ವಿಜಯಪುರ: ಮಹಿಳೆಯೊಬ್ಬಳು ತನ್ನ ಮಾನಸಿಕ ಅಸ್ವಸ್ಥ ಮಗಳೊಂದಿಗೆ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ನಡೆದಿದೆ.
ಶಕುಂತಲಾ ಖೇಡ್ (50) ಹಾಗೂ ಗಂಗಾ (22) ಮೃತ ದುರ್ದೈವಿಗಳು. ಶಕುಂತಲಾ ಪತಿ ಸಿದ್ದಣ್ಣ ಖೇಡ್ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು. ಅಲ್ಲದೆ, ಈಕೆಯ ಮಾನಸಿಕ ಅಸ್ವಸ್ಥ ಮಗಳು ಗಂಗಾ ಸಹ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಳು.
ಇದರಿಂದ ತೀವ್ರವಾಗಿ ನೊಂದಿದ್ದ ಶಕುಂತಲಾ, ತನ್ನ ಮಗಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.