ಕಾರವಾರ : ಶಾಲಾ-ಕಾಲೇಜುಗಳಲ್ಲಿ ಇಲಾಖೆ ಸೂಚಿಸಿದ ಸಮವಸ್ತ್ರ ಹೊರತುಪಡಿಸಿ ಬೇರೆ ದಿರಿಸನ್ನು ಬಳಸಲು ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರವಿದೆ. ಈಗಾಗಲೇ ರಾಜ್ಯ ಸರ್ಕಾರ ಕೂಡ ಏಕ ಸಮವಸ್ತ್ರದ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದು ಹಿಂದಿನಿಂದಲೂ ಇದೆ. ಮತ್ತೆ ಅದೇ ಸುತ್ತೋಲೆಯನ್ನು ಪುನಃ ಹೊರಡಿಸಲಾಗಿದೆ ಎಂದರು.
ಹಿಜಾಬ್ ಸೇರಿದಂತೆ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಶಾಲಾ-ಕಾಲೇಜುಗಳಲ್ಲಿ ಏನು ನಿಯಮಗಳಿವೆ, ಅದರ ವ್ಯಾಪ್ತಿಯಲ್ಲಿ ನಡೆಯಬೇಕು. ವಿವಾದದ ಕುರಿತು ಹೊರಗಿನ ಶಕ್ತಿಗಳು ಏನಾದರೂ ತೊಂದರೆ ಕೊಟ್ಟರೆ ಅದನ್ನು ಸರ್ಕಾರ ನಿಭಾಯಿಸುತ್ತದೆ ಎಂದು ಹೇಳಿದರು.
ಓದಿ: ಹಿಜಾಬ್-ಕೇಸರಿ ವಿವಾದ : 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ