ETV Bharat / state

ಬೇಕರಿ ಉದ್ಯಮಿ ಸಾವು... ಮುರುಡೇಶ್ವರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ಮುರುಡೇಶ್ವರ ತಾಲೂಕಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ

ಮುರುಡೇಶ್ವರ ತಾಲೂಕಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವನ್ನಪ್ಪಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

murudeshwar-doctors-negligence-man-died
ಬೇಕರಿ ಉದ್ಯಮಿ ಸಾವು ಆರೋಪ
author img

By

Published : Aug 3, 2020, 4:34 PM IST

ಭಟ್ಕಳ: ವೈದ್ಯರ ನಿಷ್ಕಾಳಜಿಯಿಂದ ರೋಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಮುರುಡೇಶ್ವರ ತಾಲೂಕಾಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಮೂಲದ ವ್ಯಕ್ತಿ, ಮುರುಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಉಕ್ಮಾರಾಮ್​ ಬೋರಾನ್​​ (65) ಮೃತ ರೋಗಿ. ಇಂದು ಬೆಳಗ್ಗೆ ಎದೆನೋವಿನಿಂದ ಅಸ್ವಸ್ಥಗೊಂಡಿದ್ದ ಇವರು ಖಾಸಗಿ ಕ್ಲಿನಿಕ್​ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುತ್ತಿರುವುವಾಗ ಮೂರ್ಚೆ ಹೋಗಿದ್ದಾರೆ. ನಂತರ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಚಿಕಿತ್ಸೆ ನೀಡಲು ಅಲ್ಲಿನ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ ಇಲ್ಲಿಂದ ಕರೆದುಕೊಂಡು ಹೋಗದಿದ್ದರೆ ಪೊಲೀಸ್​ ಠಾಣೆಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬೇಕರಿ ಉದ್ಯಮಿ ಸಾವು.. ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

ಇದರಿಂದ ಮುರುಡೇಶ್ವರ ಆಸ್ಪತ್ರೆಯ ವೈದ್ಯರ ನಡೆಗೆ ಕಿಡಿಕಾರಿರುವ ಮೃತನ ಕುಟುಂಬಸ್ಥರು, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಉಕ್ಮಾರಾಮ್​ ಬದುಕುಳಿಯುತ್ತಿದ್ದರು ಎಂದು ಆಸಮಾಧಾನ ಹೊರಹಾಕಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.