ETV Bharat / state

ಭಟ್ಕಳ: ಒಂದೂವರೆ ಕೋಟಿ ಹಣ ದುರುಪಯೋಗ; SBI ಬ್ಯಾಂಕ್‌ ಮ್ಯಾನೇಜರ್ ಪರಾರಿ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಟ್ಕಳದಲ್ಲಿಯ ಬಜಾರ ಶಾಖೆಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಟ್ಕಳ ಬಜಾರ ಶಾಖೆಯ ಮ್ಯಾನೇಜರ್ ಒಂದೂವರೆ ಕೋಟಿ ಹಣ ದುರುಪಯೋಗ ಪಡಿಸಿಕೊಂಡು ಪರಾರಿಯಾಗಿದ್ದಾರೆ. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗೆ ಹುಡುಕಾಟ ನಡೆಸಲಾಗುತ್ತಿದೆ.

bank manager who has misused one and half core bank's money
ಬ್ಯಾಂಕನ ಒಂದೂವರೆ ಕೋಟಿ ಹಣವನ್ನು ದುರುಪಯೋಗ ಪಡಿಸಿಕೊಂಡು ಮ್ಯಾನೇಜರ್ ಪರಾರಿ
author img

By

Published : Apr 23, 2022, 4:00 PM IST

ಭಟ್ಕಳ: ಎಸ್‌ಬಿಐ ಮ್ಯಾನೇಜರ್​ ಬ್ಯಾಂಕಿನ ಒಂದೂವರೆ ಕೋಟಿ ಹಣ ದುರುಪಯೋಗ ಮಾಡಿಕೊಂಡು ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಜಾರ ಶಾಖೆಯ ಮ್ಯಾನೇಜರ್ ಅನುಪ್ ಪೈ ಆರೋಪಿ. ಈತ ಮಂಗಳೂರಿನ ಬೋಳಪು ಗುಡ್ಡೆ ಕಾವೂರು ನಿವಾಸಿ ಎಂದು ತಿಳಿದು ಬಂದಿದೆ.

ಗ್ರಾಹಕರೊಂದಿಗೆ ಒಳ ಸಂಚು ಮಾಡಿಕೊಂಡು ಬ್ಯಾಂಕ್‌ನ ಸಿಸ್ಟಮ್ ಸಸ್ಪೆನ್ ಖಾತೆಗೆ ಖರ್ಚು ಹಾಕಿ ಬ್ಯಾಂಕ್‌ ಗ್ರಾಹಕರ ಖಾತೆಗೆ ಜಮಾ ಮಾಡುವ ಮೂಲಕ ಅಂದಾಜು ಒಂದೂವರೆ ಕೋಟಿ ರೂ ಹಣವನ್ನು ದುರುಪಯೋಗ ಮಾಡಿದ್ದಾನೆ ಎಂದು ಗೊತ್ತಾಗಿದೆ. ಆರೋಪಿ ವಾಸವಿದ್ದ ಭಟ್ಕಳ ರೈಲ್ವೆ ಸ್ಟೇಶನ್ ರೋಡ್ ಸಮೀಪದ ಬಾಡಿಗೆ ಮನೆಗೆ ಪೊಲೀಸರು ಭೇಟಿ ನೀಡಿದ ತನಿಖೆ ನಡೆಸುವ ವೇಳೆ ಆತ ಪರಾರಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕರ್ತವ್ಯನಿರತ ಮಹಿಳಾ ಎಸ್​​ಐಗೆ ಚಾಕುವಿನಿಂದ ಇರಿದ ವ್ಯಕ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.