ETV Bharat / state

ಯಲ್ಲಾಪುರದ ಶಿರ್ಲೆಯಲ್ಲಿ ನಾಪತ್ತೆಯಾಗಿದ್ದ 6 ಪ್ರವಾಸಿಗರು ಪತ್ತೆ.. ನಿಟ್ಟುಸಿರು ಬಿಟ್ಟ ಕುಟುಂಬಸ್ಥರು - missing in 6 tourists found

ಯಲ್ಲಾಪುರದ ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಬಂದು ನಾಪತ್ತೆಯಾಗಿದ್ದ 6 ಯುವಕರು ಪತ್ತೆಯಾಗಿದ್ದಾರೆ.

yallapur
ಯಲ್ಲಾಪುರದ ಶಿರ್ಲೆಯಲ್ಲಿ ನಾಪತ್ತೆಯಾಗಿದ್ದ 6 ಪ್ರವಾಸಿಗರು ಪತ್ತೆ
author img

By

Published : Jul 23, 2021, 2:06 PM IST

ಶಿರಸಿ: ಹುಬ್ಬಳ್ಳಿ ನವನಗರದಿಂದ ಯಲ್ಲಾಪುರದ ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಬಂದು ನಾಪತ್ತೆಯಾಗಿದ್ದ 6 ಯುವಕರು ಪತ್ತೆಯಾಗಿದ್ದಾರೆ. ಪ್ರವಾಸಿಗರು ಶಿರ್ಲೆ ಫಾಲ್ಸ್​ಪಕ್ಕದ ಗ್ರಾಮವಾದ ಸುಣಜೋಗದ ರಾಘವೇಂದ್ರ ಭಟ್​ ಎಂಬುವವರ ತೋಟದಲ್ಲಿ ಗುರುವಾರ ರಾತ್ರಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.

ಯಲ್ಲಾಪುರದ ಶಿರ್ಲೆಯಲ್ಲಿ ನಾಪತ್ತೆಯಾಗಿದ್ದ 6 ಪ್ರವಾಸಿಗರು ಪತ್ತೆ

ಪ್ರಾಥಮಿಕ ಮಾಹಿತಿ ಪ್ರಕಾರ, ಆರು ಯುವಕರು ಮೂರು ಬೈಕ್​ಗಳಲ್ಲಿ ಶಿರ್ಲೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಜಲಪಾತಕ್ಕೆ ತೆರಳುವ ಮಾರ್ಗ ಮಧ್ಯೆ ಇದ್ದ ಕಾಲುಸಂಕ ಮರಳಿ ಬರುವಾಗ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ, ಹಳ್ಳವನ್ನು ದಾಟಿ ಬೈಕ್​ ಇಟ್ಟಿರುವ ಸ್ಥಳಕ್ಕೆ ಬರಲಾಗದೇ ದಾರಿ ತಪ್ಪಿದ್ದಾರೆ. ಬಳಿಕ ಸಿಕ್ಕಿದ ಯಾವುದೋ ದಾರಿ ಹುಡುಕಿಕೊಂಡು ತೋಟದ ಬಳಿ ನಡುಗುತ್ತಾ ಕುಳಿತಿದ್ದ ಯುವಕರಿಗೆ ರಾಘವೇಂದ್ರ ಭಟ್ ಆಶ್ರಯ ನೀಡಿದ್ದರು. ಇಂದು ಬೆಳಗ್ಗೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್​ ಹೆಬ್ಬಾರ್ ಮಾಹಿತಿ ನೀಡಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಯಲ್ಲಾಪುರ - ಶಿರ್ಲೆ ಫಾಲ್ಸ್​ ವೀಕ್ಷಣೆಗೆ ಆಗಮಿಸಿದ್ದ 6 ಮಂದಿ ನಾಪತ್ತೆ ಶಂಕೆ: ತೀವ್ರಗೊಂಡ ಹುಡುಕಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.