ETV Bharat / state

ಮಾರ್ಕೆ ಪೂನಾವ್ ಜಾತ್ರೆ: ಹೊಟ್ಟೆಗೆ ಸೂಜಿ ಚುಚ್ಚಿ, ದಾರ ಪೋಣಿಸಿ ಹರಕೆ ತೀರಿಸಿದ ಭಕ್ತಾದಿಗಳು..

ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಗೋವಾ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

markey-poonav-fair
ಕಾರವಾರದಲ್ಲಿ ಮಾರ್ಕೆ ಪೂನಾವ್ ಜಾತ್ರೆ
author img

By

Published : Feb 28, 2021, 6:52 PM IST

ಕಾರವಾರ: ಕಾರವಾರದಲ್ಲಿ ಇಂದು ನಡೆದ ಮಾರ್ಕೆ ಪೂನಾವ್ ಜಾತ್ರೆ ಎಲ್ಲರ ಗಮನ ಸೆಳೆದಿದ್ದು, ಜಾತ್ರೆಯಲ್ಲಿ ಗಂಡು ಮಕ್ಕಳು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ನೂಲನ್ನು ಪೋಣಿಸುವ ಮೂಲಕ ಸಂಪ್ರದಾಯ ಆಚರಿಸಿದರೆ, ಇನ್ನೊಂದೆಡೆ ಹೆಣ್ಣು ಮಕ್ಕಳು ದೀಪವನ್ನ ಹೊತ್ತು ಹರಕೆ ಈಡೇರಿಸುವ ಮೂಲಕ ಜಾತ್ರೆಯನ್ನು ವಿಭಿನ್ನವಾಗಿ ಆಚರಿಸಲಾಗಿದೆ.

ಕಾರವಾರದಲ್ಲಿ ಮಾರ್ಕೆ ಪೂನಾವ್ ಜಾತ್ರೆ

ಕಾರವಾರ ತಾಲೂಕಿನ ಮಾಜಾಳಿಯಲ್ಲಿ ಪ್ರತಿ ವರ್ಷದಂತೆ ನಡೆದ ಮಾರ್ಕೆ ಪೂನಾವ್ ಅನ್ನೋ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆ ತೀರಿಸುತ್ತಾರೆ. ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಕಾರಣದಿಂದ ಮದುವೆಗೂ ಮೊದಲು ಯುವಕರು ಮತ್ತು ಮಕ್ಕಳು ಗ್ರಾಮದ ಧಾಡ್ ದೇವರ ದೇವಸ್ಥಾನದಲ್ಲಿ ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ.

ಬಳಿಕ ಒಂದು ಕಿಲೋ ಮೀಟರ್ ದೂರವಿರುವ ದೇವತಿ ದೇವಿಯ ದೇವಸ್ಥಾನದ ಬಳಿ ಹರಕೆ ಹೊತ್ತವರು ಬಂಡಿಯೊಂದಿಗೆ ಹರಕೆ ತೀರಿಸುತ್ತಾರೆ. ಈ ಭಾರಿ 30ಕ್ಕೂ ಹೆಚ್ಚು ಪುರುಷರು ಹಾಗೂ ಮಕ್ಕಳು ಅರ್ಚಕರಿಂದ ಸೂಜಿ ಚುಚ್ಚಿಸಿಕೊಂಡಿದ್ದಾರೆ. ಇದೊಂದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ ಎನ್ನುತ್ತಾರೆ ದೇವಸ್ಥಾನದ ಸಮಿತಿ ಸದಸ್ಯ ಅಶೋಕ ಗುರವ್.

ಇನ್ನು ಗ್ರಾಮದ ಯುವತಿಯರು, ಸೊಸೆಯಾಗಿ ಗ್ರಾಮಕ್ಕೆ ಬಂದ ಸ್ತ್ರೀಯರು ಹಾಗೂ ಹರಕೆ ಹೊತ್ತುಕೊಂಡ ಮಹಿಳೆಯರು ದೀಪ ಸೇವೆಯನ್ನು ನೀಡುತ್ತಾರೆ. ತಮ್ಮ ತಲೆಯ ಮೇಲೆ 5 ಬತ್ತಿಯಿರುವ ದೀಪವನ್ನು ಹೊತ್ತುಕೊಂಡು ಧಾಡ್ ದೇವಸ್ಥಾನದಿಂದ ದೇವತಿ ದೇವಿ ದೇವಸ್ಥಾನದವರೆಗೆ ಕಾಲು ನಡಿಗೆಯಲ್ಲಿ ಸಾಲಾಗಿ ಸಂಚರಿಸುತ್ತಾರೆ.

ಬಳಿಕ ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪವನ್ನು ತೂಗಿ ಭಕ್ತಿಯಿಂದ ನಮಸ್ಕರಿಸಿ ದೀಪಗಳನ್ನ ಅಲ್ಲಿಯೇ ಇಟ್ಟು ಮರಳುತ್ತಾರೆ. ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಗೋವಾ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಹೀಗೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ ಎನ್ನುತ್ತಾರೆ ಭಕ್ತರಾದ ಕಲ್ಪನಾ.

ಒಟ್ಟಾರೇ ಒಂದೊಂದು ಕಡೆ ನಡೆಯುವ ಜಾತ್ರೆಗಳೂ ಒಂದೊಂದು ವಿಶೇಷತೆಯನ್ನು ಹೊಂದಿದೆ. ಇಂದು ಕಾರವಾರದಲ್ಲಿ ನಡೆದ ಮಾರ್ಕೆ ಪೂನಾವ್ ಜಾತ್ರೆ ಸಾಕಷ್ಟು ವಿಶಿಷ್ಟತೆಯನ್ನ ಹೊಂದಿದ್ದು, ಸಾವಿರಾರು ಮಂದಿ ಜಾತ್ರೆಗೆ ಆಗಮಿಸಿ ತಮ್ಮ ಹರಕೆಯನ್ನು ತೀರಿಸಿದ್ದು ಕಂಡು ಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.