ಕಾರವಾರ: ನೌಕಾ ದಿನಾಚರಣೆ ಅಂಗವಾಗಿ ಕದಂಬ ನೌಕಾನೆಲೆಯಲ್ಲಿ ನೇವಿ ಬ್ಯಾಂಡ್ ಪ್ರದರ್ಶನ ಹಾಗೂ ನೌಕಾ ಧ್ವಜ ವಂದನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್, ಸೂರ್ಯಸ್ತದ ಸಮಯದಲ್ಲಿ ರಾಷ್ಟ್ರ ಧ್ವಜ ಹಾಗೂ ನೌಕಾ ಧ್ವಜವನ್ನು ಅವರೋಹಣ ಮಾಡಿದರು. ಈ ವೇಳೆ ಕಡಲಿನಲ್ಲಿ ನಿಂತಿದ್ದ ಐಎನ್ಎಸ್ ಮಕರ, ಐಎನ್ಎಸ್ ತಿಲ್ಲಾಂಚಾಂಗ್ ಹಾಗೂ ಐಎನ್ಎಸ್ ಕೊಸ್ವಾರಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಯಿತು.
ಈ ವೇಳೆ ಮಾತನಾಡಿದ ಮಹೇಶ್ ಸಿಂಗ್, ದೇಶದ ರಕ್ಷಣೆಯಲ್ಲಿ ನೌಕಾದಳದ ಪ್ರಾಮುಖ್ಯತೆ, ಕಾರ್ಯಾಚರಣೆ ಹಾಗೂ ನೌಕಾ ಅಧಿಕಾರಿ, ಸಿಬ್ಬಂದಿಯ ಕಾರ್ಯವೈಖರಿಯ ಕುರಿತು ವಿವರಿಸಿದರು. ಸ್ಥಳೀಯರು ನೌಕಾ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಹಕಾರ ನೀಡುವಂತೆಯೂ ಕೋರಿದರು. ಶಾಸಕಿ ರೂಪಾಲಿ ನಾಯ್ಕ, ಫ್ಲಾಗ್ ಆಫೀಸರ್ ಪತ್ನಿ ಮನಿತಾ ಸಿಂಗ್, ನೌಕಾ ಅಧಿಕಾರಿಗಳಾದ ಪಿ.ಗೋಪಾಲಕೃಷ್ಣ, ಶ್ರೀಧರ ರಾಮಸ್ವಾಮಿ, ಇಫ್ತೆಕಾರ್ ಅಲಮ್, ಕಿರಣ ರೆಡ್ಡಿ, ಎಸ್.ಕುಮಾರ್, ಸಂಗೀತಾ ಕುಮಾರ್, ಸಂಗ್ರಾಮ್ ಕೆ.ಡೆ, ಸುಜಾತಾ ಡೆ, ದೇವಕಿ ಮದ್ದುಲಾ, ಶ್ರೀನಿವಾಸ ಮದ್ದುಲಾ, ಆರ್.ಕೆ.ದಹಿಯಾ, ಜಿಲ್ಲಾ ನ್ಯಾಯಾಧೀಶರಾದ ವಿಪುಲಾ ಎಂ.ಬಿ.ಪೂಜಾರಿ, ಕೈಗಾ ಸ್ಥಳ ನಿರ್ದೇಶಕ ಸತ್ಯನಾರಾಯಣ, ಪ್ರಮುಖರಾದ ಎ.ಶಿಗ್ಗಾವಿ, ವೀಣಾ ಶಿಗ್ಗಾವಿ, ಶ್ರೇಯಾ ಸುರೇಂದ್ರ, ಆರ್.ರವಿ ಇತರರು ಹಾಜರಿದ್ದರು.