ETV Bharat / state

ಕಾರವಾರ: ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ - Manipal Health Card

ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಕಳೆದ 20 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿರುವ ಈ ಕಾರ್ಡ್ ನೋಂದಣಿ ಮಾಡಿಕೊಳ್ಳುವುದರಿಂದ ಸಾಕಷ್ಟು ಉಪಯೋಗ ಪಡೆದುಕೊಳ್ಳಬಹುದು ಎಂದು ಕಸ್ತೂರಬಾ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ಬಿ.ಎಸ್. ಕೃಷ್ಣಪ್ರಸಾದ್ ಹೇಳಿದ್ರು.

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ
ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ
author img

By

Published : Jun 19, 2020, 5:18 PM IST

Updated : Jun 19, 2020, 6:54 PM IST

ಕಾರವಾರ: ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ, 2020ರ ಸಾಲಿನಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಜನರು ಪಡೆಯುವಂತೆ ಕಸ್ತೂರಬಾ ಆಸ್ಪತ್ರೆಯ ಸಹಾಯಕ ವ್ಯವಸ್ಥಾಪಕ ಬಿ.ಎಸ್. ಕೃಷ್ಣಪ್ರಸಾದ್ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿರುವ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಮಾಡಿಕೊಳ್ಳುವುದರಿಂದ ಸಾಕಷ್ಟು ಉಪಯೋಗ ಪಡೆದುಕೊಳ್ಳಬಹುದು ಎಂದರು.

ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಆರಂಭ

ಈಗಾಗಲೇ ನೋಂದಣಿ ಆರಂಭಗೊಂಡಿದ್ದು, ಒಂದು ಮತ್ತು ಎರಡು ವರ್ಷದ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 250 ರೂ. ಹೆಂಡತಿ ಹಾಗೂ 25 ವರ್ಷದ ಒಳಗಿನ ಮಕ್ಕಳ ಸೇರ್ಪಡೆಗೆ 500 ರೂ. ಅಥವಾ ಹೆಂಡತಿ, ಮಕ್ಕಳು ಮತ್ತು ಪಾಲಕರ ಸೇರ್ಪಡೆಗೆ 650 ರೂಪಾಯಿ ಇರುತ್ತದೆ. ಇದೆ ಎರಡು ವರ್ಷಕ್ಕೆ ಒಬ್ಬರಿಗೆ 200 ರೂ., ಕುಟುಂಬಕ್ಕೆ 700 ರೂ. ಹಾಗೂ ಕುಟುಂಬ ಪ್ಲಸ್ ಯೋಜನೆಗೆ 850 ರೂ. ಇರುತ್ತದೆ ಎಂದು ತಿಳಿಸಿದರು.

ಕಾರ್ಡ್ ಪಡೆಯುವುದರಿಂದ ವೈದ್ಯರ ಸಮಾಲೋಚನೆಗೆ ಶೇ. 50ರಷ್ಟು ರಿಯಾಯಿತಿ, ಪ್ರಯೋಗಾಲಯ ಶೇ.30, ಒಳರೋಗಿಯಾದಲ್ಲಿ ಶೇ. 25, ಸಿಟಿ, ಎಂಆರ್​​ಐ, ಅಲ್ಟ್ರಾಸೌಂಡ್ ಶೇ .20, ಔಷಧಾಲಯಗಳಲ್ಲಿ ಶೇ.17 ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.

ಕಾರ್ಡ್ ಮಾಡಿಸುವವರು ಕಾರವಾರ ಇಲ್ಲವೇ ಜಿಲ್ಲೆಯ ಇತರೆ ಭಾಗಗಳಲ್ಲಿರುವ ಸೈಂಟ್ ಮಿಲಾಗ್ರೇಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಶಾಖೆಗಳಲ್ಲಿ ಅರ್ಜಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.khmanipal.com ಇಲ್ಲವೇ 7892208230 ಅಶೋಕ್ ಶೆಟ್ಟಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.

Last Updated : Jun 19, 2020, 6:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.