ETV Bharat / state

ಯಕ್ಷಗಾನ ತಾಳಮದ್ದಳೆಯಲ್ಲಿ ಗಣಿತ ಪಾಠ: ಶಿರಸಿ ಮಾರಿಕಾಂಬಾ ಪ್ರೌಢಶಾಲೆ ವಿನೂತನ ಪ್ರಯೋಗ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ಈ ಹೊಸಪ್ರಯೋಗ ಮಾಡುತಿದ್ದು, ಒಂಬತ್ತನೇ ತರಗತಿ ಮಕ್ಕಳಿಗೆ ಅದರ ಪಠ್ಯವನ್ನು ಸರಳವಾಗಿ ಯಕ್ಷಗಾನ ರೂಪದಲ್ಲಿ ಹೇಳಿ ಕೊಡುತ್ತಿದೆ.

Maths teaching through Thalamaddale
ಯಕ್ಷಗಾನ ತಾಳಮದ್ದಳೆಯಲ್ಲಿ ಗಣಿತ ಪಾಠ
author img

By

Published : Jun 9, 2022, 11:11 AM IST

Updated : Jun 9, 2022, 12:20 PM IST

ಶಿರಸಿ : ಕೊರೊನಾ ನಂತರದ ಕಾಲಘಟ್ಟದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಲು ಸಾಕಷ್ಟು ಕಸರತ್ತು ಮಾಡಲಾಗುತ್ತಿದೆ. ಆಟೋಟದ ಜೊತೆಗೇ ಪಾಠ ಮಾಡಿ ಅವರನ್ನು ಕಲಿಕೆಯತ್ತ ಗಮನ ಹರಿಸುವಂತೆ ಮಾಡಲಾಗುತ್ತಿದೆ. ಅದರಲ್ಲಿಯೇ ವಿಶೇಷ ಎಂಬಂತೆ ಶಿರಸಿಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗಾಗಿ ಗಣಿತ ಕಲಿಸಲು ಯಕ್ಷಗಾನ ತಾಳಮದ್ದಳೆಗೆ ಮೊರೆ ಹೋಗಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನದ ತಾಳಮದ್ದಳೆಯ ಮೂಲಕ ಮಕ್ಕಳಿಗೆ ಗಣಿತವನ್ನು ಸರಳ ರೂಪದಲ್ಲಿ ಕಥೆ ಹೇಳುತ್ತಾ ವಿವರಿಸಲಾಗುತಿದ್ದು, ಈ ಮೂಲಕ ಕ್ಲಿಷ್ಟ ಗಣಿತವನ್ನು ಮಕ್ಕಳಿಗೆ ಸರಳವಾಗಿಸುವ ಪ್ರಯತ್ನವನ್ನು ಸುಳ್ಯದ ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ತಂಡ ಮಾಡುತ್ತಿದೆ. ಗಣಿತದ ಪ್ರಕಾರಗಳು, ಕೂಡಿ ಕಳೆಯುವ, ಭಾಗಿಸುವ ವಿಧಾನ ಹೀಗೆ ಪ್ರತಿಯೊಂದನ್ನೂ ತಾಳೆ ಮದ್ದಳೆಯಲ್ಲಿ ಕಥೆಯನ್ನು ವಿವರಿಸಿ ಹೇಳುವ ಮೂಲಕ ಮಕ್ಕಳಿಗೆ ತಿಳಿಸಲಾಯಿತು.

ಯಕ್ಷಗಾನ ತಾಳಮದ್ದಳೆಯಲ್ಲಿ ಗಣಿತ ಪಾಠ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ಈ ಹೊಸ ಪ್ರಯೋಗ ಮಾಡುತಿದ್ದು, ಒಂಬತ್ತನೇ ತರಗತಿ ಮಕ್ಕಳಿಗೆ ಅದರ ಪಠ್ಯವನ್ನು ಸರಳವಾಗಿ ಯಕ್ಷಗಾನ ರೂಪದಲ್ಲಿ ಹೇಳಿ ಕೊಡುತ್ತಿದೆ. ಕನ್ನಡದಲ್ಲಿ ಬಳಸುವ ಶಬ್ದಗಳಿಂದಲೇ ಮನ ಮುಟ್ಟುವಂತೆ ಹೇಳುತ್ತಿರುವುದು ಮಕ್ಕಳಿಗೂ ಸಹ ಗಣಿತದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ.

ಯಾಂತ್ರಿಕತೆಯ ಈ ದಿನಗಳಲ್ಲಿ ಜನಪದ ಕಲೆ ಅಳಿವಿನತ್ತ ಸಾಗಿದೆ. ಅದೇ ರೀತಿ ಕೋವಿಡ್ ನಂತರ ಮಕ್ಕಳಿಗೆ ಪಾಠ ಹೇಳಿಕೊಡುವುದೂ ಒಂದು ಸಾಹಸವಾಗಿದೆ. ಹೀಗಿರುವಾಗ ಯಕ್ಷಗಾನ ತಾಳಮದ್ದಳೆಯ ಹೊಸ ಪ್ರಯೋಗಕ್ಕೆ ಒಳಗಾಗುವ ಜೊತೆ ಮಕ್ಕಳಲ್ಲಿ ನಮ್ಮ ಜನಪದ ಕಲೆಯ ಅರಿವನ್ನೂ ಮೂಡಿಸುವ ಮತ್ತು ಸರಳವಾಗಿ ಗಣಿತವನ್ನೂ ಹೇಳಿಕೊಡುವ ಹೊಸ ಪ್ರಯೋಗ ನಿಜವಾಗಿಯೂ ಶ್ಲಾಘನೀಯವಾಗಿದೆ.

ಇದನ್ನೂ ಓದಿ: ಜೈಲಿನಲ್ಲಿ ಶಾಲೆ, ಯೋಗಾಭ್ಯಾಸ: ಕೈದಿಗಳ ಮನಪರಿವರ್ತನೆಗೆ ಹೊಸ ವಿಧಾನ

Last Updated : Jun 9, 2022, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.