ಕಾರವಾರ: ಕಾಡಿನಲ್ಲಿ ಗಾಂಜಾ ಬೀಜಗಳನ್ನು ಬಿತ್ತಿ ಬೆಳೆದ ಬಳಿಕ ಅದನ್ನು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ನಿವಾಸಿ ರತನ್ ಲಾಲ್ ರಾಮಚಂದ್ರ ಶರ್ಮ ಬಂಧಿತ ಆರೋಪಿ. ಈತ ಮಂಚಿಕೇರಿಯ ತೊಂಡೆತೆರೆ ಕ್ರಾಸ್ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿರುವಾಗ ಅನುಮಾನಗೊಂಡ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಈತ 744 ಗ್ರಾಂ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈತ ಕಳೆದ ಕೆಲ ವರ್ಷಗಳಿಂದ ಗಾಂಜಾ ಬೀಜಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತಿ, ಬಳಿಕ ಅದು ಬೆಳೆದು ದೊಡ್ಡದಾದಾಗ ಕಟಾವು ಮಾಡಿ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ.
ಓದಿ: ಟೆಡ್ಡಿಬೇರ್ನಲ್ಲೂ ಮಾದಕ ವಸ್ತು ಸಾಗಿಸುತ್ತಿದ್ದ ಖದೀಮ: ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಅಂದರ್