ಶಿರಸಿ: ಲವ್ ಜಿಹಾದ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಕೇಸ್ಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮತಾಂತರ ನಿಷೇಧ ಕಾಯ್ದೆ ಮಸೂದೆ ಈ ಅಧಿವೇಶನದಲ್ಲಿ ಆಗಲ್ಲ ಎಂದು ಗೃಹ ಸಚಿವರೇ ಹೇಳಿದ್ದಾರೆ. ಆದರೆ, ಗೋಹತ್ಯೆ ನಿಷೇಧ ಮಸೂದೆ ನಮ್ಮ ರಾಜ್ಯವೂ ಸೇರಿದಂತೆ ಅನೇಕ ಕಡೆ ಜಾರಿಯಲ್ಲಿದೆ. ಆದರೂ ಗೋಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಚುನಾವಣೆಗಳನ್ನ ನೋಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಸ್ಪೀಕರ್ ಕಾಗೇರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇಂದಿನ ರಾಜಕೀಯ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತುಹಾಕೋದಕ್ಕೆ ಈ ಸಮಯದಲ್ಲಿ ಕಷ್ಟಸಾಧ್ಯ.
ಅದು ಯಾವುದೇ ರಾಜಕೀಯ ಪಕ್ಷ ಇರಲಿ. ಆದರೆ ಸಮಾಧಾನಕ್ಕಾಗಿ ಇದೆಲ್ಲ ಮುಗಿದ ಮೇಲೆ ಆತ್ಮಾವಲೋಕನ ಅನ್ನೋ ಪದ ಉಪಯೋಗಿಸುತ್ತೇವೆ ಅಷ್ಟೇ. ಹಾಗಾಗಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಳ್ಳಬೇಕಾದದ್ದು ಈ ದೇಶದ ರಾಜಕಾರಣದಲ್ಲಿ ಇಲ್ಲ ಎಂದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಮಲ್ಲಿ ಶಾಲೆಗಳ ಮುಚ್ಚಲ್ಲ: ಸಚಿವ ಬಿಸಿ ನಾಗೇಶ್