ETV Bharat / state

ಮುರ್ಡೇಶ್ವರದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಶರಣು - ಭಟ್ಕಳ ಅಪರಾಧ ಸುದ್ದಿ

ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯಲ್ಲಿ ನಡೆದಿದೆ.

Suicide by a man tired of family strife
ಮೃತ ವ್ಯಕ್ತಿ
author img

By

Published : Dec 11, 2019, 9:49 PM IST

ಭಟ್ಕಳ: ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುರ್ಡೇಶ್ವರದ ನ್ಯಾಷನಲ್ ಕಾಲೋನಿಯಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ವ್ಯಕ್ತಿಯನ್ನು ಮೊಹಮ್ಮದ್​ ಇಬ್ರಾಹಿಂ (28) ಎಂದು ಗುರುತಿಸಲಾಗಿದೆ.

ಈತ ಮುರ್ಡೇಶ್ವರದಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ 7 ವರ್ಷದ ಹಿಂದೆ ಮದುವೆಯಾಗಿ ತನ್ನ ಮನೆಯಲ್ಲಿದ್ದ ಇಬ್ರಾಹಿಂ ಕೌಟುಂಬಿಕ ಕಲಹದ ಕಾರಣ ಕಳೆದ 2 ವರ್ಷದ ಹಿಂದೆ ಇಲ್ಲಿನ ನ್ಯಾಷನಲ್ ಕಾಲೋನಿಯ ಹಿರೇದೋಮಿಯ ನಾಗೇಶ ಕಾಂಪೌಂಡ್​ನಲ್ಲಿ ತನ್ನ ಹೆಂಡತಿ, ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂಬ ಮಾಹಿತಿ ಇದೆ.

ಆದ್ರೆ, ಮಂಗಳವಾರ ಸಂಜೆ 6 ರಿಂದ 8 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತನ ತಂದೆ ಮಕ್ದುಮ್ ಇಸ್ಮಾಯಿಲ್ ಇಬ್ರಾಹಿಂ ಶಿರೂರು ಅವರು ಮುರ್ಡೇಶ್ವರ ಠಾಣೆಗೆ ದೂರು ನೀಡಿದ್ದು, ಠಾಣಾ ಪಿ.ಎಸ್.ಐ. ಪುಟ್ಟಸ್ವಾಮಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ಭಟ್ಕಳ: ವ್ಯಕ್ತಿಯೋರ್ವ ಕೌಟುಂಬಿಕ ಕಲಹದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರದಂದು ತಾಲೂಕಿನ ಮುರುಡೇಶ್ವರದ ನ್ಯಾಷನಲ್ ಕಾಲೋನಿಯಲ್ಲಿ ವರದಿಯಾಗಿದೆ.Body:ಮೃತ ವ್ಯಕ್ತಿ ಮಹ್ಮದ ಇಬ್ರಾಹಿಂ (28) ಎಂದು ತಿಳಿದು ಬಂದಿದೆ. ಈತ ಮುರುಡೇಶ್ವರದದಲ್ಲಿ ರಿಕ್ಷಾ ಚಾಲಕನಾಗಿದ್ದನು. ಕಳೆದ 7 ವರ್ಷದ ಹಿಂದೆ ಮದುವೆಯಾಗಿ ತನ್ನ ಮನೆಯಲ್ಲಿದ್ದ ಈತನು ಮನೆಯಲ್ಲಿ ಸರಿಬಾರದ ಹಿನ್ನೆಲೆ
ಕಳೆದ 2 ವರ್ಷದ ಹಿಂದೆ ಮುರುಡೇಶ್ವರದ ನ್ಯಾಷನಲ್ ಕಾಲೋನಿಯ ಹಿರೇದೋಮಿಯ ನಾಗೇಶ ಕೌಂಪಾಂಡ ನಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಈತ ಮಂಗಳವಾರ ತನ್ನ ಕೌಟುಂಬಿಕ ಕಲಹದಿಂದ ಬೇಸತ್ತು ಮಂಗಳವಾರದಂದು ಸಂಜೆ 6 ರಿಂದ 8 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅಡುಗೆ ಕೋಣೆಯ ಮೇಲ್ಛಾವಣಿ ವೆಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಮನೆಗೆ ಬಂದ ಹೆಂಡತಿ ಗಂಡನ ನೇಣು ಬಿಗಿದುಕೊಂಡ ಸ್ಥಿತಿಯನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ಕರೆಯದೆ ಆಕೆಯೇ ಚಾಕುವಿನಿಂದ ವೆಲ್ ಕತ್ತರಿಸಿ ಮೃತ ಗಂಡನ ದೇಹವನ್ನು ಕೆಳಗೆ ಇಳಿಸಿದ್ದಾಳೆ. ನಂತರ ಮೃತ ದೇಹವನ್ನು ಮುರುಡೇಶ್ವರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರು ವ್ಯಕ್ತಿ ಮೃತ ಪಟ್ಟಿರುವ ಬಗ್ಗೆ ಖಚಿತ ಪಡಿಸಿದ್ದಾರೆ.

ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮ್ರತನ ತಂದೆ ಮಕ್ದುಮ್ ಇಸ್ಮಾಯಿಲ್ ಇಬ್ರಾಹಿಂ ಶಿರೂರು ಅವರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಠಾಣಾ ಪಿ.ಎಸ್.ಐ. ಪುಟ್ಟುಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.