್ಷಣಿಕ ಜಿಲ್ಲೆಯಾದ ಕಾರವಾರದಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 148 ಶಾಲೆಗಳು ಇವೆ.

ಮತ್ತೊಂದು ಶೈಕ್ಷಣಿಕ ಜಿಲ್ಲೆಯಾದ ಶಿರಸಿಯಲ್ಲಿ ಸಹ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ 149 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಬಹುಪಾಲು ಕಾಯಂ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರಿಂದಲೇ ಶಾಲೆಗಳನ್ನು ನಡೆಸಲಾಗುತ್ತಿದೆ. ಆದರೆ, ಇದೀಗ ಶಿಕ್ಷಕರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ನೆರೆಯ ಶಾಲೆಗಳೊಂದಿಗೆ ವಿಲೀನಗೊಳಿಸುವ ಚಿಂತನೆಗೆ ಸರ್ಕಾರ ಮುಂದಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು?: ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು, ''ನಾಲ್ಕೈದು ಜನ ಮಕ್ಕಳಿರುವ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸುವುದರಿಂದ ಮಕ್ಕಳಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ. ಇಲ್ಲವಾದಲ್ಲಿ ಇಬ್ಬರು ಮಕ್ಕಳೇ ಫಸ್ಟ್ ಮತ್ತು ಸೆಕೆಂಡ್ ಬರುತ್ತಾರೆ. ಆದರೆ, ಇವರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಲ್ಲಿ ಅನುಕೂಲವಾಗುತ್ತದೆ. ಇದನ್ನು ಮಾಡುವುದಕ್ಕೆ ವಿರೋಧ ಕೂಡ ಬರುವ ಸಾಧ್ಯತೆ ಇದೆ.

ಆದರೆ, ನಾಲ್ಕೈದು ಮಕ್ಕಳಿರುವ ಶಾಲೆ ವಿಷಯಕ್ಕೊಂದು ಶಿಕ್ಷಕರನ್ನು ನೀಡುವುದು ಕಷ್ಟಸಾಧ್ಯವಾಗಿದೆ. ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಇಂತಹ ಶಾಲೆಗಳು ಇರುವ ಸಾಧ್ಯತೆ ಇದೆ. ಆದರೆ, ಈ ರೀತಿ ವಿಲೀನಕ್ಕೆ ಮಕ್ಕಳು ಪಾಲಕರು ವಿರೋಧ ಮಾಡುವ ಸಾಧ್ಯತೆಯಿದೆ. ನಮ್ಮೂರ ಶಾಲೆ ಬಂದ್​ ಆಗುವುದಾದರೆ, ಹೆಚ್ಚು ಜನರಿಗೆ ಬೇಸರವಾಗುತ್ತದೆ. ಆದರೆ, ಶಾಲೆಗಳ ವಿಲೀನಕ್ಕೆ ಪಾಲಕರು, ಊರಿನವರು ಒಪ್ಪಿಗೆ ಸೂಚಿಸಬೇಕಾಗುತ್ತದೆ'' ಎಂದು ಅವರು ತಿಳಿಸಿದ್ದಾರೆ.

ಹಿರಿಯ ಸಾಹಿತಿ ನಾಗರಾಜ ಹರಪನಳ್ಳಿ ಪ್ರತಿಕ್ರಿಯೆ: ''ಉತ್ತರಕನ್ನಡ ಜಿಲ್ಲೆಯಲ್ಲೇ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಸೇರಿ ಮುನ್ನೂರರಷ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗೆ ಒಬ್ಬರೇ ಶಿಕ್ಷಕರನ್ನು ನೇಮಕ ಮಾಡುವುದರಿಂದ ಶಾಲೆಗಳಲ್ಲಿ ವಿಷಯಕ್ಕೆ ತಕ್ಕಂತೆ ಶಿಕ್ಷಕರಿಲ್ಲದಿರುವುದೂ ಸಹ ಸರ್ಕಾರಿ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವುದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಕಡಿಮೆಯಿರುವ ಕಾರಣ ನೀಡಿ ಶಾಲೆಯನ್ನ ವಿಲೀನಗೊಳಿಸುವುದು ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದ್ದು, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಯೋಜನೆ ರೂಪಿಸಬೇಕು'' - ಹಿರಿಯ ಸಾಹಿತಿ ನಾಗರಾಜ ಹರಪನಳ್ಳಿ ಒತ್ತಾಯಿಸಿದರು.

ಶಿಕ್ಷಣದಿಂದ ಯಾರೊಬ್ಬರೂ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ತೆರೆದಿರುವ ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆ ಹೆಸರಿನಲ್ಲಿ ಸರ್ಕಾರ ಮುಚ್ಚಲು ಮುಂದಾಗುತ್ತಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಶಿಕ್ಷಣ ಸಚಿವರು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಅನ್ನೋದು ಸಾರ್ವಜನಿಕರು ಒತ್ತಾಯ.

ಇದನ್ನೂ ಓದಿ: ರಾಜ್ಯದಲ್ಲಿ ಇಷ್ಟು ಸೌಲಭ್ಯವಿರುವ ಮತ್ತೊಂದು ಸರ್ಕಾರಿ ಶಾಲೆ ಇದೆಯೇ? ನೀವೇ ಹೇಳಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.