ETV Bharat / state

'ಕೆಲವರಿಗೆ ಮಾತನಾಡುವ ಚಟ..': ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಗರಂ

author img

By

Published : Jun 30, 2023, 8:06 PM IST

ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯರು ಒಳ್ಳೊಳ್ಳೆ ಶಬ್ದಗಳನ್ನು ಬಳಕೆ ಮಾಡುವ ಪರಿಪಾಠ ಬೆಳೆಸಿಕೊಂಡರೆ ಅವರ ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯದು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಶಾಸಕ ಶಿವರಾಮ ಹೆಬ್ಬಾರ್
ಶಾಸಕ ಶಿವರಾಮ ಹೆಬ್ಬಾರ್
ಶಾಸಕ ಶಿವರಾಮ ಹೆಬ್ಬಾರ್ ಹೇಳಿಕೆ

ಶಿರಸಿ (ಉತ್ತರ ಕನ್ನಡ) : ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಫನವರಿಗೆ ಟಿಕೆಟ್ ಕೊಡದಿರಲು ನಾವೇನೂ ಕಾರಣೀಭೂತರಲ್ಲ. ಈ ಹಿಂದೆ ಸರ್ಕಾರ ಯಾರ ತ್ಯಾಗದಿಂದ ಬಂತು, ಯಾರಿಂದ ಅವರಿಗೆ ಸಚಿವ ಸ್ಥಾನ ದೊರೆಯಿತು, ಯಾರು ಮಂತ್ರಿಸ್ಥಾನ ಕಳೆದುಕೊಂಡರು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ಕೆಲವರಿಗೆ ಮಾತನಾಡುವ ಚಟ ಇರುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವಂತೂ ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಾವು ನಡೆದು ಬಂದಿರುವ ಹಾದಿ, ಮುಂದೆ ನಡೆಯಲಿರುವ ಹಾದಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಬಾಲ ತುಂಡರಿಸುವ ಕೆಲಸವನ್ನು ನಾವು ಮಾಡಿಲ್ಲ, ಮಾಡೋದೂ ಇಲ್ಲ ಎಂದರು. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ, ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಮಹಿಳೆಯರಿಂದ ಉತ್ತಮ ಸ್ಪಂದನೆ, ಸರ್ಕಾರದ ಶಕ್ತಿ ಯೋಜನೆ ಸಶಕ್ತ: ಸಚಿವ ರಾಮಲಿಂಗಾ ರೆಡ್ಡಿ

ಮಳೆ ಕೊರತೆಯಿಂದ ರೈತರಿಗೆ ಸಂಕಷ್ಟ: ಇದೇ ವೇಳೆ ಮಳೆ ಸ್ಥಿತಿಗತಿ ಬಗ್ಗೆ ಮಾತನಾಡಿದ ಹೆಬ್ಬಾರ್, ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗಿನ ವಾಡಿಕೆ ಮಳೆಯಲ್ಲಿ ಶೇ.70 ರಷ್ಟು ಕೊರತೆ ಉಂಟಾಗಿದೆ. ರೈತರು ಬಿತ್ತಿದ ಬೀಜ ಮೊಳಕೆಯೊಡೆಯದೇ ಹಾನಿಗೊಳಗಾಗಿದ್ದು, ಈ ಕ್ಷೇತ್ರವನ್ನು ಬರಗಾಲಪೀಡಿತ ಎಂದು ಘೋಷಿಸಬೇಕು. ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ರೈತರು ಭೀಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬರಗಾಲ ಕ್ಷೇತ್ರ ಎಂದು ಘೋಷಣೆಗೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಧಾನಸೌಧದೊಳಗೂ ಆಗ್ರಹಿಸುತ್ತೇನೆ ಎಂದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಅಶಿಸ್ತಿಗೆ ವಲಸಿಗರೇ ಕಾರಣ; ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ : ಕೆ.ಎಸ್​.ಈಶ್ವರಪ್ಪ

ಇನ್ನು ಹೊಸ ಸರ್ಕಾರ ಬಂದ ಬಳಿಕ ವರ್ಗಾವಣೆ ಪರ್ವ ಆರಂಭ ಆಗಿದೆ. ಯಾವುದೇ ವರ್ಗಾವಣೆ ಮಾಡಿದರೂ ಆ ಜಾಗಕ್ಕೆ ಬದಲಿ ಬರುವವರೆಗೆ ಬಿಡುಗಡೆ ಮಾಡಬಾರದು. ಮಲೆನಾಡಿನ ಭಾಗಕ್ಕೆ ಅಧಿಕಾರಿಗಳು ಬರುವುದೇ ಕಷ್ಟವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ. 36ರಷ್ಟು ಅಧಿಕಾರಿಗಳ ಕೊರತೆ ಇದೆ ಎಂದು ಹೇಳಿದರು.

ಇನ್ನೊಂದೆಡೆ, ನಾನು ಬಾಂಬೆ ಬಾಯ್ಸ್ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (ಜೂನ್​ 28 -2023)ರಂದು ಸ್ಪಷ್ಟನೆ ನೀಡಿದ್ದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಹುಬ್ಬಳ್ಳಿಯಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಬಾಂಬೆ ಬಾಯ್ಸ್ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಆದರೆ ಮಾಧ್ಯಮದಲ್ಲಿ ಬಾಂಬೆ ಬಾಯ್ಸ್ ಬಗ್ಗೆ ಗರಂ ಅಂತ ಬಂದಿತ್ತು. ಇದರಿಂದ ಬಿಜೆಪಿಗೆ ಬಂದ ಅನೇಕ ನಮ್ಮ ಗೆಳೆಯರಿಗೆ ನೋವಾಯಿತು, ನನಗೂ ನೋವಾಯಿತು. ಅವರಿಂದಾಗಿ ಸರ್ಕಾರ ಬಂತು, ನಾನು ಮಂತ್ರಿಯಾದೆ. ಈ ಘಟನೆಯ ಬಗ್ಗೆ ರಾಜ್ಯಾಧ್ಯಕ್ಷರ ಬಳಿ ಮಾತನಾಡಿದ್ದೇನೆ ಎಂದಿದ್ದರು.

ಇದನ್ನೂ ಓದಿ: ನಾನು ಬಾಂಬೆ ಬಾಯ್ಸ್ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ: ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.