ETV Bharat / state

ಬೆಂಗಳೂರಿನಲ್ಲಿ ಸಿಡಿ ಮಾಡುವವರ ದಂಧೆ ಹೆಚ್ಚಾಗಿದೆ: ಸಚಿವ ಹೆಬ್ಬಾರ್ - ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ

ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನಾದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಸಹಿಸಲಾಗದು. ಬಿಜೆಪಿ ಸರ್ಕಾರ ರಚನೆಗೆ ಬಲ ನೀಡಿದ ಸಚಿವರನ್ನು ಗುರಿಯಾಗಿಸಿ ಅವರನ್ನೇ ಬೆದರಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು ಎಂದು ತಿಳಿಸಿದರು.

Minister Shivaram Hebbar on CD
ಸಚಿವ ಹೆಬ್ಬಾರ್
author img

By

Published : Mar 6, 2021, 1:23 PM IST

ಶಿರಸಿ: ಬೆಂಗಳೂರಿನಲ್ಲಿ ಸಿಡಿ ಮಾಡುವವರ, ಬ್ಲಾಕ್ ಮೇಲ್ ಮಾಡುವವರ ದಂಧೆ ಹೆಚ್ಚಾಗಿದೆ. ಅಂತಹವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳಿದ್ದರೂ ಸಹ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಸಿಡಿ ಮಾಡಿ ಬ್ಲಾಕ್ ಮೇಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು.

ಸಚಿವ ಶಿವರಾಮ್ ಹೆಬ್ಬಾರ್ ಹೇಳಿಕೆ

ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನಾದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಸಹಿಸಲಾಗದು. ಬಿಜೆಪಿ ಸರ್ಕಾರ ರಚನೆಗೆ ಬಲ ನೀಡಿದ ಸಚಿವರನ್ನು ಗುರಿಯಾಗಿಸಿ ಅವರನ್ನೇ ಬೆದರಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: ರಾಜಕೀಯ ದೊಂಬರಾಟದಲ್ಲಿ ಸಿಡಿ ಸದ್ದು: ಮುಜುಗರ ಆಗ್ತಿದೆ ಅಂದ್ರು ಸದಾನಂದ ಗೌಡ

ರಾಜಕೀಯ ಜೀವನದ ಹೊರತಾಗಿ ನಮಗೂ ವೈಯಕ್ತಿಕ ಜೀವನವಿದೆ. ನಮಗೂ ಕುಟುಂಬ, ಮಕ್ಕಳಿದ್ದಾರೆ. ಯಾವ ವ್ಯಕ್ತಿಯ ವೈಯಕ್ತಿಕ ತೇಜೋವಧೆ, ಗೌರವ ಹಾಳುಮಾಡುವ ಕೆಲಸ ಒಳ್ಳೆಯ ಬೆಳವಣಿಗೆಯಲ್ಲ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತಹದ್ದಲ್ಲ ಎಂದರು.

ರಮೇಶ ಜಾರಕಿಹೊಳಿ ಇಂದಲ್ಲ ನಾಳೆ ತಪ್ಪಿತಸ್ಥರಲ್ಲ ಎಂದು ಸಾಬೀತಾಗಬಹುದು. ಆದರೆ, ಹಾಳುಮಾಡಿದ ಅವರ ಗೌರವ ತಂದುಕೊಡಲು ಸಾಧ್ಯವೇ? ಇದೇ ಸ್ಥಿತಿ ಉಳಿದ ನಾಯಕರಿಗೂ ಎದುರಾಗಬಹುದು. ಹೀಗಾಗಿ, ಮುನ್ನೆಚ್ಚರಿಕೆ ನಮಗೂ ಅನಿವಾರ್ಯವಾಗಿದೆ ಎಂದು ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.