ETV Bharat / state

ವಿವಾದಾತ್ಮಕ ಹೇಳಿಕೆ ಪ್ರಕರಣ: ಸಂಸದ ಅನಂತ್​​ ಕುಮಾರ್ ಹೆಗಡೆ ಆರೋಪ ಮುಕ್ತ - MP Anant Kumar Hegde Acquitted in Controversial Statement Case

ಸಂಸದರ ವಿವಾದಾತ್ಮಕ ಹೇಳಿಕೆ ಕುರಿತು ಮುರಾದ್ ಹುಸೇನ್ ಎಂಬುವರು ದೂರು ನೀಡಿದ್ದರು. ಈ ಕುರಿತಂತೆ ಅನಂತ್ ಕುಮಾರ್​​​ ಪರ ವಕೀಲ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ. ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲವೆಂದು ವಾದ ಮಂಡಿಸಿದ್ದರು. ಇದೀಗ ಈ ಪ್ರಕರಣದಿಂದ ಸಂಸದರು ಆರೋಪ ಮುಕ್ತರಾಗಿದ್ದಾರೆ.

MP Anant Kumar Hegde
ಸಂಸದ ಅನಂತ್​ ಕುಮಾರ್ ಹೆಗಡೆ
author img

By

Published : Dec 28, 2020, 9:20 PM IST

ಶಿರಸಿ (ಉ.ಕ): ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಡಿ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದ ಸಂಸದ ಅನಂತ್​ ಕುಮಾರ್ ಹೆಗಡೆಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದಿಂದ ಸಂಸದರನ್ನು ಖುಲಾಸೆಗೊಳಿಸಿ ಕೋರ್ಟ್​ ತೀರ್ಪು ನೀಡಿದೆ.

2016ರಲ್ಲಿ ಶಿರಸಿಯ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಭಯೋತ್ಪಾದನೆ ಕುರಿತು ಪತ್ರಕರ್ತನೋರ್ವ ಕೇಳಿದ ಪ್ರಶ್ನೆಗೆ ಸಂಸದ ಅನಂತ್ ಕುಮಾರ್​ ಹೆಗಡೆ ಪ್ರತಿಕ್ರಿಯಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಿರಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಳೆದ 4 ವರ್ಷಗಳಿಂದ ನಡೆಯುತ್ತಿದ್ದ ಪ್ರಕರಣಕ್ಕೆ ಸೋಮವಾರ ತೀರ್ಪು ಪ್ರಕಟವಾಗಿದೆ.

ಸಂಸದರ ವಿವಾದಾತ್ಮಕ ಹೇಳಿಕೆ ಕುರಿತು ಮುರಾದ್ ಹುಸೇನ್ ಎಂಬುವರು ದೂರು ನೀಡಿದ್ದರು. ಈ ಕುರಿತಂತೆ ಅನಂತ್ ಕುಮಾರ್​​​ ಪರ ವಕೀಲ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ. ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲವೆಂದು ವಾದ ಮಂಡಿಸಿದ್ದರು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಇನವಳ್ಳಿ ತೀರ್ಪು ನೀಡಿದ್ದು, ಸಂಸದರು ನಿರಾಳರಾಗಿದ್ದಾರೆ.

ಇದನ್ನೂ ಓದಿ: ಪಕ್ಷದ ಬಗ್ಗೆ ಮಾತನಾಡಿದರೆ ಸಹಿಸಲಾರೆ, 2021 ಹೋರಾಟ ಹಾಗೂ ಸಂಘಟನೆ ವರ್ಷ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.