ETV Bharat / state

ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆ: ಕಿರಿಯರ ವಿಭಾಗದಲ್ಲಿ 1 ಬೆಳ್ಳಿ, 2 ಕಂಚಿನ ಪದಕ ಗೆದ್ದ ಕರ್ನಾಟಕ ತಂಡ

ಚಂಡಿಗಡದಲ್ಲಿ ನಡೆದ ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ 1 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಕರ್ನಾಟಕ ತಂಡವು ಗೆದ್ದುಕೊಂಡಿದೆ.

National Roller Hockey Tournament
ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆ: ಕಿರಿಯರ ವಿಭಾಗದಲ್ಲಿ 1 ಬೆಳ್ಳಿ, 2 ಕಂಚಿನ ಪದಕ ಗೆದ್ದ ಕರ್ನಾಟಕ ತಂಡ
author img

By ETV Bharat Karnataka Team

Published : Dec 16, 2023, 7:17 AM IST

ಕಾರವಾರ (ಉತ್ತರ ಕನ್ನಡ): ಚಂಡೀಗಢನಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್​ಶಿಪ್​ನಲ್ಲಿ ಕರ್ನಾಟಕ ತಂಡವು ಉತ್ತಮ ಸಾಧನೆ ಮಾಡಿದೆ. ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗಳಿಸಿದೆ.

11 ವರ್ಷದೊಳಗಿನ ಕೆಡೆಟ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡದ ಆಟಗಾರ್ತಿಯರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕೈಗಾದ ಆದ್ಯಾ ನಾಯ್ಕ ನೇತೃತ್ವದ ತಂಡ ಹರಿಯಾಣ ಎದುರು 6-0, ಆಂಧ್ರಪ್ರದೇಶ ಎದುರು 3-0 ವಿಜಯ ಗಳಿಸಿತ್ತು. ನಂತರ ಕೇರಳ ಜೊತೆಗೆ 2-0, ತಮಿಳುನಾಡು ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜೊತೆಗೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ಬಳಿಕ ಪಂಜಾಬ್ ವಿರುದ್ಧ ನಡೆದ ಫೈನಲ್ ಪಂದ್ರದಲ್ಲಿ 1-2 ಅಂತರಗಳಿಂದ ಪರಾಭವಗೊಂಡ ಕರ್ನಾಟಕ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

ತಂಡದಲ್ಲಿ ಕೈಗಾದ ಆದ್ಯಾ ನಾಯ್ಕ (ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರ‌ದಿಂದ ಪ್ರತಿನಿಧಿಸಿದ್ದರು.

ಕೆಡೆಟ್ ಮಿಕ್ಸಡ್ ವಿಭಾಗ: ಕೆಡೆಟ್ ಮಿಕ್ಸಡ್ ವಿಭಾಗದಲ್ಲಿ ಆರಂಭದ ಪಂದ್ಯ ತಮಿಳುನಾಡು ಜೊತೆಗೆ ಡ್ರಾ, ಆಂಧ್ರಪ್ರದೇಶ, ಕೇರಳ ಎದುರು ಗೆದ್ದು ಸೆಮಿಫೈನಲ್‌ ತಲುಪಿತ್ತು. ಬಳಿಕ ಮತ್ತೆ ಎದುರಾದ ಕೇರಳ ಜೊತೆಗಿನ ಸೆಮಿಫೈನಲ್‌ ಪಂದ್ಯದಲ್ಲಿ ಪರಾಭವಗೊಂಡಿತ್ತು. ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂಧ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕ ಗಳಿಸಿ ಕಂಚಿನ ಪದಕಕ್ಕಾಗಿ ತೃಪ್ತಿಪಟ್ಟುಕೊಂಡಿತ್ತು.

ತಂಡದಲ್ಲಿ ಆದ್ಯಾ ನಾಯ್ಕ ಕೈಗಾ(ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ರಾಜಗುರು ಶಿರಸಿ, ಸಾಕಿಬ್ ಕೈಗಾ, ಅಯ್ಯನ್ ಕೈಗಾ, ಶ್ರೀಶ ಶೇಷಗಿರಿ ಮೊಗೇರ ಕಾರವಾರ, ಐಶ್ವರ್ಯ ತುಮಕೂರು, ದಕ್ಷತ್ ತುಮಕೂರು ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗ: ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವೂ ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ ತಂಡವನ್ನು ಮಣಿಸಿತ್ತು. ನಂತರ ಚಂಡೀಗಢ ಜೊತೆಗೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜೊತೆಗೆ ನಡೆದ ಹಣಾಹಣಿಯಲ್ಲಿ 1-3 ಪಾಯಿಂಟ್‌ಗಳಿಂದ ಪರಾಭವಗೊಂಡಿದೆ. ಮಾನ್ಯತಾ ಶಿರಸಿ(ಕ್ಯಾಪ್ಟನ್), ಮಾನ್ಯ ಬಿ ಎಸ್ ಶಿರಸಿ, ಅಪೂರ್ವ ಕಾರವಾರ, ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಯಶಸ್ವಿನಿ ಬೆಂಗಳೂರು, ಚಿನ್ಮಯಿ ಬೆಂಗಳೂರು, ಆರ್ಯ ಮಂಜುನಾಥ ಬೆಂಗಳೂರು ತಂಡದಲ್ಲಿ ಇದ್ದರು.

ಟೂರ್ನಿಯಲ್ಲಿ ಕೈಗಾದ ಆದ್ಯಾ ನಾಯ್ಕ, ರಾಜಗುರು, ಭುವನೀತ, ಮಾನ್ಯತಾ, ಅಪೂರ್ವ ಕರ್ನಾಟಕ ತಂಡದ ಪರವಾಗಿ ಉತ್ತಮ ನೀಡಿದ್ದಾರೆ. ಕರ್ನಾಟಕ ತಂಡದ ಆಟಗಾರರಿಗೆ ದಿಲೀಪ ಹಣಬರ ತರಬೇತಿ ನೀಡಿದ್ದರು. ಮಕ್ಕಳ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ: ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಖೇಲ್​ ರತ್ನ, ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.